ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸಕಾರಾತ್ಮಕ ಮನೋಭಾವನೆ ರೂಢಿಸಿಕೊಳ್ಳಿ'

Rashmi Kasaragodu
Updated On : 10 Oct 2013, 11:22 am

ಹಾಸನ: ವಿದ್ಯಾರ್ಥಿಗಳು ಸಕಾರಾತ್ಮಕ ಮನೋಭಾವನೆ ರೂಢಿಸಿಕೊಂಡು ಬದುಕಿನಲ್ಲಿ  ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಬ್ರಹ್ಮಕುಮಾರಿ ಸಮಾಜದ ಬಾಬಣ್ಣ ಹೇಳಿದರು.
 ಸರ್ಕಾರಿ ವಿಜ್ಞಾನ ಕಾಲೇಜಿನ ಸಾಂಸ್ಕೃತಿಕ ವೇದಿಕೆ ಹಾಗೂ ಅನನ್ಯ ಟ್ರಸ್ಟನಿಂದ  ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥ್ಥಿಗಳು ತಮ್ಮ ಬದುಕಿನಲ್ಲಿ ಉದ್ಭವಿಸುವ ದ್ವಂದ್ವಗಳು, ಅನಿಶ್ಚಿತತೆಗಳು, ಆತಂಕಗಳ ಬಗ್ಗೆ ಮೂಲಕಾರಣ ಹುಡುಕಿ ಅವುಗಳನ್ನು ನಿವಾರಣೆ ಮಾಡಿಕೊಳ್ಳ ಬೇಕು ಎಂದು ತಿಳಿಸಿದರು.
ಮಕ್ಕಳ ನಾಟಕ ರಚನೆ ಕಾರ್ಯಕ್ರಮ
ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬೆಂಗಳೂರಿನ ಹಂಸಲೇಖ ದೇಸೀ ಕಾಲೇಜು ವತಿಯಿಂದ ಮಕ್ಕಳ ನಾಟಕ ರಚನೆ ಕಾರ್ಯಕ್ರಮವನ್ನು ಕಿರು ನಾಟಕ ವರ್ಷ 2013-14 ಶೀರ್ಷಿಕೆಯಡಿ  ಅ. 31ರಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಆಯೋಜಿಸಲಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್.ನಾಗರಾಜ್ ತಿಳಿಸಿದ್ದಾರೆ. ಜಿಲ್ಲೆಯ ಸಾಹಿತ್ಯಾಸಕ್ತರು, ಬರಹಗಾರರು ಮತ್ತು ಮುಖ್ಯವಾಗಿ ಮಕ್ಕಳ ನಾಟಕ ರಚನೆಯಲ್ಲಿ ಆಸಕ್ತಿ ಇರುವವರು ಭಾಗವಹಿಸಬಹುದು.  ಅಕ್ಟೋಬರ್ 25 ರೊಳಗಾಗಿ ಪರಿಷತ್ತಿನ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ. ವಿವರಗಳನ್ನು ಪರಿಷತ್ತಿನ ಕಚೇರಿ ವೇಳೆಯಲ್ಲಿ ಪಡೆಯಬಹುದು.
ಲಾರಿ ಕ್ಲೀನರ್ ನಾಪತ್ತೆ
ಅರಕಲಗೂಡು: ತಾಲೂಕಿನ ಮಳಲಿಕೆರೆ ದಾಖಲೆ ಸಾಲುಗೊಪ್ಪಲು ಗ್ರಾಮದ ಎಸ್.ಬಿ. ನಾಗರಾಜು ಎಂಬುವರ ಅಕ್ಕನ ಮಗ  ಧರ್ಮ (21) ಇತ್ತೀಚೆಗೆ ನಾಪತ್ತೆಯಾಗಿದ್ದಾನೆ. ಬೆಂಗಳೂರು ಯಶವಂತಪುರ ಕೈಗಾರಿಕಾ ವಲಯದಲ್ಲಿರುವ ನಾಗರಾಜು ಎಂಬುವರ ಬಳಿ ಲಾರಿ  ಕ್ಲೀನರ್ ಆಗಿದ್ದು, ಸೆ. 11ರಂದು ಲಾರಿ ಡ್ರೈವರ್ ಜೊತೆ ಕೆಇಬಿ ಟ್ರಾನ್ಸ್ಫಾರ್ಮರ್ಗಳನ್ನು ಲೋಡ್ಮಾಡಿಕೊಂಡು ದಾವಣಗೆರೆಗೆ ಹೋಗಿದ್ದಾಗ ರಾತ್ರಿ ಸಿರಾ ರಸ್ತೆಯಲ್ಲಿರುವ ಕಳ್ಳಂಬೆಳ್ಳ ಹತ್ತಿರ ಹೋಟೆಲ್ವೊಂದರಲ್ಲಿ ಊಟ ಮಾಡಿ ಲಾರಿಯಲ್ಲಿಯೇ ಮಲಗಿದ್ದಾನೆ. ಆದರೆ  ರಾತ್ರಿ 3 ಗಂಟೆಯಿಂದ ಕ್ಲೀನರ್ ಧರ್ಮ ನಾಪತ್ತೆಯಾಗಿದ್ದಾನೆ. ಎಣ್ಣೆಗೆಂಪು ಮೈಬಣ್ಣ, ಕೋಲುಮುಖ, ಸಾಧಾರಣ ಮೈಕಟ್ಟು, 5.3 ಅಡಿ ಎತ್ತರ, ಹಸಿರು ಬಿಳಿ ಅಡ್ಡಗೆರೆವುಳ್ಳ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದನು ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಧರ್ಮನ ಬಗ್ಗೆ ಮಾಹಿತಿ ದೊರೆತಲ್ಲಿ ಎಸ್.ಬಿ. ನಾಗರಾಜು ಮೊ. 9902775567 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement