ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಮತಾಂತರ ಖಂಡಿಸಿ ಜಾಗೃತಿ ಸಮಾವೇಶ

Rashmi Kasaragodu
Updated On : 28 Oct 2013, 11:24 am

ಕ.ಪ್ರ. ವಾರ್ತೆ೤ ಹಳೇಬೀಡು೤ ಅ.28
ಜಗತ್ತಿಗೆ ಶಾಂತಿ ಸಂದೇಶ ಸಾರಿದ ಏಸುವಿನ ಹೆಸರಿನಲ್ಲಿ ಹಳ್ಳಿಗಳಲ್ಲಿ ಘರ್ಷಣೆ ತಂದು ಅಶಾಂತಿ ತಲೆದೋರುವ ಕಾರ್ಯವನ್ನು ಕೆಲವರು ಮಾಡುತ್ತಿರುವುದು ವಿಪರ್ಯಾಸ ಎಂದು ಚಿತ್ರದುರ್ಗದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಹೋಬಳಿಯ ನರಸೀಪುರದಲ್ಲಿ ಭಾನುವಾರ ನಡೆದ ಮತಾಂತರ ಖಂಡಿಸಿ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಬಹು ಹಿಂದಿನಿಂದಲೂ ದೇಗುಲ, ಮಸೀದಿ ಹಾಗೂ ಚರ್ಚ್ಗಳ ನಿರ್ಮಾಣದಲ್ಲಿ ಬೋವಿ ಜನಾಂಗದವರು ಬೆವರು ಹರಿಸಿದ್ದಾರೆ. ದೇಶಕ್ಕೆ ಅನ್ನ ನೀಡುವ ನೇಗಿಲಯೋಗಿಯಿಂದ ಐಷಾರಾಮಿ ಕಟ್ಟಡ ನಿರ್ಮಿಸುವ ಶ್ರೀಮಂತನವರೆಗೂ ಬೋವಿ ಜನಾಂಗದ ಅಗತ್ಯವಿದೆ ಎಂದರು.
ಬೋವಿಗಳು ನಾಗರಿಕತೆಯ ಒಂದು ಭಾಗವಾಗಿದ್ದಾರೆ.
 ಕ್ಷಣಿಕ ಸುಖ ಹಾಗೂ ಆಮಿಶಕ್ಕೆ ಬಲಿಯಾಗಿ ಹಿಂದುಳಿದ ವರ್ಗದವರು ಮತಾಂತರಕ್ಕೆ ಬಲಿಯಾಗುತ್ತಿದ್ದಾರೆಯೇ ಹೊರತು ಭಕ್ತಿ ಹಾಗೂ ಸ್ವಇಚ್ಛೆಯಿಂದ ಮತಾಂತರ ಹೊಂದುತ್ತಿಲ್ಲ ಎಂದು ಸ್ವಾಮೀಜಿ ನುಡಿದರು.
ಸನಾತನ ಹಿಂದು ಧರ್ಮ ಯುಗ ಯುಗಗಳಿಂದ ಅನೇಕ ಸಾಧು ಸಂತರ ನಾನಾ ಆಚರಣೆ ಹಾಗೂ ಪ್ರಚಾರಗಳಿಂದ ಹುಟ್ಟಿ ಬೆಳೆದಿದೆ.
 ಮತ್ತೊಂದು ಧರ್ಮದ ಆಚರಣೆಯಿಂದ ಸುಲಭವಾಗಿ ಬದುಕಲು ಸಾಧ್ಯವಿಲ್ಲ. ಎರಡೂ ದೋಣಿಯ ಮೇಲೆ ಕಾಲಿಟ್ಟಂತೆ ಬೇರೊಂದು ಧರ್ಮಕ್ಕೆ ಸೇರಿದರೆ ಎಲ್ಲಿಯೂ ನೆಲೆ ಇರುವುದಿಲ್ಲ.
 ಸಂಬಂಧ ಬೆಳೆಸುವುದಕ್ಕೂ ಕಷ್ಟವಾಗುತ್ತದೆ. ಎರಡೂ ಧರ್ಮಗಳು ಅತಂತ್ರ ಪರಿಸ್ಥಿತಿ ಎದುರಿಸಬೇಕಾಗುತ್ತದ ಎಂದು ಸಿದ್ದರಾಮೇಶ್ವರ ಸ್ವಾಮೀಜಿ ತಿಳಿಸಿದರು.
ಬೋವಿ ಸಂಘದ ಜಿಲ್ಲಾ ಅಧ್ಯಕ್ಷ ದಿಲೀಪ್, ರಂಗಸ್ವಾಮಿ, ಮುಖಂಡ ಎಚ್.ಎಂ.ಗೋವಿಂದಪ್ಪ,ಗ್ರಾಪಂ ಅಧ್ಯಕ್ಷ  ದೊಡ್ಡಸ್ವಾಮಿ, ಅಂಚಿಹಳ್ಳಿ ಸೋಮಶೇಖರ್, ವೆಂಕಟೇಶ್, ಶೇಖರಣ್ಣ, ಅಣ್ಣಪ್ಪ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement