ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಶಾರದಾ ಶರವನ್ನವರಾತ್ರಿ

Rashmi Kasaragodu
Updated On : 10 Oct 2013, 11:20 am

ಬೇಲೂರು: ಪಟ್ಟಣದ ಶಂಕರ ಮಠದಲ್ಲಿ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.
ವಿಶ್ವವಿಖ್ಯಾತ ಚನ್ನಕೇಶವಸ್ವಾಮಿ ದೇವಾಲಯ ಮುಂಭಾಗವಿರುವ ಶೃಂಗೇರಿ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನದ ಶಂಕರ ಮಠದಲ್ಲಿ ಭಾರತೀತೀರ್ಥ ಮಹಾಸ್ವಾಮಿಗಳವರ ಪರಮಾನುಗ್ರದಿಂದ ವಿಜಯನಾಮ ಸಂವತ್ಸರದ ಶರನ್ನವರಾತ್ರೋತ್ಸವವನ್ನು ಅಶ್ವಯುಜ ಶುದ್ಧ ಪ್ರತಿಪದ ಅ.5 ರಿಂದ  ಅ. 13 ರ ಭಾನುವಾರದವರೆಗೆ ಶಾರದಾ ಪರಮೇಶ್ವರಿಯ ಪವಿತ್ರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ವಿಶೇಷ ಮಹಾಪೂಜೆ, ಹೋಮ, ವಿಶೇಷ ಅಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಶರನ್ನವರಾತ್ರಿ ಪ್ರಯುಕ್ತ ಶಾರದಾಂಬ ದೇಗುಲದಲ್ಲಿ ಸನ್ನಿದಿಯಲ್ಲಿ ಮಹಾಗಣಪತಿ ಹೋಮ, ಗಾಯತ್ರಿ ಭಜನಾ ಮಂಡಳಿಯಿಂದ ಭಕ್ತಿಗೀತೆ, ನವಗ್ರಹಹೋಮ, ಲಲಿತ ಹೋಮ ನಡೆಸಲಾಯಿತು.
ಅ.11 ಶುಕ್ರವಾರ ಸಪ್ತಮಿ ಮೂಲಾ ನಕ್ಷತ್ರದಂದು ವಿದ್ಯಾಬುದ್ಧಿ ಅನುಗ್ರಹಕ್ಕಾಗಿ ಸರಸ್ವತಿ ಹೋಮ, ಸಂಜೆ ವೇ.ಮೂ. ಕೆ.ಆರ್. ಮಂಜುನಾಥ್, ನಳಿನಾ ಧನ್ಯ ಅವರಿಂದ ಗಮಕವಾಚನ ನಡೆಯಲಿದೆ. ಅ. 12 ರ ಶನಿವಾರ ಅಷ್ಟಮಿ ಪೂರ್ವಾಷಾಡ ನಕ್ಷತ್ರದಂದು ಸರ್ವ ಶತ್ರು ನಾಶ, ಸರ್ವ ಸಿದ್ಧಿಗಾಗಿ ಚಂಡಿಕಾ ಹೋಮ ಹಾಗೂ ಸಂಜೆ 7 ಗಂಟೆಗೆ ಬಿ.ಆರ್. ಮಾಲಾ ಅವರಿಂದ ಶಾಸ್ತ್ರೀಯ ಸಂಗೀತಾ, ಅ. 13 ರ ಭಾನುವಾರ ನವಮಿ ಉತ್ತರಾಷಾಡ ನಕ್ಷತ್ರದಂದು ಬೆಳಿಗ್ಗೆ ಆಯುದ್ಧ ಪೂಜೆ ಕಾರ್ಯಕ್ರಮ ನಡೆಯಲಿದೆ.  
ಹೋಮ ಪ್ರಾಯೋಜಕತ್ವ ಸೇವಾಕರ್ತರು ಶ್ರೀಮಠಕ್ಕೆ ಒಂದು ದಿನ ಮುಂಚಿತವಾಗಿ ತಿಳಿಸಿ ಕಾಣಿಕೆ ಅರ್ಪಿಸ ಬಹುದು, ಹೋಮ ಸಂಕಲ್ಪ, ಅಭಿಷೇಕ, ರುದ್ರಾಭಿಷೇಕ ಇತ್ಯಾದಿ ಸೇವೆ ಸಲ್ಲಿಸಬಹುದು.
 ಮಠದಲ್ಲಿ ಪ್ರತಿದಿನ ವೇ.ಮೂ. ಕೆ.ಆರ್ ಮಂಜುನಾಥ್ ಅವರಿಂದ ವೇದಾಧ್ಯಯನ ನಡೆಯುತ್ತಿದ್ದು ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಸಲಹಾ ಸಮಿತಿ ಅಧ್ಯಕ್ಷ ಜಿ.ಕೆ ರವೀಂದ್ರ, ಕಾರ್ಯದರ್ಶಿ ಆರ್ ಸುಬ್ರಹ್ಮಣ್ಯ ತಿಳಿಸಿದ್ದು ಹೆಚ್ಚಿನ ವಿವರಗಳಿಗಾಗಿ ಮೊ 9448940945 ಸಂಪರ್ಕಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement