ನಗರ ಸಾರಿಗೆ ಆರಂಭಿಸಲು ಒತ್ತಾಯ
ಸಕಲೇಶಪುರ: ಪಟ್ಟಣದಲ್ಲಿ ನಗರ ಸಾರಿಗೆ ಪ್ರಾರಂಭಿಸುವಂತೆ ನಾನಾ ಸಂಘಟನೆಗಳ ಮುಖಂಡರು ಒತ್ತಾಯಿಸಿದ್ದಾರೆ. ಪಟ್ಟಣದ ಹೊರವಲಯದಲ್ಲಿ ಹೊಸ ಬಸ್ ನಿಲ್ದಾಣವಾದ ನಂತರ ಗ್ರಾಮಾಂತರ ಪ್ರದೇಶದ ಜನತೆ ತೀವ್ರ ತೊಂದರೆಯಾಗಿದ್ದು ತಾಲೂಕು ಕಚೇರಿ, ಉಪವಿಭಾಗಧಿಕಾರಿ ಕಚೇರಿ ಸೇರಿದಂತೆ ಪ್ರಮುಖ ವಾಣಿಜ್ಯ ವಹಿವಾಟು ನಡೆಯುತ್ತಿರುವ ಪ್ರದೇಶ ಹಳೇ ಬಸ್ ನಿಲ್ದಾಣ ಸುತ್ತಮುತ್ತ ಇರುವುದರಿಂದ ಗ್ರಾಮಾಂತರ ಪ್ರದೇಶದಿಂದ ಬರುವ ಪ್ರಯಾಣಿಕರು ಹೊಸ ಬಸ್ ನಿಲ್ದಾಣದಿಂದ ಮತ್ತೆ ಆಟೋ ಮೂಲಕ ಪಟ್ಟಣಕ್ಕೆ ಬರಬೇಕಾಗಿದೆ. ಆದ್ದರಿಂದ ಗ್ರಾಮಾಂತರ ಪ್ರದೇಶದಿಂದ ಬರುವ ಬಸ್ಗಳನ್ನು ಹಳೇ ಬಸ್ ನಿಲ್ದಾಣದವರೆಗೆ ಬರುವ ವ್ಯವಸ್ಥೆ ಮಾಡಬೇಕು. ತಪ್ಪಿದಲ್ಲಿ ನಗರ ಸಾರಿಗೆ ವ್ಯವಸ್ಥೆ ಏರ್ಪಡಿಸ ಬೇಕು ಎಂದು ನಾಗರಿಕ ಸಂರಕ್ಷಣಾ ಸಮಿತಿ ಅಧ್ಯಕ್ಷ ರವಿಕುಮಾರ್, ರೈತ ಸಂಘದ ಅಧ್ಯಕ್ಷ ಸಾ.ಸು ವಿಶ್ವನಾಥ್ ಒತ್ತಾಯಿಸಿದ್ದಾರೆ.