ಗಾಯತ್ರಿ ಪತ್ತಿನ ಸಹಕಾರ ಮಂಡಳಕ್ಕೆ ರು. 36,253 ಪಾವತಿ
ಕನ್ನಡಪ್ರಭ ವಾರ್ತೆ ಹಾಸನ ಅ.10
ಗಾಯತ್ರಿ ಪತ್ತಿನ ಸಹಕಾರ ಸಂಘದಿಂದ 2012-13ನೇ ಸಾಲಿನ ನಿವ್ವಳ ಲಾಭದಲ್ಲಿ ಶೇ.2 ರಷ್ಟು ಸಹಕಾರ ಶಿಕ್ಷಣ ನಿಧಿ 36,253 ರು.ಗಳನ್ನು ರಾಜ್ಯ ಸಹಕಾರ ಮಹಾಮಂಡಳಕ್ಕೆ ಪಾವತಿಸಿದೆ.
ಸಹಕಾರ ಶಿಕ್ಷಣ ನಿಧಿ ಚೆಕ್ಕನ್ನು ಗಾಯತ್ರಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಎನ್. ಮೂರ್ತಿ ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಕಾರ್ಲೆ ಇಂದ್ರೇಶ್ ಅವರಿಗೆ ನೀಡಿದರು. ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ಟಿ.ದ್ಯಾವೇಗೌಡ, ಒಕ್ಕೂಟದ ಉಪಾಧ್ಯಕ್ಷ ಪಿ.ಎಲ್. ನಿಂಗರಾಜು, ಸಿಟಿ ಕೋ ಆಪರೇಟಿವ್ ಬ್ಯಾಂಕಿನ ಉಪಾಧ್ಯಕ್ಷ ಬಿ.ಶ್ರೀನಿವಾಸ ಹಾಗೂ ಗಾಯತ್ರಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮತ್ತು ಒಕ್ಕೂಟದ ಸಿಬ್ಬಂದಿ ವರ್ಗದವರು ಇದ್ದರು.