ಜಿಪ್ಸಂ ಗೊಬ್ಬರ ತೂಕದಲ್ಲಿ ಮೋಸ
ಸಕಲೇಶಪುರ: ಕೃಷಿ ಇಲಾಖೆ ಪೂರೈಸಿದ್ದ ಜಿಪ್ಸಂ ಗೊಬ್ಬರ ತೂಕದಲ್ಲಿ ಭಾರಿ ವ್ಯತ್ಯಾಸವಿದೆ ಎಂದು ಕ್ಯಾನಹಳ್ಳಿ ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದ ಭತ್ತದ ಗದ್ದೆಗಳಿಗೆ ಹಾಗೂ ಕಾಫಿ ತೋಟಗಳಿಗೆ ಮೇಲುಗೊಬ್ಬರವಾಗಿ ಉಪಯೋಗಿಸಲಾಗುವ ಜಿಪ್ಸಂನ್ನು ಸ್ಥಳೀಯ ಕೃಷಿ ಇಲಾಖೆ 50 ಕೆ.ಜಿ ತೂಕವುಳ್ಳ 295 ಚೀಲವನ್ನು 95 ರು.ನಂತೆ ರೈತರಿಗೆ ಪೂರೈಸಲಾಗಿದೆ. ಆದರೆ ಪ್ರತಿಚೀಲ ಗೊಬ್ಬರದಲ್ಲಿ 30 ರಿಂದ 35 ಕೆ.ಜಿ ಜಿಪ್ಸಂ ಗೊಬ್ಬರವಿದ್ದು ಗ್ರಾಮಸ್ಥರಿಗೆ ಮೋಸ ಮಾಡಲಾಗಿದೆ ಎಂದು ದೂರಿದ್ದಾರೆ. ತೂಕದಲ್ಲಿ ಜಿಪ್ಸಂ ಕಡಿಮೆ ಬಂದಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಜಂಟಿ ಕೃಷಿ ನಿರ್ದೇಶಕರಿಗೆ ದೂರು ನೀಡಿದ್ದು ಜಿಪ್ಸಂ ಪೂರೈಸಿರುವ ಮೈಸೂರಿನ ಕಂಪನಿ ಲೋಪ ಸರಿಪಡಿಸುವ ಬಗ್ಗೆ ಹೇಳಿಕೆ ನೀಡಿದೆ.