ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

'ಸರ್ಕಾರದ ಸವಲತ್ತು ಜನತೆಗೆ ತಲುಪಿಸಲು ಜನಪ್ರತಿನಿಧಿ, ಅಧಿಕಾರಿಗಳು ಶ್ರಮಿಸಬೇಕು'

Vishwanath S
Updated On : 27 Oct 2013, 12:15 pm

ಆಲೂರು: ಸರ್ಕಾರದ ಸವಲತ್ತುಗಳನ್ನು ಸಾರ್ವಜನಿಕರಿಗೆ ಸೂಕ್ತ ರೀತಿಯಲ್ಲಿ ತಲುಪಿಸಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದು ತಾಲೂಕು ಪಂಚಾಯ್ತಿ ಅಧ್ಯಕ್ಷೆ ಯಶೋದ ತಿಳಿಸಿದರು
ಅವರು ಪಟ್ಟಣದ ತಾಲೂಕು ಪಂಚಾಯ್ತಿಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತಾಲೂಕಿನ ಪ್ರಗತಿ ಪರಿಶೀಲನೆ ನಡೆಸುತ್ತಾ ಯಾವುದೇ ಕುಂದು ಕೊರತೆಗಳನ್ನು ಜನಪ್ರತಿನಿಧಿಗಳ ಗಮನಕ್ಕೆ ತಂದರೆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲು ಸಾಧ್ಯವಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಈ ಸಾಲಿನಲ್ಲಿ ನಡೆದ ಪ್ರಗತಿ ಹಾಗೂ ಕುಂದು ಕೊರತೆಗಳನ್ನು ಸಭೆಯ ಗಮನಕ್ಕೆ ತಂದರೆ ಶೀಘ್ರ ಅವುಗಳನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಶಿಕ್ಷಣ ಅಧಿಕಾರಿ ಮಾತನಾಡಿ, ಶಾಲಾ ಸಮವಸ್ತ್ರ ಪಠ್ಯ ಪುಸ್ತಕ ವಿತರಣೆ, ಪೌಢಶಾಲಾ ಮಕ್ಕಳಿಗೆ ಕರಾಟೆ ಶಾಲೆ ಪ್ರಾರಂಭ, ಆಗಸ್ಟ್‌ನಿಂದ ಕ್ಷೀರ ಭಾಗ್ಯ ಯೋಜನೆ ಪ್ರಾರಂಭವಾಗಿದೆ. ಈ ಸೆಪ್ಟೆಂಬರ್‌ನಲ್ಲಿ ನಿವೃತ್ತರಾಗುವ ಶಿಕ್ಷಕರಿಗೆ ಈ ವರ್ಷಪೂರ್ತಿ ಮುಂದುವರೆಯಲು ಆದೇಶ ನೀಡಲಾಗಿದೆ ಎಂದು ಹೇಳಿದರು.
ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ, 178 ಅಂಗನವಾಡಿ ಕೇಂದ್ರಗಳಿದ್ದು 15 ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ 55 ಸ್ವಂತ ಕಟ್ಟಡದ ಅವಶ್ಯಕತೆ ಇದೆ 2013-14 ನೇ ಸಾಲಿನಲ್ಲಿ ಭಾಗ್ಯ ಲಕ್ಷ್ಮಿ ಯೋಜನೆಗೆ 38 ಫಲಾನುಭವಿಗಳ ಅರ್ಜಿ ಬಂದಿದೆ 405 ಸ್ತ್ರೀಶಕ್ತಿ ಸಂಘಗಳಿವೆ ಉದ್ಯೋಗಿನಿ ಎಂಬ ಸಾಲ ಯೋಜನೆಯಡಿ ಎಸ್.ಸಿ.ಎಸ್.ಟಿ ಮಹಿಳೆಯರಿಗೆ 10000ಸಹಾಯ ಧನ ಇತರೆಯವರಿಗೆ 7ಸಾವಿರ ಸಹಾಯಧನ ಇದ್ದು ಶೇ. 4 ರ ಬಡ್ಡಿ ದರವಿರುತ್ತದೆ.  ಈಗಿರುವ ಬಾಡಿಗೆ ಕಟ್ಟಡದ ಮಾಲಿಕರು ಕಟ್ಟಡವನ್ನು ಬಿಡಿ ಎಂದು ಒತ್ತಾಯಿಸುತ್ತಿದ್ದು, ನಮಗೆ ಶೀಘ್ರ ಕಟ್ಟಡದ ಕಟ್ಟಡದ ಅವಶ್ಯಕತೆ ಇದೆ ಎಂದರು.
ಕೃಷಿ ಇಲಾಖೆ ಅಧಿಕಾರಿ ಮಾಹಿತಿ ನೀಡಿ,  60 ಸಾವಿರ ರು. ಔಷಧಿಗಳು ಖರ್ಚಾಗಿದೆ.ಹಲವುಕಡೆ ಮಳೆಯಿಂದ ಬೆಳೆ ಹಾನಿಯಾಗಿದೆ ರೈತರು ಬೆಳೆಗಳಿಗೆ ಯಾವುದೇ ರೀತಿಯ ರೋಗಗಳು ತಗುಲಿದರೆ ಇಲಾಖೆಯಿಂದ ಸೂಕ್ತ ಮಾಹಿತಿ ಪಡೆದರೆ ಬೆಳೆಗಳನ್ನು ಉಳಿಸಿಕೊಳ್ಳಬಹುದೆಂದರು.
ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ್ ವಾಡಿಕೆಗಿಂತ 16 ಇಂಚು ಮಳೆ ಜಾಸ್ತಿಯಾಗಿದ್ದು ಬೆಳೆಗಳು ಹಾನಿಗೊಳಗಾಗಿವೆ ಇದರ ಬಗ್ಗೆ ಏನು ಕ್ರಮ ತೆಗೆದುಕೊಂಡಿದ್ದೀರಾ ಎಂದು ಕೃಷಿ ಅಧಿಕಾರಿಯನ್ನು ಪ್ರಶ್ನಿಸಿದರು. ಕೃಷಿ ಅಧಿಕಾರಿ ಈ ಬಗ್ಗೆ ಸಮರ್ಪಕ ಉತ್ತರ ನೀಡಲಾಗಲಿಲ್ಲ.
ಪಶುಪಾಲನೆ, ತೋಟಗಾರಿಕೆ,ಸಮಾಜ ಕಲ್ಯಾಣ ಇಲಾಖೆ, ರೇಷ್ಮೇ ಇಲಾಖೆ, ಜಲಾನಯನ ಇಲಾಖೆ, ಆಹಾರ ಮತ್ತು ನಾಗರಿಕ ಸೇವಾ ಇಲಾಖೆ ,ಸಾಮಾಜಿಕ ಅರಣ್ಯ ಇಲಾಖೆ ,ಅಬಕಾರಿ ಇಲಾಖೆ,ಚೆಸ್ಕಾಂ,  ವಾಟೇಹೊಳೆ, ಪಂಚಾಯತ್ ರಾಜ್  ಎಂಜಿನಿಯರಿಂಗ್  ಉಪ ವಿಭಾಗದ ಅಧಿಕಾರಿಗಳು ಇಲಾಖಾ ವರದಿ  ನೀಡಿದರು.
ತಾಪಂ ಉಪಾಧ್ಯಕ್ಷೆ ನಾಗಮ್ಮ ಸದಸ್ಯರಾದ ಕಾಂತರಾಜ್, ರೇಣುಕಾ, ಜೀವನ್, ಕಾಂತರಾಜ್, ಎಚ್.ಸಿ,ರಾಧ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement