ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಕೊರಕಲು
ರಾಮನಾಥಪುರ: ರಾಮನಾಥಪುರದಿಂದ ಕೊಣನೂರಿಗೆ ಹೋಗುವ ಮುಖ್ಯರಸ್ತೆಯ ಮಾರ್ಗ ಮಧ್ಯದಲ್ಲಿ ಸಿಗುವ ಕೂಡಲೂರು ಗ್ರಾಮದ ಇಳಿಜಾರು ರಸ್ತೆ ಬದಿಯಲ್ಲಿ ವಿಪರೀತ ಮಳೆಯಿಂದಾಗಿ ಆಳವಾದ ಗುಂಡಿಗಳು ಬಿದ್ದಿವೆ. ಇದರಿಂದ ದಿನ ನಿತ್ಯ ನೂರಾರು ವಾಹನಗಳು ಸಂಚರಿಸುವ ಈ ಮುಖ್ಯ ರಸ್ತೆ ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಈ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚುವ ಪ್ರಯತ್ನ ಮಾಡಲಾಗುತ್ತಿಲ್ಲ. ಈಗಾಗಲೇ ಸಂಬಂಧಿಸಿದ ಮುಖ್ಯ ಎಂಜಿನಿಯರ್ಗಳು ಕೆಲವು ಗುತ್ತಿಗೆದಾರರಿಗೆ ರಸ್ತೆಯಲ್ಲಿನ ಗುಂಡಿ ಮುಚ್ಚುವ ಕಾಮಗಾರಿ ನೀಡಿದ್ದರೂ ಆ ಗುತ್ತಿಗೆದಾರರಿಗೆ ಈ ರಸ್ತೆ ಬದಿಯಲ್ಲೆ ಇರುವ ಇಷ್ಟು ದೊಡ್ಡ ಗುಂಡಿ ಕಾಣಿಸುತ್ತಿಲ್ವ ಅಥವಾ ಇದನ್ನು ಪೂರ್ಣಗೊಳಿಸಿದರೆ ಸರಿಯಾದ ಮೊತ್ತ ದೊರಕಲಾರದು ಎಂದು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕಾರ್ಯಪ್ರವೃತ್ತರಾಗಿ ಈ ಗುಂಡಿ ಮುಚ್ಚಿಸುವ ಮೂಲಕ ಮುಂದಾಗ ಬಹುದಾದ ಅನಾಹುತ ತಪ್ಪಿಸುವಂತೆ ಆಗ್ರಹಿಸಿದ್ದಾರೆ.