ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪುಟಾಟಿಗಳಿಂದ ಒಡಿಸ್ಸಾ ಕಥಕ್ ನೃತ್ಯ ಪ್ರದರ್ಶನ

Rashmi Kasaragodu
Updated On : 10 Oct 2013, 11:19 am

ಕ.ಪ್ರ. ವಾರ್ತೆ೤ ಅರಸೀಕೆರೆ೤ ಅ. 10
ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲೆ ಆವರಣದಲ್ಲಿ  ಪ್ರಸನ್ನ ಗಣಪತಿ ಭಕ್ತ ಮಂಡಳಿ ಗಣೇಶೋತ್ಸವ ಅಂಗವಾಗಿ ಏರ್ಪಡಿಸಿದ್ದ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮ ದೇಶೀಯ ಕಲಾ ಪ್ರಕಾರಗಳು ಅನಾವರಣಗೊಳ್ಳುವ ವೇದಿಕೆಯಾಗಿ ಮಾರ್ಪಡುವ ಮೂಲಕ ಪ್ರೇಕ್ಷಕರನ್ನು ನಿಬ್ಬೆರಾಗುವಂತೆ ಮಾಡಿತು.
 ಮೂರು ಗಂಟೆ ಕಾಲ ನಡೆದ ಈ  ಉತ್ಸವದಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೂರೈವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ಲೋಕವನ್ನು ವೈಭವವಾಗಿ ಅನಾವರಣಗೊಳಿಸಿತು.
 ದೇಶ-ವಿದೇಶಗಳ ನೂರಾರು ವಿದ್ಯಾರ್ಥ್ಥಿಗಳು ತಂಡೋಪತಂಡವಾಗಿ ಒಂದೇ ವೇದಿಕೆಯಲ್ಲಿ ನಡೆಸಿಕೊಟ್ಟ ನಾನಾ ರಾಜ್ಯಗಳ ಕಲೆ ಜನಪದ ನಾಟ್ಯ ಪ್ರಕಾರಗಳು ಮೇರೆದಿದ್ದ ಪ್ರೇಕ್ಷಕರ ಮನಸೂರೆಗೊಂಡು ಬೆರಗಾಗುವಂತೆ ಮಾಡಿತು.
ದೇಶದ ಸಾಂಸ್ಕೃತಿಕ ಕಲಾ ಸಿರಿವಂತಿಕೆ ಸಾರಿದವು. ಅಷ್ಟೇ ಅಲ್ಲ ನೃತ್ಯಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ತೊಟ್ಟಿದ್ದ ವೇಷಭೂಷಣ ಕಾರ್ಯಕ್ರಮದ ಕಳೆಯನ್ನು ಮತ್ತಷ್ಟು ರಂಗೇರುವಂತೆ ಮಾಡಿತು.
ರಾಜ್ಯದ ಭರತನಾಟ್ಯ ಸೇರಿದಂತೆ ಮೋಹಿನಿಆಟ್ಟಂ, ಆಂಧ್ರದ  ಬಂಜಾರನೃತ್ಯ, ಮಹಾರಾಷ್ಟ್ರದ ಲಾವಣಿ, ಕೇರಳದ ಒಪ್ಪಣಂ, ಒಡಿಸ್ಸಾದ ಕಥಕ್, ಶ್ರೀಲಂಕಾದ ಕ್ಯಾಂಡಿಯನ್ ಮಣಿಪುರದ ಸ್ಟಿಕ್ ಡ್ಯಾನ್ಸ್ ಹಾಗೂ ದೋಲಚಲಂ ಹಾಗೂ ಬಡಗುತಿಟ್ಟು ಮತ್ತು ತೆಕ್ಕುತೆಕ್ಕಿನ ಯಕ್ಷಗಾನ ಪ್ರದರ್ಶನ ಹಾಗೂ  ನವದುರ್ಗಿಯರ ಸಮೂಹ ನೃತ್ಯ ನೋಡುಗರ ಮನಸೆಳೆದವು.
 ನಾನಾ ಕಲಾ ಪ್ರಕಾರಗಳನ್ನು ಒಂದೇ ವೇದಿಕೆಯಲ್ಲಿ ನೋಡಿ ಆನಂದಿಸುವ ಸುಯೋಗ ದೊರೆತಿದ್ದಕ್ಕಾಗಿ ಕಲಾ ರಸಿಕರು ತೀವ್ರ ಸಂತೋಷ ವ್ಯಕ್ತ ಪಡಿಸಿದರು. ಅಂತ್ಯದವರೆಗೂ ಕಾರ್ಯಕ್ರಮವನ್ನು ವೀಕ್ಷಿಸಿದ ಪ್ರೇಕ್ಷಕರು ಅಳಿವಿನ ಅಂಚಿಗೆ ಸರಿಯುತ್ತಿರುವ ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಅರಿತು ಅದನ್ನ ಪುನರುಜ್ಜೀವನಗೊಳಿಸಲು ಇಂತಹ ಕಾರ್ಯಕ್ರಮಗಳ ಅಗತ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement