ಅಗೋರಿಗಳ ಜೀವನ ಕ್ರಮ ವಿಶ್ಲೇಷಣೆ
ಹಾಸನ: ಅಗೋರಿಗಳು ಬುಡಕಟ್ಟು ಜನಾಂಗದವರಲ್ಲ. ಅವರು 12 ವರ್ಷಕ್ಕೊಮ್ಮೆ ಸ್ನಾನ ಮಾಡುತ್ತಾರೆ ಎಂದು ಗೋವಾ ಮೂಲದ ಕಿರಣ್ಮಸ್ಕಿ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜು ಸ್ನಾತಕೋತ್ತರ ಅಧ್ಯಯನ ವಿಭಾಗಕ್ಕೆ ಇತ್ತೀಚೆಗೆ ಭೇಟಿ ನೀಡಿ ಆದಿವಾಸಿ ಜನಾಂಗದ ಸಾಮಾಜಿಕ ಜೀವನ ಕ್ರಮದ ಬಗ್ಗೆ ಮಾತನಾಡಿದ ಅವರು, ಅಗೋರಿಗಳು ಸದಾ ಮೈಗೆ ವಿಭೂತಿ ಬಳಿದು ಕೊಂಡು ನರಮಾಂಸ ಭಕ್ಷಿಸುತ್ತ ಗಾಂಜಾ ಸೇದುವುದು ಅವರ ದಿನಚರಿ ಎಂದು ತಿಳಿಸಿದರು.
ಭಾರತದಾದ್ಯಂತ ಪರ್ಯಟನೆ ಮಾಡಿ ಬುಡಕಟ್ಟು ಸಮುದಾಯದ ಅಧ್ಯಯನ ಮಾಡಿರುವ ಕಿರಣ್ಮಸ್ಕಿಯವರು ಭಾರತದಲ್ಲಿರುವ ಬುಡಕಟ್ಟು ಜನಾಂಗದವರಿಗೆ ಯಾವುದೇ ಧರ್ಮವಿಲ್ಲ. ತಮ್ಮದೇ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದು ಯಾವುದೇ ಗಂಡು ದೇವತೆಯನ್ನು ಆರಾಧನೆ ಮಾಡದೆ ಹೆಣ್ಣು ದೇವತೆಗಳನ್ನು ಪೂಜಿಸುತ್ತಾರೆ. ನರಬಲಿ ಮತ್ತು ಪ್ರಾಣಿಬಲಿಯನ್ನು ಮಾಡುವುದಿಲ್ಲ. ಹಬ್ಬ ಹರಿದಿನಗಳಲ್ಲಿ ಮಾಂಸವನ್ನು ನೈವೇದ್ಯವಾಗಿ ನೀಡುವುದಿಲ್ಲ ಎಂದು ತಿಳಿಸಿದರು.
ನಾಗಾಲ್ಯಾಂಡಿನ ನಾಗಾ ಸಮುದಾಯದಲ್ಲಿ ಕೋಳಿ ಮತ್ತು ಇತರೆ ಮಾಂಸಗಳಿಗೆ ಕಡಿಮೆ ಬೆಲೆಯನ್ನು ನಿಗಧಿಪಡಿಸಲಾಗಿದ್ದು, ಕೇವಲ ಎಂಟು ಮತ್ತು ಹತ್ತು ರುಪಾಯಿ. ಆದರೆ ಕರಿನಾಯಿ ಮಾಂಸಕ್ಕೆ ಈ ಸಮುದಾಯದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಸಾವಿರ ರುಪಾಯಿ ನಿಗದಿಪಡಿಸುತ್ತಾರೆ. ಇತರೆ ಬಣ್ಣದ ನಾಯಿ ಮಾಂಸಕ್ಕೆ 250 ರುಪಾಯಿ ಎಂದು ಹೇಳಿದರು.
ಅರುಣಾಚಲ ಪ್ರದೇಶದಲ್ಲಿ ಯಾವುದೇ ಧರ್ಮವಿಲ್ಲ ಸೂರ್ಯ ಮತ್ತು ಚಂದ್ರನನ್ನು ಆರಾಧಿಸುತ್ತಾರೆ. ಅಂಡಮಾನ್
ನಿಕೋಬರ್ನಲ್ಲಿ ಕಟ್ಜ್ಝಿ, ಝಿಛ್ಠಛಢಿ, ್ಜ್ಠಜಛಡಿ ಛಟಿಜಛಟಛಟ್ಝಿಜಡ ,ಖಛಟಿಝಿಛಟ್ಝಡಜ ಎಂಬ 4 ವಿಧದ ಬುಡಕಟ್ಟು ಜನಾಂಗವನ್ನು ಗುರುತಿಸಲಾಗಿದೆ. ಅತಿಸಂತೋಷಭರಿತ ಬುಡಕಟ್ಟು ಜನಾಂಗವಿರುವ ಪ್ರದೇಶ ಅಂಡಮಾನ್ ನಿಕೋಬರ್ ಎಂದು ತಿಳಿಸಿದರು. ಈ ಜನಾಂಗದಲ್ಲಿ ಬಾಳೆಹಣ್ಣು ಮತ್ತು ತೆಂಗಿನಕಾಯಿ ಪ್ರಿಯರಾದ ಆಹಾರ ಪದಾರ್ಥವಾಗಿದೆ ಎಂದು ವಿವರಿಸಿದರು.