ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಗ್ರಾಮ ಲೆಕ್ಕಿಗರ ನೇರ ನೇಮಕಾತಿ: ಆಯ್ಕೆಪಟ್ಟಿ ಪ್ರಕಟ

Rashmi Kasaragodu
Updated On : 12 Oct 2013, 10:06 am

ಹಾಸನ: ಜಿಲ್ಲೆಯಲ್ಲಿ ಖಾಲಿ ಇರುವ 46 ಗ್ರಾಮ ಲೆಕ್ಕಿಗರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಸಲುವಾಗಿ ಕರ್ನಾಟಕ ಸಾಮಾನ್ಯ ಸೇವೆಗಳು ಕೇಡರ್ ಹಾಗೂ ರಿಕ್ರೂಟ್ಮೆಂಟ್ ನಿಯಮಗಳು 2008 ಮತ್ತು ತಿದ್ದುಪಡಿ ನಿಯಮಗಳು 2009 ರನ್ವಯ ಹಾಗೂ ಉಲ್ಲೇಖ (1) ರಲ್ಲಿ ನೀಡಿರುವ ಸೂಚನೆಗಳಂತೆ ಸ್ವೀಕೃತವಾದ ಒಟ್ಟು ಅರ್ಜಿಗಳಲ್ಲಿ 1-10 ಅನುಪಾತದ ಪ್ರಮಾಣದಲ್ಲಿ ಪರಿಶೀಲನಾ ಪಟ್ಟಿಯನ್ನು  ಪ್ರಕಟಿಸಲಾಗಿದೆ. ಪಟ್ಟಿಯಂತೆ ಜೂನ್ 5ಕ್ಕೆ  ಪರಿಶೀಲನೆಗೆ ಹಾಜರಾದ ಅರ್ಹ ಅಭ್ಯರ್ಥಿಗಳ ಮೂಲ ದಾಖಲೆಗಳ ಪರಿಶೀಲನೆಯಿಂದ ಅಭ್ಯರ್ಥಿಗಳ ಮೆರಿಟ್ ಹಾಗೂ ಮೀಸಲಾತಿ ಆಧಾರದಲ್ಲಿ 46 ಅಭ್ಯರ್ಥಿಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಉಲ್ಲೇಖ (4)ರಂತೆ ಪ್ರಕಟಿಸಿ ಆಕ್ಷೇಪಣೆ ಆಹ್ವಾನಿಸಲಾಗಿತ್ತು.  
ಅದರಂತೆ ಒಂದು ಆಕ್ಷೇಪಣೆ ಸ್ವೀಕೃತವಾಗಿದ್ದು, ನಿಯಮಾನುಸಾರ ಅದನ್ನು ವಿಲೇವಾರಿ ಮಾಡಲಾಗಿದೆ. ಆನಂತರ ಅಂತಿಮವಾಗಿ ಆಯ್ಕೆಯಾಗಿರುವ 46 ಅಭ್ಯರ್ಥಿಗಳ ಪಟ್ಟಿಯನ್ನು ಹಾಗೂ ಅಂತಿಮವಾಗಿ ಕಾಯ್ದಿರಿಸಿರುವ ಅಭ್ಯರ್ಥಿಗಳ ಪಟ್ಟಿ ಸಹ ಪ್ರಕಟಿಸಲಾಗಿದೆ. ಅಂತಿಮ ಆಯ್ಕೆ ಪಟ್ಟಿಯನ್ನು ಹಾಗೂ ಕಾಯ್ದಿರಿಸಲಾದ ಅಭ್ಯರ್ಥಿಗಳ ಪಟ್ಟಿಯನ್ನು, ಈ ಕಚೇರಿ ವೆಬ್ಸೈಟ್ ಡಿಡಿಠಣಣಝಛಡಡಛಟಿ.ಟ್ಝ್ಛಿ.್ಝಟಿ ರಲ್ಲಿ ನೋಡಬಹುದು ಎಂದು ಗ್ರಾಮ ಲೆಕ್ಕಿಗರ ನೇಮಕಾತಿ ಪ್ರಾಧಿಕಾರದ ಕಾರ್ಯರ್ಟ್ಶಿ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದ್ದಾರೆ.
ವಿದ್ಯಾರ್ಥಿ ವೇತನ - ಅರ್ಜಿ ಸಲ್ಲಿಕೆಗೆ 15 ಕೊನೆ
ಚನ್ನರಾಯಪಟ್ಟಣ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಸತಿ ಯೋಜನೆ ಮತ್ತು  ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಯೋಜನೆಯ ಉಪಯೋಗ ಪಡೆದುಕೊಳ್ಳಬೇಕೆಂದು ನೇಕಾರ ಸಮುದಾಯ ಒಕ್ಕೂಟದ ಜಿಲ್ಲಾ ಪತ್ರಿಕಾ ಕಾರ್ಯದರ್ಶಿ ಪುಟ್ಟಣ್ಣ ತಿಳಿಸಿದ್ದಾರೆ. ನೇಕಾರ ವಿದ್ಯಾರ್ಥಿಗಳು ಅ.15ರ ಒಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಇದರ ಸುದುಪಯೋಗ ಪಡೆದುಕೊಂಡು ಉತ್ತಮ ಸಮಾಜ ಕಟ್ಟುವಲ್ಲಿ ಮುಂದಾಗಬೇಕು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement