ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

5 ಜಿಲ್ಲೆಗಳಲ್ಲಿ ಶೀಘ್ರ ಜವಳಿ ಪಾರ್ಕ್

Rashmi Kasaragodu
Updated On : 12 Oct 2013, 10:05 am

ಕನ್ನಡಪ್ರಭ ವಾರ್ತೆ೤ ಹಾಸನ೤ ಅ.12
ರಾಜ್ಯದ 5 ಜಿಲ್ಲೆಗಳಲ್ಲಿ ಸದ್ಯದಲ್ಲೇ ಜವಳಿ ಪಾರ್ಕ್ ಆರಂಭಿಸಲಾಗುತ್ತಿದ್ದು, ದೊಡ್ಡಬಳ್ಳಾಪುರ ಮತ್ತಿತರ ಕಡೆ ಇರುವ ಕೈ ಮಗ್ಗದ ಕಾರ್ಖಾನೆಗಳನ್ನು ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಸಾವಿರ ಕೋಟಿ ರು. ಆರ್ಥಿಕ ನೆರವು ನೀಡಬೇಕಾಗಿದೆ ಎಂದು ರಾಜ್ಯ ಜವಳಿ ಖಾತೆ ಸಚಿವ ಬಾಬುರಾವ
ಚಿಂಚನ್ಸೂರ್ ಹೇಳಿದರು.
 ಶನಿವಾರ ಹಾಸನ ನಗರದ ವಿಶೇಷ ಆರ್ಥಿಕ ವಲಯದಲ್ಲಿ ನಡೆದ ನ್ಯೂ ಮಿನರ್ವ ಮಿಲ್ ಕಾರ್ಖಾನೆ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, ಶಿವಮೊಗ್ಗ, ಹಾಸನ, ಬಿಜಾಪುರ, ಬೆಳಗಾವಿ, ಗುಲ್ಬರ್ಗಾ ಜಿಲ್ಲೆಗಳಲ್ಲಿ ಜವಳಿ ಪಾರ್ಕ್ ಆರಂಭಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
 ಯಾದಗಿರಿ ಜಿಲ್ಲೆಯಲ್ಲಿ ಸಾವಿರ ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳ ಪಾರ್ಕ್ ಆರಂಭವಾಗುತ್ತಿದ್ದು, ಇಲ್ಲಿ 10 ಸಾವಿರ ಕೋಟಿ ರು. ಬಂಡವಾಳ ಹೂಡುವ ನಿರೀಕ್ಷೆ ಹೊಂದಲಾಗಿದೆ ಎಂದು ತಿಳಿಸಿದರು.
 ಈ ಜವಳಿ ಪಾರ್ಕ್ನಲ್ಲಿ ರಾಜ್ಯದ 25 ಸಾವಿರ ಮಂದಿಗೆ ಉದ್ಯೋಗ ದೊರೆಯಲಿದೆ.  2013-18 ಹೊಸ ಜವಳಿ ನೀತಿಯಿಂದ  5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ.  
  ಮುಖ್ಯಮಂತ್ರಿ ಸಿದ್ದರಾಮಯ್ಯ ಜವಳಿ ಉದ್ಯಮಕ್ಕೆ 100 ಕೋಟಿ ರು. ವಿಶೇಷ ಪ್ಯಾಕೇಜ್ ನೀಡಿದ್ದಾರೆ. ನೇಕಾರರ ಸಾಲ ಮನ್ನಾಕ್ಕಾಗಿ 42 ಕೋಟಿ ರು. ಉಣ್ಣೆ ಉದ್ಯಮ ಅಭಿವೃದ್ಧಿಗೆ 25 ಕೋಟಿ ರು. ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
 ಕೃಷಿ ಬಿಟ್ಟರೇ ಜವಳಿ ಕೈಗಾರಿಕಾ ಕ್ಷೇತ್ರ ಹೆಚ್ಚು ಉದ್ಯೋಗ ಸೃಷ್ಟಿಸುವ ಕ್ಷೇತ್ರವಾಗಿದೆ. ಈ ಹಿನ್ನೆಲೆಯಲ್ಲಿ ನೂಲು ತಯಾರಿಕೆ ಘಟಕಗಳನ್ನು ಪುನಶ್ಚೇತನಗೊಳಿಸ ಬೇಕಾಗಿದ್ದು, ಅದಕ್ಕಾಗಿ ಸಾವಿರ ಕೋಟಿ ರು. ಆರ್ಥಿಕ ನೆರವು ನೀಡಬೇಕೆಂದು ವೇದಿಕೆಯಲ್ಲಿದ್ದ ಕೇಂದ್ರ ಜವಳಿ ಖಾತೆ ಸಚಿವ ಕೆ. ಸಾಂಬಾ ಶಿವರಾವ್ ಅವರನ್ನು ಕೋರಿದರು.
 ಜವಳಿ ಉದ್ಯಮ ಅಭಿವೃದ್ಧಿಗೆ ರಾಜ್ಯ ಸರ್ಕಾರಗಳ ನೆರವು ಬೇಕು. ನೂಲು ಘಟಕಗಳ ಪುನಶ್ಚೇತನಕ್ಕೆ ಆರ್ಥಿಕ ನೆರವು ನೀಡಲಾಗುವುದು ಎಂದು ಕೇಂದ್ರ ಸಚಿವರು ಭರವಸೆ ನೀಡಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement