ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬದುಕುವ ಕಲೆ ಹೇಳಿಕೊಟ್ಟ ಮಹರ್ಷಿ

Vishwanath S
Updated On : 19 Oct 2013, 12:04 pm

ಕ.ಪ್ರ.ವಾರ್ತೆ ,  ಸಕಲೇಶಪುರ ,  ಅ. 18
ಗ್ರಂಥದ ಮೂಲಕ  ಬದುಕುವ ಕಲೆಯನ್ನು  ಹೇಳಿಕೊಟ್ಟ ವಾಲ್ಮೀಕಿ ಮಹರ್ಷಿ ಮಹಾನ್ ಮಾನವತಾವಾದಿ ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಹೇಳಿದರು.
ಶುಕ್ರವಾರ ಪಟ್ಟಣದ ಪುರಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೀಳು ಕುಲದಿಂದ ಜನಿಸಿ ಭೂಮಂಡಲ ಇರುವವರೆಗೆ ಶಾಶ್ವತವಾಗಿರುವಂತಹ  ಶ್ರೇಷ್ಠ ಸಾಧನೆ ಮಾಡಿದ ವಾಲ್ಮೀಕಿ ಇಂದಿನ ಜನರಿಗೆ ದಾರಿ ದೀಪವಾಗಿದ್ದಾರೆ. ಬದುಕಿನ ಬದಲಾವಣೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವಾಲ್ಮೀಕಿ ರಾಮಾಯಣ ಓದುವುದು ಅಗತ್ಯವಿದೆ. ಆದರೆ ಇಂದಿನ ಜನರಿಗೆ ಒಳ್ಳೆಯ ಚಿಂತನೆಯೇ ಇಲ್ಲವಾಗಿದೆ ಎಂದು ವಿಷಾದಿಸಿದರು.
ಪುರಸಭೆ ಅಧ್ಯಕ್ಷ ಸತೀಶ್ ಮಾತನಾಡಿ, ವಾಲ್ಮೀಕಿ ಜನಿಸಿದಂತಹ ಭೂಮಿಯಲ್ಲಿ ನಾವಿರುವುದು ಹೆಮ್ಮೆಯ ವಿಚಾರ ಎಂದರು. ಪುರಸಭೆ ಸದಸ್ಯ ನಿರ್ವಾಣಯ್ಯ  ಮಾತನಾಡಿ, ಕಾಟಾಚಾರದ ಕಾರ್ಯಕ್ರಮಗಳನ್ನು ಆಚರಿಸಿತ್ತಿರುವುದು ಅರ್ಥಹೀನ. ಸರ್ಕಾರಿ ರಜೆ ನೀಡಿ  ಜಯಂತಿ ಆಚರಿಸುತ್ತಿರುವುದರಿಂದ ಜಯಂತಿ ಕಾರ್ಯಕ್ರಮಗಳಿಗೆ ಜನರ ಸ್ಪಂದನೆ ಇಲ್ಲದಾಗಿದೆ. ಆದ್ದರಿಂದ ಮಹಾತ್ಮರ ಜಯಂತಿ ಕಾರ್ಯಕ್ರಮಗಳಿಗೆ ರಜೆ ನೀಡುವುದನ್ನು ಸರಕಾರ ನಿಷೇದಿಸ ಬೇಕು ಎಂದು ಆಗ್ರಹಿಸಿದರು.
ಜಿಪಂ ಸದಸ್ಯೆ  ಸುಲೋಚನಾ ರಾಮಕೃಷ್ಣ,ತಾಪಂ ಸದಸ್ಯೆ  ಸಿದ್ದಯ್ಯ,ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷೆ ಪಾರ್ವತಿ, ಪುರಸಭೆ ಸದಸ್ಯರು ಇದ್ದರು.
ಹೀಗೊಂದು  ಭಾಷಣ: ಎಸ್ಸಿ, ಎಸ್ಟಿಗಳ ಉನ್ನತಿಗಾಗಿ ಹೋರಾಟ ಮಾಡಿದ ಮಹಾನ್ ವ್ಯಕ್ತಿ ವಾಲ್ಮೀಕಿ ಅವರು ಬರೆದಿರುವ ಕಥೆಯನ್ನು ಎಲ್ಲರು ತಪ್ಪದೆ ಓದಬೇಕು ಎಂದು ತಾಪಂ ಅಧ್ಯಕ್ಷೆ ಮಂಜುಳ ಹೇಳಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement