ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಕ್ತದಾನಕ್ಕೆ ಜಾತಿ ಲೇಪವಿಲ್ಲ

Vishwanath S
Updated On : 17 Oct 2013, 12:20 pm

ಹಾಸನ: ರಕ್ತದಾನ ಮಾಡುವಾಗ ರಕ್ತದ ಗುಂಪು ಕೇಳಲಾಗುತ್ತದೆಯೆ ಹೊರತು ಯಾವುದೇ ಜಾತಿ, ಧರ್ಮವನ್ನಲ್ಲ ಎಂದು ಶಾಸಕ ಎಚ್.ಎಸ್.ಪ್ರಕಾಶ್ ಹೇಳಿದರು. ನಗರದ ಸರ್ಕಾರಿ ಕಲಾ ಕಾಲೇಜಿನ ಯುವ ರೆಡ್‌ಕ್ರಾಸ್ ಘಟಕದಿಂದ ಏರ್ಪಡಿಸಿದ್ದ ರಕ್ತಗುಂಪು ಪರೀಕ್ಷೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನಕ್ಕೆ ಯಾವುದೇ ಜಾತಿ, ಧರ್ಮ ಲೇಪನ ಇರುವುದಿಲ್ಲ ಎಂದು ತಿಳಿಸಿದರು.
 ಒಂದು ಹನಿ ರಕ್ತ ಒಂದು ಜೀವ ಉಳಿಸಬಲ್ಲದು. ನಿಸ್ವಾರ್ಥ, ನಿಷ್ಕಲ್ಮಶ ಮನಸ್ಸಿನಿಂದ ನೀವು ರಕ್ತದಾನ ಮಾಡಿದರೆ ಅದೊಂದು ಪವಿತ್ರ ಕಾರ್ಯ ಎಂದ ಅವರು, ಅಪಘಾತ ಸಂಭವಿಸಿದಾಗ ಗಾಯಾಳುವಿಗೆ  ರಕ್ತ ಅವಶ್ಯ ಬೇಕಾಗುತ್ತದೆ. ಹಾಗಾಗಿ ನಿಮ್ಮ ರಕ್ತದ ಗುಂಪುನ್ನು  ಪರೀಕ್ಷಿಸಿಕೊಳ್ಳುವುದರ ಮೂಲಕ ನೀವು  ಮಾಡುವ ರಕ್ತದಾನ ಶ್ರೇಷ್ಠ ಕಾರ್ಯ ಎನಿಸುತ್ತದೆ ಎಂದು ಹೇಳಿದರು.
 ಎನ್‌ಎಸ್‌ಎಸ್, ಎನ್‌ಸಿಸಿ ಸ್ಕೌಟ್ಸ್ ಗೈಡ್ಸ್ ಘಟಕಗಳ ಮೂಲಕ ಸೇವೆ ಸಲ್ಲಿಸುವ ಗುಣವನ್ನು ಬೆಳೆಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
  ಭಾರತೀಯ ರೆಡ್ ಕ್ರಾಸ್ ಜಿಲ್ಲಾ ಘಟಕ ಅಧ್ಯಕ್ಷ ಎಚ್.ಪಿ.ಮೋಹನ್ ಮಾತನಾಡಿ ಪ್ರತಿ ವರ್ಷ ಜೂನ್ 14 ರಂದು ವಿಶ್ವ ರಕ್ತ ದಿನಾಚರಣೆ ಆಚರಿಸಲಾಗುತ್ತದೆ. ಪ್ರತಿ ಜಿಲ್ಲಾ ಕೇಂದ್ರದಲ್ಲಿ  ಬ್ಲಡ್ ಬ್ಯಾಂಕ್ ಶಾಖೆ ತೆರೆಯಲಾಗಿದೆ.  ಬಿಪಿಎಲ್, ಎಪಿಎಲ್ ಕಾರ್ಡ್ ಪಡೆದಿರುವವರಿಗೆ ರಕ್ತದ ಅಗತ್ಯ ಬಿದ್ದಾಗ ಉಚಿತ ಹಾಗೂ  ಕಡಿಮೆ ದರದಲ್ಲಿ ರಕ್ತ ಕೊಡುವ ವ್ಯವಸ್ಥೆಯೂ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಒಂದು ನಿಮಿಷಕ್ಕೆ ಒಂದು ಯೂನಿಟ್ ಬೇಕಾಗಿದೆ ಎಂಬ ಮಾಹಿತಿ ನೀಡಿದರು.
 ಸ್ನಾತಕೋತ್ತರ ವಿಭಾಗದ ಸಂಯೋಜಕ ಡಿ.ಜಿ.ಕೃಷ್ಣೇಗೌಡ ಮಾತನಾಡಿ, ಸ್ವಯಂ ಪ್ರೇರಿತ ರಕ್ತದಾನ ಪವಿತ್ರವಾದುದು. ಹಾಗೂ ರಕ್ತ ದೇವರು ಕೊಟ್ಟಿರುವ ಅಮೂಲ್ಯ ರತ್ನವಾಗಿದೆ. ಪ್ರಾಣವನ್ನು ಉಳಿಸಲು ಇದು  ಸಂಜೀವಿನಿ. ಇಂತಹ  ಸಂಜೀವಿನಿ ಹೊಂದಿರುವ ಯುವಜನತೆ ರಕ್ತದಾನ ಮಾಡಲು ಮುಂದಾಗ ಬೇಕು ಎಂದು  ಹೇಳಿದರು.
 ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ಮಾತನಾಡಿ, ಸುಮಾರು  2250 ವಿದ್ಯಾರ್ಥಿಗಳ ರಕ್ತಗುಂಪು ಪರೀಕ್ಷೆ ಮಾಡಿಸುವ ಮೂಲಕ ಸ್ವಯಂ ಪ್ರೇರಿತ ರಕ್ತದಾನ ಮಾಡಿಸುವುದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.
 ಯುವ ರೆಡ್ ಕ್ರಾಸ್ ಘಟಕ ಸಂಚಾಲಕ ಎಂ.ಆರ್. ರಂಗಸ್ವಾಮಿ, ಪದ್ಮಾವತಿ, ಎನ್‌ಎಸ್‌ಎಸ್ ಅಧಿಕಾರಿ  ಕೆ.ವಿ.ರಮೇಶ್, ಎನ್‌ಸಿಸಿ ಅಧಿಕಾರಿ ಗಿರೀಶ್, ಸ್ಕೌಟ್ಸ್ ಅಧಿಕಾರಿ ಚನ್ನಯ್ಯ ಇದ್ದರು. ವಾಸು ಪ್ರಾರ್ಥಿಸಿದರು. ರವಿನಂದನ್ ಸ್ವಾಗತಿಸಿದರು. ಮುರುಳೀಧರ್ ವಂದಿಸಿದರು. ಗಿರೀಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement