ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸೌಜನ್ಯಾ ಕೊಲೆ ನಡೆದಿದ್ದು ಬಿಜೆಪಿ ಕಾಲದಲ್ಲಿ: ಸಚಿವ

Vishwanath S
Updated On : 19 Oct 2013, 12:05 pm

ಕನ್ನಡಪ್ರಭ ವಾರ್ತೆ, ಹಾಸನ, ಅ.18
ಧರ್ಮಸ್ಥಳದ ಧರ್ಮಾಧಿಕಾರಿ ವಿಚಾರವಾಗಿ ನಾನು ಏನೂ ಮಾತನಾಡುವುದಿಲ್ಲ. ಸೌಜನ್ಯಾ ಕೊಲೆ ಪ್ರಕರಣ ನಡೆದಿದ್ದು ಬಿಜೆಪಿ ಕಾಲದಲ್ಲಿ. ವಿರೋಧ ಪಕ್ಷದ ಮುಖಂಡರ ಮಾತುಗಳಿಗೆ ಹೆಚ್ಚಿನ ಮಹತ್ವ ಕೊಡುವುದಿಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.
  ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡುತ್ತಿದ್ದ ಸಚಿವರು, ಮುಂಬರುವ ಲೋಕಾಸಭಾ ಚುನಾವಣೆ ಸಮೀಕ್ಷೆಯಲ್ಲಿ ರಾಜ್ಯದೊಳಗೆ 13 ಸೀಟು ಬರುವುದೆಂದು ಹೇಳಿರುವುದು ಸುಳ್ಳು ಆಗಲಿದೆ. ಕಾಂಗ್ರೆಸ್ ಕನಿಷ್ಟ   20ಕ್ಕೂ ಹೆಚ್ಚಿನ ಸೀಟು ಬರುವ ವಿಶ್ವಾಸ ವ್ಯಕ್ತಪಡಿಸಿದರು.
 ಸಿಎಂ ಬಗ್ಗೆ ಅಸಮಾಧಾನವಿಲ್ಲ: ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ ಕಾರ್ಯವೈಖರಿ ಬಗ್ಗೆ ಪಕ್ಷದೊಳಗೆ ಯಾರಿಗೂ ಅಸಮಾಧಾನ ಇಲ್ಲ. ನಾವೆಲ್ಲರೂ ಅವರ ಜೊತೆಗಿದ್ದೇವೆ. ಮುಖ್ಯಮಂತ್ರಿಗಳು ಒಳ್ಳೇ ಜನಪರ ಕೆಲಸ ಮಾಡುತ್ತಿದ್ದಾರೆ. ಚುನಾವಣೆ ಕೊಟ್ಟ ಭರವಸೆಗಳ ಪೈಕಿ ಬಹುತೇಕ ಈಡೇರಿಸಿದ್ದಾರೆ, ಉಳಿದವುಗಳನ್ನು ತಿಂಗಳ ಒಳಗೆ ಸಾಕಾರಗೊಳಿಸಲಿದ್ದಾರೆ. ಇದಕ್ಕಿಂತ ಬೇಕಾ ಎಂದು ಪ್ರಶ್ನಿಸಿದರು.  
  ಇದೇ ವೇಳೆ ಕೆಲ ಶಾಸಕರು ಸಿಎಂ ನಡೆಯ ಬಗ್ಗೆ ಬೇಸರಗೊಂಡಿರುವ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಶಾಸಕರ ಎಲ್ಲಾ ಬೇಡಿಕೆಗಳನ್ನು ನಾನಾಗಲೀ, ಮುಖ್ಯಮಂತ್ರಿಯಾಗಲೀ ಸಂಪೂರ್ಣವಾಗಿ ಈಡೇರಿಸಲು ಸಾಧ್ಯವಿಲ್ಲ. ಹಾಗೆಯೇ ಜನರ ಎಲ್ಲಾ ಕೆಲಸಗಳನ್ನು ಶಾಸಕರು ಮಾಡಿಕೊಡಲು ಆಗುತ್ತಾ ಎಂದು ಸಚಿವರು ಮರು ಪ್ರಶ್ನೆ ಹಾಕಿದರು.
  ನಗರ ಸಾರಿಗೆ ವ್ಯವಸ್ಥೆಯನ್ನು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳೂ ವಿಸ್ತರಿಸಲಾಗುತ್ತಿದ್ದು, ಈಗಾಗಲೇ ಹಾಸನ ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಗರ ಸಾರಿಗೆ ಬಸ್ ಸಂಚರಿಸುತ್ತಿವೆ. ಹಾಸನ ವಿಭಾಗ ಸೇರಿದಂತೆ ಅನೇಕ ಕೆಎಸ್‌ಆರ್‌ಟಿಸಿ ವಿಭಾಗಗಳು ನಷ್ಟದಲ್ಲಿದ್ದು, ಸರಿದೂಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.
 ಇನ್ನು 2 ತಿಂಗಳಲ್ಲಿ 35 ಹೊಸ ಬಸ್ ಹಾಸನ ನಗರದಲ್ಲಿ ಸಂಚಾರ ಆರಂಭವಾಗುವುದು. ದಿನ ಕಳೆದಂತೆ ಜನಸಂಖ್ಯೆ ಹೆಚ್ಚಳವಾಗುತ್ತಿದೆ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಲು ಹೆಚ್ಚಿನ ಬಸ್ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಪೂರೈಸಲು ನೂತನ ಬಸ್ ಸಂಚಾರ ಬೇಕಾಗಿದೆ. ರಾಜ್ಯದಲ್ಲಿ ಇನ್ನು 24 ಬಸ್ ಡಿಪೋ ನೀಡಲಾಗುವುದು. ಪ್ರತಿ ಡಿಪೋಗೆ ನಿರ್ವಹಣೆಗಾಗಿ 6 ಕೋಟಿ  ರು. ನೀಡಲಾಗುವುದು ಎಂದು ಭರವಸೆ  ನೀಡಿದರು.
 ಹಾಸನ  ಜಿಲ್ಲೆಯ 50 ಹಳ್ಳಿಗಳಿಗೆ ಸಾರಿಗೆ ಬಸ್ ನೀಡುವ ಚಿಂತನೆ ಮಾಡಲಾಗಿದೆ. ಸದ್ಯದಲ್ಲೆ ಕಾರ್ಯನಿರ್ವಹಿಸುವುದು. ರಾಜ್ಯದ ಕೆಲ ಭಾಗಗಳಲ್ಲಿ ಖಾಸಗಿ ಬಸ್ ಸಾರಿಗೆ ಬಸ್‌ನೊಂದಿಗೆ ಪೈಪೂಟಿ ನೀಡಲಾಗುತ್ತಿದೆ.
 ಅಂತಹ ಜಾಗವನ್ನು ಗುರುತಿಸಿ ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್ ಹಾಕಲಾಗುತ್ತದೆ. ನಗರದಲ್ಲಿ ಹೆಚ್ಚಿನ ಆಟೋ ಇರುವುದರಿಂದ ಹೆಚ್ಚಿನ ದರ ನೀಡಿ ಪ್ರಯಾಣಿಕರು ಹೋಗಲು ಕಷ್ಟವಾಗುತ್ತಿದೆ. ನಿಯಂತ್ರಣಕ್ಕಾಗಿ ಸಾರಿಗೆ ಬಸ್ ಬಿಡಲಾಗುವುದು ಎಂದು ತಿಳಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ. ಶಿವರಾಂ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಾಗೂರು ಮಂಜೇಗೌಡ, ಕಾಂಗ್ರೆಸ್ ಕಾರ್ಯಕರ್ತರು ಇನ್ನೂ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement