ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಯುವಕರಲ್ಲಿನ ಸುಪ್ತಶಕ್ತಿ ಜಾಗೃತಿಗೊಳಿಸಬೇಕು: ಡಾ.ವಾಮನ ಶೆಣೈ

Rashmi Kasaragodu
Updated On : 28 Oct 2013, 11:24 am

ಕ.ಪ್ರ. ವಾರ್ತೆ೤ ಆಲೂರು೤ ಅ.28
ಪ್ರಪಂಚದಲ್ಲೇ ಭಾರತ ಅತಿ ಹೆಚ್ಚು ಯುವ ಶಕ್ತಿಯನ್ನು ಹೊಂದಿದ್ದು, ಅವರಲ್ಲಿ ಅಡಗಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುವ ಕೆಲಸ ಶರವೇಗದಲ್ಲಿ ಆಗಬೇಕಿದೆ ಎಂದು ಆರ್ಎಸ್ಎಸ್ ಮಂಗಳೂರು ವಿಭಾಗದ ಸಂಚಾಲಕ ಡಾ.ವಾಮನ ಶೆಣೈ ತಿಳಿಸಿದರು.
  ಪಟ್ಟಣದಲ್ಲಿ ಆಯೋಜಿಸಿದ್ದ ಪಥ ಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವಾಮಿ ವಿವೇಕಾನಂದರ 150ನೇ ಹುಟ್ಟು ಹಬ್ಬವನ್ನು ವರ್ಷಪೂರ್ತಿ ಆಚರಿಸಬೇಕು. ಸಮಾಜದ ದೀನ ದಲಿತ ದುರ್ಬಲರ ಅವಕಾಶ ವಂಚಿತರ ಸೇವೆ ಮಾಡಬೇಕೆಂಬ ವಿವೇಕಾನಂದರ ನುಡಿಯನ್ನು ಸಾಕಾರಗೊಳಿಸಿ ಅವರು ಸಮಾಜ ಸುಧಾರಣೆಗಾಗಿ ಕೈಗೊಂಡ ವಿಚಾರಗಳನ್ನು ತಾಲೂಕಿನ ಪ್ರತಿಯೊಂದು ಗ್ರಾಮದ ಪ್ರತಿ ಮನೆಗಳಿಗೆ ತಲುಪಿಸಲು ಸಂಘದ ಪ್ರತಿ ಸದಸ್ಯರು ಕೆಲಸ ಮಾಡಬೇಕೆಂದರು.
 ಪಠ್ಯಗಳಲ್ಲಿ ವಿವೇಕಾನಂದರ ಚಿಂತನೆಗಳನ್ನು ಅಳವಡಿಸದಿಲ್ಲದಿರುವುದರಿಂದ ನಾವುಗಳು ಅವರ ವಿಚಾರಧಾರೆಗಳನ್ನು ಪ್ರತಿಯೊಬ್ಬರಿಗೆ ತಿಳಿಸುವುದರ ಜೊತೆಗೆ ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕೆಂದರು.
 ಪಟ್ಟಣದ ಕಸಾಪ ಭವನದಿಂದ ನೂರಾರು ಗಣ ವೇಷಧಾರಿಗಳು ಹೊರಟು ಪಟ್ಟಣದ ಮುಖ್ಯ ರಸ್ತೆಯಿಂದ ಕೆ.ಇ.ಬಿ. ವೃತ್ತ ಹಳೆಸಂತೆ ಬೀದಿ, ಕೋರ್ಟ್ ಸರ್ಕಲ್ ಮೂಲಕ ಖಾಜಿ ಮೊಹಲ್ಲಾ, ಹಳೆಆಲೂರು ರಸ್ತೆ ಮೂಲಕ ಹೌಸಿಂಗ್ ಬೋರ್ಡ್ ಹಾದು ಸುಣ್ಣದ ಬೀದಿಯಿಂದ ಕಸಾಪ ಭವನದವರೆಗೆ ಅಕರ್ಷಕ ಪಥ ಸಂಚಲನ ನಡೆಸಿದರು. ಪಿಎಸ್ಐ ಸತೀಶ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement