ಹೋಬಳಿ ರಸ್ತೆಗಳ ದುರಸ್ತಿಗೆ ಆಗ್ರಹ
ಹಾಸನ: ಬೇಲೂರು ತಾಲೂಕಿನ ಬಿಕ್ಕೋಡು ಹೋಬಳಿಯ ಗುಮ್ಮನಹಳ್ಳಿ ವಸಂತಕೂಲು, ಇರುವಾಟೆ, ಗಣೇಶಬಾರೆ ರಸ್ತೆಗಳು ಸ್ಥಿತಿ ಹೇಳ ತೀರದಾಗಿದೆ. ಖಾಸಗಿ ವಾಹನಗಳು ಕೂಡಾ ಇಲ್ಲಿ ಸಂಚರಿಸಲು ಸಾಧ್ಯವಿಲ್ಲದಿರುವುದರಿಂದ 5 ಕಿ.ಮೀ ಸುತ್ತಿಕೊಂಡು ಆಲೂರು ಇಲ್ಲವೇ ಹಾಸನಕ್ಕೆ ಬರಬೇಕಾಗಿದೆ. ಹಾಗಾಗಿ ಕೂಡಲೇ ಈ ರಸ್ತೆಗಳನ್ನು ದುರಸ್ತಿ ಮಾಡಿಸುವಂತೆ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಕೆ.ಎಸ್.ತೀರ್ಥಪ್ಪ ಒತ್ತಾಯಿಸಿದ್ದಾರೆ.
ಆಲೂರು ತಾಲೂಕಿನ ವಾಟೇಹೊಳೆ ವ್ಯಾಪ್ತಿಯ ಕೆಸಗೋಡು, ನೀರನಹಳ್ಳಿ, ಮಲ್ಲೇಶ್ವರ ಕಾಲೋನಿ, ಇಂಟಿಯತೊಳಲು, ಮೂಲೆಹೊಳೆ ಗಾರಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾರೀ ಮಳೆಗೆ ಸಂಪೂರ್ಣ ಹಾಳಾಗಿದೆ. ಇದರಿಂದಾಗಿ ಈ ಭಾಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್ ಸಂಚಾರ ಕೂಡಾ ನಿಲ್ಲಿಸಲಾಗಿದೆ. ಇದರಿಂದಾಗಿ ಕೆಲಸ ಕಾರ್ಯಗಳಿಗೆ ಆಲೂರಿಗೆ ಬರುವ ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗಿದೆ. ಕೂಡಲೇ ಈ ರಸ್ತೆಯನ್ನು ದುರಸ್ತಿ ಮಾಡಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸೀಳು ನಾಲೆಗಳ ಕವರ್ಡಕ್ಗಳನ್ನು ದುರಸ್ತಿ ಮಾಡದ ಕಾರಣ ಅಲ್ಲಲ್ಲಿ ನಾಲೆಗಳ ತಡೆಗೋಡೆಗಳೆ ಕುಸಿದಿವೆ ಎಂದು ದೂರಿದ್ದಾರೆ.