ಅಶೋಕ ವಿಜಯ ದಶಮಿ ಮಹತ್ವ ಸಾರುವ ವಿಶೇಷ ಕಾರ್ಯಕ್ರಮ ನಾಳೆ
ಅರಸೀಕೆರೆ: ಬೌದ್ಧ ಮಹಾಸಭಾ ಹಾಸನ ಘಟಕದಿಂದ 2284ನೇ ಅಶೋಕ ವಿಜಯದಶಮಿ ಮಹತ್ವ ಸಾರುವ ವಿಶೇಷ ಕಾರ್ಯಕ್ರಮವನ್ನು ಅ.14ರ ಸೋಮವಾರ ಬೆಳಗ್ಗೆ ಪಟ್ಟಣದ ಸರ್ಕಾರಿ ನೌಕರರ ಸಂಘದ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದೆ ಎಂದು ಉಪಾಸಕ ಬಿ.ಎನ್. ರಂಗನಾಥ್ ತಿಳಿಸಿದ್ದಾರೆ.
ಶಾಸಕ ಕೆ.ಎಂ ಶಿವಲಿಂಗೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಿವೃತ್ತ ಉಪಕಾರ್ಯದರ್ಶಿ ಎಸ್. ನರಸಿಂಹಯ್ಯ, ಪುರಸಭಾಧ್ಯಕ್ಷ ಮೋಹನ್ಕುಮಾರ್ ಮಹಾಬೋದಿ ಸೊಸೈಟಿಯ ಕುಮಾರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದು ಹಾಸನ ಘಟಕದ ಎನ್.ಬಿ ವೀರಭದ್ರಯ್ಯ ಅಧ್ಯಕ್ಷತೆ ವಹಿಸುವರು.