ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜನಮನ ಸೆಳೆದ ನವರಾತ್ರಿ ಗೊಂಬೆ

Rashmi Kasaragodu
Updated On : 12 Oct 2013, 10:04 am

ಅರಕಲಗೂಡು: ಇಲ್ಲಿನ ಹಾಸನ ಪದವಿ ಪೂರ್ವ ಕಾಲೇಜಿನಲ್ಲಿ ನವರಾತ್ರಿ ಅಂಗವಾಗಿ ಗೊಂಬೆ ಹಬ್ಬ ಆಚರಿಸಲಾಯಿತು.ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದಲೇ ಸುಂದರವಾಗಿ ವಿವಿಧ ಗೊಂಬೆಗಳನ್ನು ಜೋಡಿಸಿ, ಆರತಿ ಎತ್ತಿ ಸಂಭ್ರಮಿಸಲಾಯಿತು. ಮೈಸೂರು ಅರಮನೆ,ಅಂಬಾರಿ ಹೊತ್ತು ಹೋಗುತ್ತಿರುವ ಆನೆಗಳು,ಕೋಟಿಲಿಂಗ ಪರಿಕಲ್ಪನೆಯ ಚಿತ್ರಣ,ರುದ್ರಪಟ್ಟಣದ ತಂಬೂರಿ ಆಕಾರದ ಸಪ್ತಸ್ವರ ಮಂದಿರ ಹೀಗೆ ವಿವಿಧ ಶೈಲಿಯಲ್ಲಿ ಇಲ್ಲಿನ ವಿದ್ಯಾರ್ಥಿಗಳು ಗೊಂಬೆಗಳನ್ನು ಕೂರಿಸಿದ್ದರು. ಹಳೆಯ ಸಂಪ್ರದಾಯನೆನಪಿಸುವಂತೆ ಉಡುಗೆ ತೊಡುಗೆಗಳನ್ನು ಧರಿಸಿದ್ದ ವಿದ್ಯಾರ್ಥಿಗಳು, ಗೊಂಬೆಗಳಿಗೆ ಆರತಿ ಬೆಳಗಿದರು. ಪಾಲಕರು, ಸಾರ್ವಜನಿಕರು ವೀಕ್ಷಿಸಿ ಹರ್ಷ ವ್ಯಕ್ತ ಪಡಿಸಿದರು. ಶಾಸಕ ಪ್ರಕಾಶ್ ಪುತ್ರ ಸ್ವರೂಪ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ಕೆ.ಗಂಗಾಧರ್,ಪ್ರಾಚಾರ್ಯ ನವೀನ್ ಇತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement