ಇಂದಿನಿಂದ ರೋಟರಿ ಸನ್‌ರೈಸ್‌ನಿಂದ ಆಹ್ವಾನಿತ ಕ್ರಿಕೆಟ್ ಪಂದ್ಯಾವಳಿ
ಹಾಸನ: ರೋಟರಿ ಸನ್‌ರೈಸ್ ಸಂಸ್ಥೆಯಿಂದ ಸ್ನೇಹ ಮತ್ತು ಸೌಹಾರ್ದತೆ ಸಾರಲು ಹಾಗೂ ಪಲ್ಸ್ ಪೊಲೀಯೋ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅ.19 ಮತ್ತು 20 ರಂದು ರೋಟರಿ ಜಿಲ್ಲಾ ಆಯ್ದ ಕ್ಲಬ್‌ಗಳ ಆಹ್ವಾನಿತ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗಿದೆ ಎಂದು ಸಂಸ್ಥೆ ಅಧ್ಯಕ್ಷ ಎ.ನಟೇಶ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಸನ್‌ರೈಸ್ 1998 ರಿಂದ ಇಲ್ಲಿಯವರೆಗೂ ವಿವಿಧ ಸೇವಾ ಕಾರ್ಯಗಳನ್ನು ಹಮ್ಮಿಕೊಂಡು ಬಂದಿದೆ. ಅದರಂತೆ ನಗರದ ಬಿ.ಎಂ. ರಸ್ತೆ, ಎಚ್.ಕೆ.ಎಸ್. ಇಂಟರ್ ನ್ಯಾಷನಲ್ ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ. ರೋಟರಿ ಜಿಲ್ಲೆಯ ಕುಂದಾಪುರ, ಕೋಟೇಶ್ವರ, ಉಡುಪಿ, ಮಂಗಳೂರು, ಮೈಸೂರು ಹಾಗೂ ಹಾಸನ ಜಿಲ್ಲೆಯ ಅರೇಹಳ್ಳಿ, ಚನ್ನರಾಯಪಟ್ಟಣ, ಹಾಸನ ರೋಟರಿ ಸಂಸ್ಥೆಗಳ ತಂಡಗಳು ಭಾಗವಹಿಸಲಿವೆ. ಜಿಲ್ಲಾ ಎಸ್ಪಿ ರವಿ ಡಿ. ಚನ್ನಣ್ಣನವರ ಪಂದ್ಯಾವಳಿ ಉದ್ಘಾಟಿಸಲಿದ್ದಾರೆ. ಒಟ್ಟು 12 ತಂಡಗಳು ಪಾಲ್ಗೊಳ್ಳಲಿವೆ. ಈ ಎಲ್ಲಾ ತಂಡಗಳಿಂದ ಸ್ವೀಕೃತ ಹಣದಲ್ಲಿ ಶ್ರೀ ಕೃಷ್ಣ ಅಂಧ ಮಕ್ಕಳ ಶಾಲೆಗೆ ಕಂಪ್ಯೂಟರನ್ನು ಕೊಡುಗೆಯಾಗಿ ನೀಡಲಾಗುವುದು. ರೋ. ಎನ್. ರಮೇಶ್, ಸೂರ್ಯಪ್ರಕಾಶ್ ಭಟ್, ಭರತೇಶ್ ಡಾ.ಸುಧೀರ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಸಮಿತಿಯ ಛೇರ್ಮನ್ ಸಂಗಂ ಇದ್ದರು.