ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಡಿಪೋ ಮುಂಭಾಗ ಚಾಲಕರು, ನಿರ್ವಾಹಕರ ಪ್ರತಿಭಟನೆ

Rashmi Kasaragodu
Updated On : 11 Oct 2013, 11:21 am

ಚನ್ನರಾಯಪಟ್ಟಣ: ರಾಜ್ಯ ಸಾರಿಗೆ ಸಂಸ್ಥೆ ಚನ್ನರಾಯಪಟ್ಟಣ ಘಟಕದ ಬಸ್ಸೊಂದು ತಾಂತ್ರಿಕ ಕಾರಣದಿಂದ ಅಪಘಾತಕ್ಕೀಡಾದ ಹಿನ್ನೆಲೆಯಲ್ಲಿ ಪಟ್ಟಣದ ಬಸ್ ಡಿಪೋದಲ್ಲಿ ಚಾಲಕರು ಹಾಗೂ ನಿರ್ವಾಹಕರು ತಮಗೆ ಗುಣಮಟ್ಟದ ಬಸ್ಗಳನ್ನು ನೀಡುವಂತೆ ಆಗ್ರಹಿಸಿ ಧರಣಿ ನಡೆಸಿದರು.
 ಶುಕ್ರವಾರ ಮುಂಜಾನೆ ಬಸ್ ಡಿಪೋ ಎದುರು ತಾವು ಕರ್ತವ್ಯಕ್ಕೆ ಹಾಜರಾಗುವುದಿಲ್ಲ.ತಮಗೆ ಗುಣಮಟ್ಟದ ಬಸ್ಗಳನ್ನು ನೀಡಲು ಕಳೆದ 6 ತಿಂಗಳಿಂದ ಮನವಿ ಮಾಡಿದರೂ ಕೇಳುವವರಿಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ ಚಾಲಕರು ಹಾಗೂ ನಿರ್ವಾಹಕರು ಒಂದು ಗಂಟೆಗೂ ಅಧಿಕ ಸಮಯ ಬಸ್ ಸಂಚಾರವನ್ನು ಸ್ಥಗಿತಗೊಳಿಸಿ ಧರಣಿ ನಡೆಸಿದರು.
 ಗುರುವಾರ ಬೆಳ್ಳೂರು ಕ್ರಾಸ್ ಬಳಿ ಬಸ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಘಟಕದಲ್ಲಿ ದೂರಕ್ಕೆ ತೆರಳುವ ವಾಹನಗಳೂ ಕೂಡ ಹಳೆಯ ಮಾದರಿಯ ಬಸ್ಗಳಾಗಿದ್ದು, ಅವುಗಳನ್ನು ರಿಪೇರಿ ಮಾಡಲು ಸಾಧ್ಯವಿಲ್ಲದಿದ್ದರೂ ತಾವು ಅವುಗಳನ್ನೇ ಓಡಿಸಬೇಕಾಗಿದೆ ಎಂದು ಚಾಲಕರು ತಮ್ಮ  ಅಳಲನ್ನು ತೋಡಿಕೊಂಡರು.  ಧರಣಿ ನಿರತ ಸ್ಥಳಕ್ಕೆ ಶಾಸಕ ಬಾಲಕೃಷ್ಣ ಬೇಟಿ ನೀಡಿ ಸಂಸ್ಥೆಯ ಸಿಬ್ಬಂದಿ ಅಳಲನ್ನು ಆಲಿಸಿ ಕೂಡಲೇ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರ ಜತೆ ಚರ್ಚಿಸಿ ಹೊಸ ಬಸ್ಗಳನ್ನು ನೀಡುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನಲೆಯಲ್ಲಿ ಚಾಲಕ ಹಾಗೂ ನಿರ್ವಾಕರು ಕರ್ತವ್ಯಕ್ಕೆ ಹಾಜರಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement