ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಇಂದು ಜಿಲ್ಲಾ ಮಟ್ಟದ ಯುವಜನೋತ್ಸವ

Vishwanath S
Updated On : 25 Oct 2013, 12:08 pm

ಹಾಸನ: ಜಿಲ್ಲಾ ಮಟ್ಟದ ಯುವಜನೋತ್ಸವವನ್ನು ಅ.25ರಂದು ಬೆಳಗ್ಗೆ 9ರಿಂದ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ನಡೆಸಲಾಗುವುದು.
ಈ ಯುವಜನೋತ್ಸವದಲ್ಲಿ ಜಿಲ್ಲೆಯ 15ರಿಂದ 35 ವರ್ಷ ಒಳಪಟ್ಟ ಎಲ್ಲಾ ನೋಂದಾಯಿತ ಮತ್ತು ನೋಂದಾಯಿತವಲ್ಲದ ಯುವಕ ಸಂಘಗಳು, ಮಹಿಳಾ ಸಂಘಗಳು ಮತ್ತು ಮಹಿಳಾ ಮಂಡಳಿಗಳ ಸದಸ್ಯರು, ಕಾಲೇಜು ವಿದ್ಯಾರ್ಥಿಗಳು, ಸಂಗೀತ ಮತ್ತು ನೃತ್ಯ ಶಾಲೆಯ ಕಲಾವಿದರು ಭಾಗವಹಿಸಲು ಅರ್ಹರು. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳನ್ನು ರಾಜ್ಯ ಯುವಜನೋತ್ಸವದಲ್ಲಿ ಭಾಗವಹಿಸಲು ಕಳುಹಿಸಲಾಗುವುದು.
ಸ್ಪರ್ಧಿಗಳು ಕಡ್ಡಾಯವಾಗಿ ತಮ್ಮ ಜನ್ಮ ದಿನಾಂಕದ ದೃಢೀಕರಣದ ಬಗ್ಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಶಾಲೆಯ ಮುಖ್ಯೋಪಾದ್ಯಾಯರು ನೀಡಿದ ಜನ್ಮ ದಿನಾಂಕದ ಪ್ರಮಾಣ ಪತ್ರ ಹೊಂದಿರತಕ್ಕದ್ದು, ಮತ್ತು ಸಮವಸ್ತ್ರಗಳನ್ನು ತಾವೇ ತರಬೇಕು.
ಸಂಬಂಧಪಟ್ಟವರು ಕೆಳಕಂಡ ಸ್ಪರ್ಧೆಗಳಲ್ಲಿ ಭಾಗವಹಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳನ್ನು ಕಳುಹಿಸಿ ಕೊಟ್ಟು ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಿದೆ. ಭಾಗವಹಿಸುವ ಸ್ಫರ್ಧಿಗಳಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಮಾಡಲಾಗುವುದು. ಯಾವುದೇ ರೀತಿಯ ಭತ್ಯೆ ನೀಡಲಾಗುವುದಿಲ್ಲ. ಯುವಜನೋತ್ಸವದಲ್ಲಿ ನಡೆಸುವ ಸ್ಪರ್ಧೆಗಳ ವಿವರ(ಯುವಕ/ಯುವತಿಯರಿಗೆ ಪ್ರತ್ಯೇಕ ಸ್ಪರ್ಧೆ ಇಲ್ಲ).
ಭಾಗವಹಿಸುವ ಸ್ಪರ್ಧಿಗಳು ಅ.25ರಂದು ಬೆಳಗ್ಗೆ 9ಕ್ಕೆ ನಗರದ ಕನ್ನಡ ಸಾಹಿತ್ಯ ಪರಿಷತ್ ವನದಲ್ಲಿ ವರದಿ ಮಾಡಲು ಕೋರಿದೆ. ವಿವರಕ್ಕೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಾಸನ ಇವರನ್ನು ಖುದ್ದಾಗಿ ಅಥವಾ ದೂ. 246056 ಸಂಪರ್ಕಸಲು ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement