ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹೊನ್ನೆ ಮರದ ತುಂಡುಗಳ ವಶ: ಇಬ್ಬರ ಬಂಧನ

Rashmi Kasaragodu
Updated On : 11 Oct 2013, 11:21 am

ಆಲೂರು: ತಾಲೂಕಿನ ಪರಬೈರವನಹಳ್ಳಿ ಬಳಿ ಪಟ್ಟಣ ಪೊಲೀಸರು ದಾಳಿ ನಡೆಸಿ 2 ಲಕ್ಷ ರು.ಮೌಲ್ಯದ 8 ಹೊನ್ನೆಮರದ ತುಂಡುಗಳು ಹಾಗೂ ಮಹೇಂದ್ರ ವಾಹನ ವಶಪಡಿಸಿಕೊಂಡು ಇಬ್ಬರನ್ನು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ. ರಾಯರಕೊಪ್ಪಲು-ಮಗ್ಗೆ ಕಡೆಯಿಂದ ಪುರಬೈರವನಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೆಳಗ್ಗೆ ಮಹೇಂದ್ರ ವಾಹನದಲ್ಲಿ ಈ ಮರದ ತುಂಡುಗಳನ್ನು ಸಾಗಿಸುತ್ತಿದ್ದ ಸಂತೇಬಸವನಹಳ್ಳಿಯ ಯೋಗೇಶ್ (35) ಮತ್ತು ಸಂತೋಷ್ (26) ಎಂಬವರನ್ನು ಬಂಧಿಸಿದ್ದು, ಮಂಜು ಎಂಬ ವ್ಯಕ್ತಿ ಪರಾರಿಯಾಗಿದ್ದಾನೆ. ಆರೋಪಿಗಳಿಂದ  2 ಲಕ್ಷ ರು.ಮೌಲ್ಯದ ಮರದ ತುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.  ಕಾರ್ಯಾಚರಣೆಯಲ್ಲಿ ಎಸ್ಐ ತಿಮ್ಮಶೆಟ್ಟಿ, ರಂಗೇಗೌಡ, ಉಮಾಶಂಕರ್, ಪಾಲಾಕ್ಷ ಇದ್ದರು.


ನುಗ್ಗೇಹಳ್ಳಿಯ ವ್ಯಕ್ತಿ ನಾಪತ್ತೆ
ಅರಸೀಕೆರೆ: ತಾಲೂಕಿನ ಎಸ್.ಡಿ.ನುಗ್ಗೇನಹಳ್ಳಿಯ ಶಿವಾನಂದಮೂರ್ತಿ(47) ಮನೆಯಿಂದ ಹೊರಗೆ ಹೋದವರು ವಾಪಸ್ ಮನೆಗೆ ಬಾರದೆ ಕಾಣೆಯಾಗಿದ್ದಾರೆ. ಪತ್ನಿ ರಾಜೇಶ್ವರಿ ಜಾವಗಲ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement