ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ತಾಲೂಕು ಡಿವೈಎಫ್ಐ ಸರ್ವ ಸದಸ್ಯರ ಸಭೆ

Rashmi Kasaragodu
Updated On : 10 Oct 2013, 11:18 am

ಸಕಲೇಶಪುರ: ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಸಕಲೇಶಪುರ ತಾಲೂಕು ವ್ಯಾಪ್ತಿಯ ಸರ್ವ ಸದಸ್ಯರ ಸಭೆ ನಡೆದು ಸಂಚಾಲನಾ ಸಮಿತಿಗೆ ಚಾಲನೆ ನೀಡಲಾಯಿತು.
ಡಿವೈಎಫ್ಐ  ಜಿಲ್ಲಾ ಕಾರ್ಯದರ್ಶಿ ಶಾವಲ್ ಹಮೀದ್ ಸಭೆ ಉದ್ಘಾಟಿಸಿ ಮಾತನಾಡಿ, ಸಾಮ್ರಾಜ್ಯಶಾಹಿಗಳ ವಿರುದ್ಧ ಕ್ರಾಂತಿಕಾರಿ ಹೋರಾಟ ಮಾಡಿ ನೇಣುಗಂಬಕ್ಕೇರಿದ ಭಗತ್ಸಿಂಗ್ರ ಆಶಯಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ 1980 ರಲ್ಲಿ ಪಂಜಾಬ್ನ ಲೂದಿಯಾನದಲ್ಲಿ ಸ್ಥಾಪನೆಗೊಂಡ ಡಿವೈಎಫ್ಐ ಸಂಘಟನೆ ಇಂದು ದೇಶಾದ್ಯಂತ 3 ಕೋಟಿಗೂ ಮೀರಿ ನೋಂದಾಯಿತ ಸದಸ್ಯತ್ವ ಹೊಂದಿರುವ ಏಕೈಕ ಅತಿ ದೊಡ್ಡ ಯುವಜನ ಸಂಘಟನೆಯಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
ರಸ್ತೆ, ಬೀದಿದೀಪ, ಕುಡಿಯುವ ನೀರು ಮುಂತಾದ ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಡುವುದರೊಂದಿಗೆ ಶ್ರಮದಾನ, ವಿಚಾರ ಸಂಕಿರಣ, ಕ್ರೀಡಾ ಚಟುವಟಿಕೆ ನಡೆಸುತ್ತಾ ಯುವಜನರನ್ನು ಸಮಾಜದ ಮುಖ್ಯವಾಹಿನಿಗೆ ತರುವಂಥ ಜಾಗೃತಿ ಕೆಲಸ ಮಾಡುತ್ತಿದೆ ಎಂದರು. ಅಲ್ಲದೇ ದೇಶದ ಐಕ್ಯತೆ, ಸಮಗ್ರತೆಗಾಗಿ ನಾನಾ ಕಾರ್ಯಕ್ರಮಗಳನ್ನು ರೂಪಿಸುತ್ತಾ, ಕೋಮುವಾದ, ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡುತ್ತ ಬಂದಿದೆ. ಇಂತಹ ಸಂಘಟನೆಯನ್ನು ಸಕಲೇಶಪುರದಲ್ಲಿ ಭಗತ್ಸಿಂಗ್ ಹೆಸರಿನಲ್ಲಿ ಉದ್ಘಾಟನೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದು ಹೇಳಿದರು.
ಡಿವೈಎಫ್ಐ ಜಿಲ್ಲಾಧ್ಯಕ್ಷ ಗಿರೀಶ್ ಮಾತನಾಡಿ,  ಜನಸಾಮಾನ್ಯರು, ರೈತರು, ಯುವಜನತೆ ತಮ್ಮ ತಮ್ಮ ಬೇಡಿಕೆಗಳಿಗಾಗಿ ಯಾವುದೇ ಪ್ರತಿಭಟನೆ, ಚಳವಳಿ ನಡೆಸಿದರೂ ಆಳುವ ಸರ್ಕಾರಗಳು ಕಿವಿಗೊಡುತ್ತಿಲ್ಲ. ಇನ್ನೊಂದು ಕಡೆ ಎಲ್ಲ ದಿನಸಿ ವಸ್ತುಗಳ ಬೆಲೆ ಏರಿಕೆಯನ್ನು  ತಡೆಗಟ್ಟುವಲ್ಲಿ ಸರ್ಕಾರಗಳು ಸಂಪೂರ್ಣ ವಿಫಲವಾಗಿದೆ. ಹಗರಣಗಳಿಂದಾಗಿ ಸಚಿವರ ತಲೆದಂಡ ನಡೆಯುತ್ತಿದೇ ವಿನಾ ಸೂಕ್ತ ತನಿಖೆಗೆ ಮುಂದಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಈ ಸಂಘಟನೆ ಯುವಜನತೆಯಲ್ಲಿ ಅರಿವು  ಮೂಡಿಸುವ ಕೆಲಸ ಮಾಡುತ್ತಿದೆ ಎಂದು ನುಡಿದರು. ಮುಖಂಡ ಬಸವರಾಜು ಸ್ವಾಗತಿಸಿದರು. ಹರೀಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement