ಗ್ಯಾಸ್ ವಿತರಕರಿಗೆ ಇಲಾಖೆ ಉಪ ನಿರ್ದೇಶಕರಿಂದ ಕಟ್ಟುನಿಟ್ಟಿನ ಸೂಚನೆ
ಕ.ಪ್ರ.ವಾರ್ತೆ , ಹಾಸನ , ಅ.18
ಗ್ರಾಹಕರಿಂದ ಹೆಚ್ಚಿನ ಬೆಲೆ ಪಡೆಯುವುದು ಮತ್ತು ನಿಗದಿತ ಸಮಯದಲ್ಲಿ ಸರಬರಾಜು ಮಾಡದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಗ್ಯಾಸ್ ವಿತರಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ ತಿಳಿಸಿದ್ದಾರೆ.
ಕಡ್ಡಾಯವಾಗಿ ಡೋರ್ ಡೆಲಿವರಿ ಮಾಡಬೇಕು. ಸಿಲಿಂಡರ್ ದರ 416.50. 0 ರಿಂದ 5 ಕಿ.ಮೀ ವರೆಗೆ ಉಚಿತ ಡೋರ್ ಡೆಲಿವರಿ ಮಾಡುವಂತೆ, 5 ಕಿ.ಮೀ ನಂತರ 1 ಕಿ.ಮೀ.ಗೆ 1.60 ಪೈಸೆ ಪಡೆಯುವಂತೆ ಯಾವುದೇ ಕಾರಣಕ್ಕೂ ಹೆಚ್ಚುವರಿ ಹಣ ವಸೂಲಿ ಮಾಡದಂತೆ ಸೂಚಿಸಲಾಯಿತು.
ರೀಫಿಲ್ ಸಿಲಿಂಡರ್‌ಗಳನ್ನು ಕಡ್ಡಾಯವಾಗಿ Unic ನಂಬರನ್ನು ನಮೂದಿಸಿ ನೀಡಬೇಕು ಮತ್ತು ಗ್ರಾಹಕರಿಂದ ಅದೇ Unic ನಂಬರಿನ ಸಿಲಿಂಡರ್‌ಗಳನ್ನು ವಾಪಸ್ಸು ಪಡೆಯುವಂತೆ ಸೂಚಿಸಲಾಯಿತು.
ಹೊಸ ಸಂಪರ್ಕ ಕೂಡಲೇ ನೀಡುವ ವ್ಯವಸ್ಥೆ ಮಾಡಬೇಕು. ಒಂದು ಸಿಲಿಂಡರ್ ಇರುವವರಿಗೆ ಡಬ್ಬಲ್ ಸಿಲಿಂಡರ್ ನೀಡಲು ಕ್ರಮ ವಹಿಸಬೇಕು. ರೀಫಿಲ್ ಸಾಗಾಣಿಕೆ ಮಾಡುವ ಟ್ರಕ್, ಲಾರಿಯಲ್ಲಿ ಬಿಲ್ಲು ಮತ್ತು ಇತರೆ ದಾಖಲಾತಿಗಳನ್ನು ಹೊಂದಿರಬೇಕು.
Explosive Licence ಹೊಂದಿರುವ ಸ್ಥಳಗಳಲ್ಲದೇ ಇತರೆ ಸ್ಥಳಗಳಲ್ಲಿ ದಾಸ್ತಾನು ಮಾಡುವುದು ಕಾನೂನು ಪ್ರಕಾರ ಅಪರಾಧ. ಗ್ಯಾಸ್ ಏಜೆನ್ಸಿ ಕಚೇರಿ ಮುಂದೆ ದರ ಮತ್ತು ದಾಸ್ತಾನು ಫಲಕ ಗ್ರಾಹಕರಿಗೆ ಗೋಚರಿಸುವಂತೆ ಪ್ರದರ್ಶಿಸಬೇಕು. ಗ್ರಾಹಕರೊಡನೆ ಸೌಜನ್ಯದಿಂದ ವರ್ತಿಸಬೇಕು. ಗ್ಯಾಸ್ ಏಜೆನ್ಸಿಯಲ್ಲಿ Customer CarezService Helpline ತೆರೆಯಬೇಕು ಮತ್ತು ಪತ್ರಿಕೆಗಳನ್ನು ಪ್ರಚುರಪಡಿಸಬೇಕು.
ಹೋಟೆಲ್ ಹಾಗೂ ಇತರೆ ಉದ್ಧೇಶಗಳಿಗೆ ಕಡ್ಡಾಯವಾಗಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳನ್ನು ಮತ್ತು ಅವರು ಬಳಸುವ ಬಗ್ಗೆ ನಿಗಾ ವಹಿಸಬೇಕು.ಪ್ರತಿ ಪಾಕ್ಷಿಕ ಗ್ಯಾಸ್ ಏಜೆನ್ಸಿಗಳ ಕನ್ಸೂಮರ್ ಗ್ರಾಹಕ ಮಾಹಿತಿ ಆಹಾರ ಇಲಾಖೆಗೆ foodhsn@gmail.comಗೆ ಸಲ್ಲಿಸಬೇಕು. ಗ್ರಾಹಕರಿಂದ ದೂರ ಬಾರದ ರೀತ್ಯಾ ಕೆಲಸ ನಿರ್ವಹಿಸಲು ಹಾಗೂ ದೂರು ಬಂದಲ್ಲಿ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಇಲಾಖೆ ಉಪ ನಿರ್ದೇಶಕ ತಿಳಿಸಿದ್ದಾರೆ.