ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮಹಿಳೆ ಮನುಜಕುಲದ ಶಾಂತಿಯ ಪ್ರತೀಕ: ಪ್ರಾಧ್ಯಾಪಕಿ ಅನಸೂಯ

Rashmi Kasaragodu
Updated On : 11 Oct 2013, 11:19 am

ಚನ್ನರಾಯಪಟ್ಟಣ: ಜಾಗತೀಕರಣದ ಸಂದರ್ಭದಲ್ಲಿ ಮಹಿಳೆಗೆ ಹಲವಾರು ಸವಾಲುಗಳು ಎದುರಾಗಿದ್ದು, ಅವುಗಳನ್ನು ನಿಭಾಯಿಸುವಲ್ಲಿ ಮಹಿಳೆ ಅನೇಕ ಸಂಕಷ್ಟಗಳನ್ನು ಅನುಭವಿಸ ಬೇಕಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕಿ ಜೆ. ಎನ್. ಅನಸೂಯ ವಿಷಾದಿಸಿದರು.
ಪಟ್ಟಣದ ಸರ್ಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ, ಸಿಕೆಎಲ್ ಸ್ವಯಂ ಸೇವಾ ಸಂಸ್ಥೆ ಮತ್ತು ವೀರಾಂಜ ನೇಯ ಯುವಕ ಸಂಘ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಹಿಳಾ ಸಬಲೀಕರಣ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದರು. ಮಹಿಳೆ ಮನುಜಕುಲದ ಶಾಂತಿಯ ಪ್ರತೀಕ. ಮನೆ ಮತ್ತು ಮನಸ್ಸುಗಳು ಆರೋಗ್ಯವಾಗಿರ ಬೇಕಾದರೆ ಕುಟುಂಬದಲ್ಲಿ ಹೆಣ್ಣಿನ ಪಾತ್ರ ಮುಖ್ಯವಾದುದು. ಕ್ಷೋಭೆಯನ್ನು ದೂರಮಾಡಿ ಶಾಂತಿ ನೆಲಸುವಂತೆ  ನೋಡಿಕೊಳ್ಳುವವಳು ಮಹಿಳೆ ಎಂದು ಹೇಳಿದರು.
 ಪ್ರಸ್ತುತ ಭಾರತ ರಾಜಕೀಯ, ಆರ್ಥಿಕ, ಕೈಗಾರಿಕಾ ಸಂಕಷ್ಟ ಎದುರಿಸುತ್ತಿದೆ. ಎಲ್ಲಿ ನಿಸ್ತೇಜತೆ ಇದೆಯೋ ಅಲ್ಲಿ ಸ್ವಾರ್ಥ ಬದಿಗಿಟ್ಟು ಸಮಾಜಕ್ಕಾಗಿ ಸಾಂಘಿಕ ಹೋರಾಟ ನಡೆಸಬೇಕು. ಈ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಮಹಿಳೆ ನಾನಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ಪುರುಷರಿಗಿಂತಲೂ ಮೇಲುಗೈ ಸಾಧಿಸಿದ್ದಾಳೆ ಎಂದು ತಿಳಿಸಿದರು. ಮಹಿಳೆಯ ಮೇಲೆ ದೌರ್ಜನ್ಯ ಎಗ್ಗಿಲ್ಲದೆ  ನಡೆಯುತ್ತಿರುವುದು ವಿಷಾದದ  ಸಂಗತಿ ಎಂದು ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement