ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮೀಣ ಕೃಷಿ ಕಾರ್ಯಾನುಭವ ವಿಶೇಷ ಶಿಬಿರ

Rashmi Kasaragodu
Updated On : 11 Oct 2013, 11:20 am

ಹಾಸನ: ತಾಲೂಕಿನ ಮರ್ಕುಲಿ ಕೊಪ್ಪಲು ಗ್ರಾಮದಲ್ಲಿ ಮಣ್ಣು ಆರೋಗ್ಯ ಆಂದೋಲನ ಕಾರ್ಯಕ್ರಮ ಹಾಗೂ ಕೃಷಿ ಅರ್ಥಶಾಸ್ತ್ರ ಕಾರ್ಯಕ್ರಮ ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದ ಅಡಿಯಲ್ಲಿ ಹಾಸನ ಕೃಷಿ ಮಹಾವಿದ್ಯಾಲಯ ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ಆಶ್ರಯದಲ್ಲಿ ನಡೆಯಿತು. ಗ್ರಾಮ ಪಂಚಾಯಿತಿ ಸದಸ್ಯ ರಂಗ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಂನ್ಮೂಲ ವ್ಯಕ್ತಿ ಡಾ. ಜಿ.ಜಿ. ಕಾದಳ್ಳಿ ಮಣ್ಣು ಪರೀಕ್ಷೆ ಮಹತ್ವ ವಿವರಿಸಿದರು. ಡಾ. ಆದರ್ಶ ಮಾತನಾಡಿ, ಮಣ್ಣಿನ ಸಮಗ್ರ ಪೋಷಕಾಂಶಗಳ ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಅಧಿಕಾರಿ ಯೋಗಾನಂದ ಲಘು ಪೋಷಕಾಂಶಗಳ ಮಹತ್ವದ ಕುರಿತು ವಿವರಿಸಿದರು. ಡಾ. ಅರವಿಂದಕುಮಾರ್ ತೆಂಗು ಬೆಳೆ ವಿಮೆ ಬಗ್ಗೆ ಸವಿವರವಾಗಿ ವಿವರಿಸಿದರು. ಡಾ ಜಿ.ಎಂ. ಗಡ್ಡಿ ಕೃಷಿ ಮಾರಾಟದ ಬಗ್ಗೆ ಮಾಹಿತಿ  ನೀಡಿದರು. ವ್ಯವಸ್ಥಾಪಕ ಪ್ರವೀಣ್, ಸತೀಶ್ ಹಾಗೂ ವಿನೋದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement