24ಕ್ಕೆ ತೆರೆಯುವ ಹಾಸನಾಂಬ ದೇವಾಲಯ ಬಾಗಿಲು
ಹಾಸನ: ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ನಗರದ ಪ್ರಸಿದ್ಧ ಶ್ರೀ ಹಾಸನಾಂಬ ದೇವಾಲಯದ ಬಾಗಿಲು ಅ.24 ರಂದು ಮಧ್ಯಾಹ್ನ 12.30ಕ್ಕೆ ತೆಗೆಯಲಿದ್ದು, ನ.5ರಂದು ಮಧ್ಯಾಹ್ನ 12.30ಕ್ಕೆ ಮುಚ್ಚಲಾಗುತ್ತದೆ. ಈ ಬಾರಿಯೂ 250 ನೀಡಿದರೆ ವಿಶೇಷ ದರ್ಶನ ಪಡೆಯಬಹುದು. ತಮಿಳುನಾಡಿನ ದೇವಾಲಯಗಳಲ್ಲಿ ನೀಡುವಂತೆ ಹಾಸನಾಂಬೆ ದರ್ಶನಕ್ಕೆ ಬರುವ ಭಕ್ತರಿಗೆ ಪುಳಿಯೋಗರೆ ಹಾಗೂ ಪೊಂಗಲ್ ವಿತರಣೆ ಈ ವರ್ಷದ ವಿಶೇಷ. ಲಾಡು ಕೂಡ ಎಂದಿನಂತೆ ಲಭ್ಯ. ಸುವ್ಯವಸ್ಥಿತವಾಗಿ ದೇವಿಯ ದರ್ಶನ ಪಡೆಯಲು ಪೊಲೀಸ್, ಹೊಂಗಾರ್ಡ್ ಮತ್ತು ಕಂದಾಯ ಇಲಾಖೆಯ 200 ಅಧಿಕಾರಿಗಳು ಕಾರ್ಯ ನಿರ್ವಹಿಸುವರು.