ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕರ್ನಾಟಕ ಕಾವಲು ಪಡೆ ಕಾರ್ಯಕರ್ತರ ಕ್ಷಮಾಯಾಚನೆ

Vishwanath S
Updated On : 17 Oct 2013, 12:20 pm

ಹಾಸನ: ಶ್ರೀರಾಂ ಚಿಟ್‌ಫಂಡ್‌ನಲ್ಲಿ ಸಾರ್ವಜನಿಕರ ಹಣವನ್ನು ವಂಚಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ಶ್ರೀರಾಂ ಕಚೇರಿಗೆ ಹೋಗಿ ಪೀಠೋಪಕರಣಗಳನ್ನು ಎಸೆದಾಡಿದಕ್ಕೆ ಕರ್ನಾಟಕ ಕಾವಲು ಪಡೆ ಜಿಲ್ಲಾಧ್ಯಕ್ಷ ಎಚ್.ಎನ್. ನಟೇಶ್ ಹಾಗೂ ಕಾರ್ಯಕರ್ತರು ಕ್ಷಮೆ ಯಾಚಿಸಿದ್ದಾರೆ.
 ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟೇಶ್ ಅವರು, ಶ್ರೀರಾಂ ಸಂಸ್ಥೆಯವರು ಸಾರ್ವಜನಿಕರಿಂದ ಹಣ ಕಟ್ಟಿಸಿಕೊಂಡು, ನಂತರ ಹಣ ವಾಪಸ್‌ನೀಡುವಾಗ ಸುಳ್ಳ ನೆಪವೊಡ್ಡಿ ತೊಂದರೆ ನೀಡುತ್ತಿದ್ದರು. ಈ ಬಗ್ಗೆ ಸಂಸ್ಥೆಯ ಮ್ಯಾನೇಜರ್ ಬಳಿ ಹೋಗಿ ಕೇಳಿಕೊಂಡರೂ ಅವರು ಬೇಜವಾಬ್ದಾರಿಯಿಂದ ವರ್ತಿಸಿದ್ದರು. ಅಷ್ಟೇ ಅಲ್ಲದೆ ಮ್ಯಾನೇಜರ್ ಅಲ್ಲಿಂದ ಪರಾರಿಯಾದ ಪರಿಣಾಮ ಆಕ್ರೋಶಗೊಂಡು ಅಲ್ಲಿದ್ದ ಪೀಠೋಪಕರಣಗಳನ್ನು ಎಸೆದಾಡಲಾಯಿತು. ಯಾವುದೇ ಪೀಠೋಕರಣಗಳನ್ನು ಮುರಿದು ಹಾಕಿಲ್ಲ ಎಂದ ಅವರು, ಘಟನೆ ಸಂಭವಿಸಿದ್ದಕ್ಕೆ ಕ್ಷಮೆ ಕೋರುವುದಾಗಿ ನಟೇಶ್ ಹೇಳಿದ್ದಾರೆ.
ನಾಳೆ ಧ್ವನಿ ಸುರಳಿ ಬಿಡುಗಡೆ: ನಾಡು-ನುಡಿಗಾಗಿ ಹೋರಾಟ ನಡೆಸುತ್ತಿರುವ ಕರ್ನಾಟಕ ಕಾವಲು ಪಡೆಯಿಂದ ಅ.18ರಂದು ಧ್ವನಿ ಸುರಳಿ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಎಚ್.ಎನ್.ನಟೇಶ್ ತಿಳಿಸಿದರು.
 ನಗರದಲ್ಲಿ ಬುಧವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧ್ವನಿ ಸುರಳಿ ಬಿಡುಗಡೆ ಮುನ್ನ ಹಾಸನಾಂಬೆಗೆ ಪೂಜೆ ಸಲ್ಲಿಸಿ ನಂತರ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು. ಕಾವಲು ಪಡೆ ರಾಜ್ಯಾಧ್ಯಕ್ಷ ಎಂ.ಮೋಹನ್‌ಕುಮಾರಗೌಡ ಅವರು ಧ್ವನಿ ಸುರಳಿ ಬಿಡುಗಡೆ ಮಾಡುವರು. ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಶಾಸಕ ಎಚ್.ಎಸ್.ಪ್ರಕಾಶ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
 ತಹಸೀಲ್ದಾರ್ ಮಂಜುನಾಥ್ ಅಧ್ಯಕ್ಷತೆ ವಹಿಸುವರು. ನಗರಸಭೆ ಅಧ್ಯಕ್ಷೆ ಎಚ್.ಎಚ್.ವಿದ್ಯಾ, ಉಪಾಧ್ಯಕ್ಷ ಇರ್ಷಾದ್‌ಪಾಷ, ಸದಸ್ಯ ಎಚ್.ಎಸ್.ಅನಿಲಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್.ಶಂಕರ್,  ಜಿಲ್ಲಾ ಎಸ್ಪಿ ರವಿ ಡಿ.ಚನ್ನಣ್ಣನವರ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಎಂ.ಆನಂದ್ ಇತರರು ಭಾಗವಹಿಸಲಿದ್ದಾರೆ ಎಂದು ಹೇಳಿದರು.
 ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ನವೀನ್‌ಕುಮಾರ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಯೈದ್ ಎಜಾಸ್, ತಾಲೂಕು ಅಧ್ಯಕ್ಷ ಬಿ.ವಿ.ಭಾನುಪ್ರಕಾಶ್, ಮಹಿಳಾ ಅಧ್ಯಕ್ಷೆ ವೀಣಾ, ಪ್ರಸಾದ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement