ಜಿಲ್ಲೆಗೆ ಆವರಿಸಿರುವ ಕಾಲುಬಾಯಿ ಜ್ವರ
ಪಿ.ರವಿಕುಮಾರ್
ಹಾಸನ: ಜಾನುವಾರುಗಳಿಗೆ ಕಂಠಕವಾಗಿರುವ ಕಾಲು ಬಾಯಿ ಜ್ವರ ಜಿಲ್ಲೆಗೂ ಆವರಿಸಿದ್ದು, ಸುಮಾರು 8ಕ್ಕೂ ಹೆಚ್ಚು ರಾಸುಗಳು ಮೃತಪಟ್ಟಿವೆ. ಇದರಿಂದ ಜಾನುವಾರುಗಳ ನಂಬಿಕೊಂಡು ಜೀವನ ಸಾಗಿಸುತ್ತಿರುವ ರೈತ ಆತಂತಕ್ಕೆ ಒಳಗಾಗಿದ್ದಾನೆ.
ಜಿಲ್ಲೆಯಲ್ಲಿ 87 ಹಸುಗಳಿಗೆ ಕಾಲುಬಾಯಿ ರೋಗ ಕಾಣಿಸಿಕೊಂಡಿದ್ದು, ಕೇವಲ ಒಂದೆರಡು ಹಸುಗಳಿಗೆ ಈ ರೋಗ ಆವರಿಸಿ ಸಾವನ್ನಪ್ಪಿವೆ ಎಂದು ಪಶುಸಂಗೋಪನೆ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಅರಕಲಗೂಡು ತಾಲೂಕಿನ ಬೆಳವಾಡಿ ಗ್ರಾಮ ಸೇರಿದಂತೆ ಇತರೆ ಗ್ರಾಮಗಳಲ್ಲಿ ಸುಮಾರು 8 ಕ್ಕೂ ಹೆಚ್ಚು ಹಸುಗಳು ಸಾವಿಗೀಡಾಗಿವೆ. ರಾಜ್ಯದಲ್ಲಿ ಅತೀ ಹೆಚ್ಚು ಜಾನುವಾರುಗಳನ್ನು ಹೊಂದಿರುವ ಜಿಲ್ಲೆಗಳ ಪೈಕಿ ಜಿಲ್ಲೆಯು 3ನೇ ಸ್ಥಾನದಲ್ಲಿ ಇದ್ದು, ಹಸು ಮತ್ತು ಎಮ್ಮೆಗಳು ಸೇರಿದಂತೆ ಜಿಲ್ಲೆಯಲ್ಲಿ 7.75 ಲಕ್ಷ ಜಾನುವಾರುಗಳಿದ್ದಾವೆ.
ಹೆಚ್ಚು ಕೃಷಿ ಪ್ರದೇಶ ಹಾಗೂ ಪಶುಸಂಗೋಪನೆ ಹೆಚ್ಚಾಗಿ ಜಿಲ್ಲೆಯಲ್ಲಿ ಮಾಡುವುದರಿಂದ ಜಾನುವಾರುಗಳ ಸಂಖ್ಯೆ ಹೆಚ್ಚಿದೆ. ಇದೀಗ ಜಿಲ್ಲೆಗೆ ಕಾಲುಬಾಯಿ ರೋಗ ಆವರಿಸಿಕೊಂಡಿರುವುದರಿಂದ ಇದು ಮತ್ತಷ್ಟು ಹರಡುವ ಮುನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ರೈತರು ಒತ್ತಾಯಿದ್ದಾರೆ.
ಈ ಹಿಂದೆ ಜಿಲ್ಲೆಯಲ್ಲಿ ಬರದಿಂದ ಜಾನುವಾರುಗಳು ಮೇವಿಲ್ಲದೆ ಹಾಗೂ ಕುಡಿಯಲು ನೀರಿಲ್ಲದೆ ಬಡಕಲಾಗಿದ್ದವು. ಆಗ ರೈತರು ಜಾನುವಾರುಗಳನ್ನು ಮಾರುವಂತಹ ಪರಿಸ್ಥಿತಿ ತಂದಿತ್ತು. ವಿಪರ್ಯಾಸ ಅಂದ್ರೆ ಈ ಬಾರಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿ ಕುಡಿಯುವ ನೀರು ಹಾಗೂ ಮೇವಿನ ಅನುಕೂಲವಾಗಿದ್ದರೆ ಕಂಠಕ ಪ್ರಾಯವಾಗಿರುವ ಕಾಲುಬಾಯಿ ರೋಗ ವ್ಯಾಪಿಸಿರುವುದರಿಂದ ಅನ್ನದಾನ ಮತ್ತಷ್ಟು ಕುಗ್ಗಿದ್ದಾನೆ.
ಪಶುಸಂಗೋಪನಾ ಇಲಾಖೆಯ ಅಂಕಿ ಅಂಶದ ಪ್ರಕಾರ 87 ಹಸುಗಳಿಗೆ ಕಾಲುಬಾಯಿ ರೋಗ ತಗುಲಿದ್ದು, 2 ಜಾನುವಾರುಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ರೋಗಪೀಡಿತ ರಾಸುಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಕಾಣಿಸಿಕೊಂಡಿರುವ ಕಾಲುಬಾಯಿ ರೋಗ ನಿಯಂತ್ರಣಕ್ಕೆ ಬಾರದ ಕಾರಣ ರೈತರು ಮತ್ತು ಜಾನುವಾರು ಮಾಲೀಕರನ್ನು ಕಂಗೆಡಿಸಿದೆ.
ಪಶುಸಂಗೋಪನಾ ಇಲಾಖೆಯಲ್ಲಿನ ಮಾಹಿತಿ ಪ್ರಕಾರ 87 ಹಸುಗಳಿಗೆ ಕಾಲುಬಾಯಿ ರೋಗ. ಆದರೆ ಈ ಮಾಹಿತಿಗೂ ಮೀರಿ ನೂರಾರು ಹಸುಗಳಿಗೆ ಈ ರೋಗ ಕಾಣಿಸಿಕೊಂಡು ಸಾವಿನ ಹಂಚಿನ್ನು ತಲುಪಿದ್ದಾವೆ. ಒಂದು ವಾರದ ಅಂತರದಲ್ಲಿ ಅರಕಲಗೂಡು ತಾಲೂಕು ಒಂದರಲ್ಲೇ ಸುಮಾರು 8ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿದ್ದಾವೆ. ಜೊತೆಗೆ ಜಿಲ್ಲೆಯಲ್ಲಿ ಇರುವಂತಹ ಜಾನುವಾರುಗಳಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ಹಾಕದಿರುವುದು ರೋಗ ಮತ್ತಷ್ಟು ಹರಡುವ ಅತಂಕ ರೈತರನ್ನು ಕಾಡುತ್ತಿದೆ.
ಜಿಲ್ಲೆಯಲ್ಲಿ ಹೆಚ್ಚಾಗಿ ಹೈನುಗಾರಿಕೆ ನಡೆಯುತ್ತಿರುವುದರಿಂದ ರೋಗ ಹರಡಿರುವುದರಿಂದ ರೈತರನ್ನು ಮತ್ತಷ್ಟು ಭಯದಲ್ಲಿ ಮುಳುಗಿಸಿದೆ. ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು ರೋಗ ನಿಯಂತ್ರಣಕ್ಕೆ ತರಬೇಕಾಗಿದೆ.
ಜಿಲ್ಲೆಯಲ್ಲಿ ಜಾನುವಾರುಗಳಿಗೆ ಕಾಲುಬಾಯಿ ರೋಗ ಆವರಿಸಿರುವುದರಿಂದ ರೈತರ ಕೈಕಟ್ಟಿ ಹಾಕಿದಂತಾಗಿದೆ. ಈ ಹಿಂದೆ ಚಪ್ಪೆ ರೋಗ ಕಾಣಿಸಿಕೊಂಡು ಜಾನುವಾರುಗಳಿಗೆ ಕಂಠಕವಾಗಿತ್ತು. ಆದರೆ, ಈಗ ಕಾಲುಬಾಯಿ ರೋಗ ಕೂಡಾ ಆವರಿಸಿರುವುದರಿಂದ ಜಾನುವಾರುಗಳ ಜೀವಕ್ಕೆ ಕುತ್ತು ಬಂದಿದೆ. ಪಶುಸಂಗೋಪನಾ ಇಲಾಖೆಯು ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕಬೇಕು.
ಟಿ ರಂಗೇಗೌಡ, ರೈತ
ಕಾಲುಬಾಯಿ ರೋಗದಿಂದ ಸಾವನ್ನಪ್ಪಿರುವ ರಾಸುಗಳು ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು ಹಾಗೂ ರೋಗ ವೇಗವಾಗಿ ಹರಡುತ್ತಿರುವುದರಿಂದ ಇಲಾಖೆಯ ರೋಗ ನಿಯಂತ್ರಣಕ್ಕೆ ಕ್ರಮಕೈಗೊಂಡು ಸಾವಿನ ಅಂಚಿನಲ್ಲಿ ಇರುವಂಥ ಜಾನುವಾರುಗಳನ್ನು ಸಂರಕ್ಷಿಸಬೇಕು.
ಟಿ ಮಹದೇವ, ರೈತ