ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಬಿಜೆಪಿ ಕಾರ್ಯಕರ್ತರ ಸಮಾವೇಶ

Vishwanath S
Updated On : 25 Oct 2013, 12:08 pm

ಸಕಲೇಶಪುರ: ಈ ಬಾರಿ ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರ ಹಿಡಿಯಬೇಕು ಎಂಬುದು ಜನರ ಆಸೆಯಾಗಿದ್ದು, ಜಿಲ್ಲೆಯಲ್ಲೂ ಕಾರ್ಯಕರ್ತರು ಈ ನಿಟ್ಟಿನಲ್ಲಿ ಕೆಲಸ  ಮಾಡಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ರೇಣುಕುಮಾರ್ ಸಲಹೆ ನೀಡಿದರು.
ಪಟ್ಟಣದ ಓಂ ಮಂದಿರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ತಾಲೂಕು ಮಟ್ಟದ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷರು,   ನ.16ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶದ ಪೂರ್ವಭಾವಿಯಾಗಿ ಪ್ರತಿ ಹೋಬಳಿ ಮತ್ತು ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಕಾರ್ಯಕರ್ತರ ಸಭೆ ನಡೆಸಲಾಗುವುದು ಎಂದರು.
ತಾಲೂಕು ಅಧ್ಯಕ್ಷ ಕಾಮನಳ್ಳಿ ರಾಜಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಜೈಮಾರುತಿ ದೇವರಾಜ್, ಪ್ರಧಾನ ಕಾರ್ಯದರ್ಶಿ ಉದಯಕುಮಾರ್, ಪ್ರಸನ್ನಕುಮಾರ್, ಮಾಜಿ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ಪರಿಶಿಷ್ಟ ಜಾತಿ ಜಿಲ್ಲಾಧ್ಯಕ್ಷ ಡಾ. ನಾರಾಯಣಸ್ವಾಮಿ, ಮುಖಂಡರಾದ ಎ.ವಿ. ನರೇಶ್, ಪುರಸಭಾ ಸದಸ್ಯ ಮೋಹನ್ ಸೇರಿದಂತೆ ಹಲವು ಮುಖಂಡರು ಇದ್ದರು.
ಮೊಸಳೆ ಗ್ರಾಮದಲ್ಲಿ ಸ್ವರ್ಣ ಗೌರಿ ವಿಸರ್ಜನಾ ಮಹೋತ್ಸವ
ಜಾವಗಲ್: ಹೋಬಳಿ ಮೊಸಳೆ ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ 125ನೇ ವರ್ಷದ ಸ್ವರ್ಣ ಗೌರಮ್ಮನವರ ವಿಸರ್ಜನಾ ಮಹೋತ್ಸವವು ವಿಜೃಂಭಣೆ ಮತ್ತು ಸಂಭ್ರಮದಿಂದ ಗುರುವಾರ ನಡೆಯಿತು. ಸುಮಾರು 45 ದಿವಸಗಳ ಕಾಲ ಪ್ರತಿನಿತ್ಯ ವಿಶೇಷ ಪೂಜೆ, ಅರ್ಚನೆ, ಮಹಾಮಂಗಳಾರತಿ ಹಾಗೂ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬುಧವಾರ ರಾತ್ರಿ ಸ್ವರ್ಣ ಗೌರಮ್ಮನವರನ್ನು ವಿದ್ಯುದ್ದೀಪ ಮತ್ತು ಪುಷ್ಪಾಲಂಕೃತ ವಾಹನದಲ್ಲಿ ಶೃಂಗರಿಸಿ, ಜೊತೆಗೆ ಗ್ರಾಮ ದೇವತೆಗಳಾದ ರಾಮಲಿಂಗೇಶ್ವರಸ್ವಾಮಿ, ವೀರಭದ್ರೇಶ್ವರಸ್ವಾಮಿ ಮತ್ತು ಆಂಜನೇಯಸ್ವಾಮಿಯವರ ಉತ್ಸವ ಮೂರ್ತಿಗಳೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ಆಕರ್ಷಕ ಮದ್ದು, ಗುಂಡುಗಳ ಸದ್ದಿನೊಂದಿಗೆ, ಬ್ಯಾಂಡ್ ಸೆಟ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು. ಗುರುವಾರ ಬೆಳಗ್ಗೆ ಗುಗ್ಗುಳೋತ್ಸವ ಏರ್ಪಡಿಸಿ ಮಧ್ಯಾಹ್ನ ಊರಿನ ಮುಂಭಾಗದ ಕಲ್ಯಾಣಿಯಲ್ಲಿ ಸ್ವರ್ಣ ಗೌರಮ್ಮ ಅವರನ್ನು ವಿಸರ್ಜಿಸಲಾಯಿತು. ಕಲ್ಯಾಣಿಯಲ್ಲಿ ನೀರು ಇಲ್ಲದೆ ಪಕ್ಕದ ಕೊಳವೆಬಾವಿಯಿಂದ ನೀರು ತುಂಬಿಸಲಾಗಿತ್ತು.
ಅಂಬೇಡ್ಕರ್ ಭವನಕ್ಕೆ ಮುಕ್ತಿ
ಬೇಲೂರು: ಸದಾ ತರಕಾರಿ ಮಾರಾಟಗಾರರಿಂದ ಸುತ್ತುವರಿದು ತಾಲೂಕಿನ ಜನರು ಅಂಬೇಡ್ಕರ್ ಭವನ ಎಲ್ಲಿ ಇದೆ ಎಂದು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದ್ದ ಸಂದರ್ಭದಲ್ಲಿ ಬೇಲೂರು ಪುರಸಭೆ ಫುಟ್‌ಪಾತ್ ತೆರವು ಕಾರ್ಯದಿಂದ ಅಂಬೇಡ್ಕರ್ ಭವನಕ್ಕೆ ನಿಜಕ್ಕೂ ಮುಕ್ತಿ ನೀಡಿದಂತಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ಇರುವ ಅಂಬೇಡ್ಕರ್ ಭವನ ಇದ್ದು, ಕಳೆದ 8 ವರ್ಷಗಳಿಂದ ಭವನದ ಸುತ್ತ ತರಕಾರಿ ಮಾರಾಟಗಾರರು ಮತ್ತು ಕೋಳಿ ಅಂಗಡಿಗಳ ಹಾವಳಿಯಿಂದ ಭವನವನ್ನು ಮುಚ್ಚಿ ಹೋಗಿತ್ತು.
ಮಾಜಿ ಸೈನಿಕರ ಮಕ್ಕಳಿಗೆ ಶಿಷ್ಯ ವೇತನ
ಹಾಸನ: ಕೇಂದ್ರಿಯ ಸೈನಿಕ ಮಂಡಳಿ, ನವದೆಹಲಿ ಇವರು ಪ್ರಧಾನ ಮಂತ್ರಿಗಳ ಶಿಷ್ಯ ವೇತನ ಯೋಜನೆ ಅಡಿಯಲ್ಲಿ 2013-2014ನೇ ಸಾಲಿಗೆ ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾ ಸಂಸ್ಥೆಗಳಲ್ಲಿ ವೃತ್ತಿಪರ ಪದವಿಗಳಾದ ಂಇಇಖ, ಇಉಖ, ಇಆಂಖ, ಇಏಂಖ, ಇ.ಖ್ಛ(ಃ್ಡ್ಠಡ್ಝಟ್ಜಿ), ಇಊ, ಇ ಖಿಝ್ಛ, ಇಇಆ, ಇಇಂ, ಂಇಆ, ಂಈಆ ಇತ್ಯಾದಿ ಕೋರ್ಸ್‌ಗಳನ್ನು ಮಾಡುತ್ತಿರುವ ಮಾಜಿ ಸೈನಿಕರ ಮಕ್ಕಳಿಂದ ಶಿಷ್ಯ ವೇತನಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನ.15 ಕೊನೆ ದಿನ. ವಿವರಕ್ಕೆ ದೂ. 08172- 250465 ಸಂಪರ್ಕಿಸಬಹುದು.
ಅರ್ಜಿ ಆಹ್ವಾನ
ಹಾಸನ: ಜಿಲ್ಲೆಯಲ್ಲಿನ ಹಿಂದುಳಿದ ವರ್ಗಗಳ ಅಂದರೆ ಪ್ರವರ್ಗ-1, 2ಎ, 3ಎ, ಮತ್ತು 3ಬಿಗೆ ಸೇರಿರುವ ವಿದ್ಯಾರ್ಥಿಗಳು ಮಾತ್ರ ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಕಾರ್ಯಕ್ರಮಕ್ಕಾಗಿ ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅ.29 ಕೊನೆಯ ದಿನ.
ಹುದ್ದೆ ಭರ್ತಿ ರ್ಯಾಲಿ
ಹಾಸನ: ಭಾರತಿಯ ಭೂ ಸೇನಾ ಪಡೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರಿಕಲ್, ಎಸ್‌ಕೆಟಿ, ನರ್ಸಿಂಗ್ ಅಸಿಸ್ಟೆಂಟ್, ಟ್ರೇಡ್‌ಮೆನ್ ಹಾಗೂ ಡಿಎಸ್‌ಸಿ ಹುದ್ದೆಗಳಿಗಾಗಿ ಭರ್ತಿ ರ್ಯಾಲಿಯನ್ನು ನ.6ರಿಂದ ನ.14ರವರೆಗೆ ಮಂಡ್ಯದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಿದ್ದಾರೆ. ಆಸಕ್ತ ಅವಿವಾಹಿತ ಯುವಕರು ರ್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement