'ಜಿಲ್ಲೆ ದತ್ತು ಪಡೆವ ಅಗತ್ಯ ಕಾಂಗ್ರೆಸ್‌ಗಿಲ್ಲ'
ಕ.ಪ್ರ.ವಾರ್ತೆ , ಸಕಲೇಶಪುರ , ಅ.18
ಜಿಲ್ಲೆಯನ್ನು ದತ್ತು ತೆಗೆದುಕೊಂಡು ಅಭಿವೃದ್ಧಿ ಪಡಿಸುವ ಅಗತ್ಯ ಕಾಂಗ್ರೆಸ್‌ಗಿಲ್ಲ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ ಹೇಳಿದರು. ಬಿರಡಹಳ್ಳಿ ಗ್ರಾಮದಲ್ಲಿ ರಾಜೀವ್‌ಗಾಂಧಿ ಘಟಕದಿಂದ ಮುಖಂಡ ಕೆ.ಬಿ. ಚಂದ್ರು ನಿವಾಸದಲ್ಲಿ, ಕಾಂಗ್ರೆಸ್‌ನ್ನು ಬಲಪಡಿಸುವ ಉದ್ದೇಶದಿಂದ ನಡೆದ ಜಿಲ್ಲಾ ಮತ್ತು ತಾಲೂಕು ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಕಾಂಗ್ರೆಸ್ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದರು.
ಈ ತಾಲೂಕು ಸಮಸ್ಯೆಗಳಿಂದ ತತ್ತರಿಸಲು ಕಾರಣ ಕಾಂಗ್ರೆಸ್ ಪಕ್ಷವಲ್ಲ. ಕಾರಣರು ಯಾರು ಎಂಬುದು ಇಲ್ಲಿಯ ಜನರಿಗೆ ಅರ್ಥವಾಗಿದೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಫಲಿತಾಂಶ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ರಾಜ್ಯ ಕೆಪಿಸಿಸಿ ಕಾರ್ಯದರ್ಶಿ ಎಸ್. ಎಂ. ಆನಂದ್, ಶಾಸಕ ವೈ.ಎನ್. ರುದ್ರೇಶಗೌಡ, ಮಾಜಿ ಶಾಸಕ ಎಚ್. ಎಂ. ವಿಶ್ವನಾಥ್, ಮಾಜಿ ರಾಜ್ಯಸಭಾ ಸದಸ್ಯ ಎಚ್.ಕೆ. ಜವರೆಗೌಡ, ರಾಜ್ಯ ಕೆಪಿಸಿಸಿ ಸದಸ್ಯ ಸದಾಶಿವ ಭಂಡಾರಿ, ತಾಲೂಕು ಮಾಜಿ ಅಧ್ಯಕ್ಷ ಎಚ್.ಬಿ. ಕಾಂತರಾಜ್, ಜಿಪಂ ಮಾಜಿ ಸದಸ್ಯ ಡಿ.ಸಿ. ಸಣ್ಣಸ್ವಾಮಿ, ರಾಜ್ಯ ಅಲ್ಪಸಂಖ್ಯಾತರ ವಿಭಾಗದ ಸಹ ಸಂಚಾಲಕ ಬಿ.ಎ. ರೆಹಮತ್‌ಉಲ್ಲಾ, ರಾಜೀವ್‌ಗಾಂಧಿ ಘಟಕ ಜಿಲ್ಲಾಧ್ಯಕ್ಷ ಜಿ.ವಿ. ರಾಜಪ್ಪ, ತಾಲೂಕು ಅಧ್ಯಕ್ಷ ಹಾನುಬಾಳ್ ಭಾಸ್ಕರ್, ತುಳಸಿಪ್ರಸಾದ್, ಹುರುಡಿ ಅರುಣ್, ಸುಂದರಮ್ಮ, ಮನ್ಸೂರ್, ಬಾಲರಾಜ್ ಇತರರು ಇದ್ದರು.