ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ದಿಡಗ ಗ್ರಾಪಂ ಅಧ್ಯಕ್ಷೆಯಾಗಿ ಪುಷ್ಪ, ಉಪಾಧ್ಯಕ್ಷರಾಗಿ ಶಂಕರೇಗೌಡ ಆಯ್ಕೆ

Rashmi Kasaragodu
Updated On : 29 Oct 2013, 11:20 am

ದಿಡಗ (ಚನ್ನರಾಯಪಟ್ಟಣ ತಾಲೂಕು): ದಿಡಗ ಗ್ರಾಮಪಂಚಾಯ್ತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಸೋಮವಾರ ಚುನಾವಣೆ ನಡೆದು, ಜೆಡಿಎಸ್ನ ಪುಷ್ಪರವಿಕುಮಾರ್ ಅಧ್ಯಕ್ಷೆಯಾಗಿ ಹಾಗೂ ಶಂಕರೇಗೌಡ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ದಿಡಗ ಗ್ರಾಮ ಪಂಚಾಯ್ತಿ ಒಟ್ಟು 21 ಸದಸ್ಯರನ್ನು ಹೊಂದಿದ್ದು, ಇವರಲ್ಲಿ ಜೆಡಿಎಸ್ 15 ಸದಸ್ಯ ಬಲಹೊಂದಿದ್ದು ಕಾಂಗ್ರೆಸ್ 6 ಸದಸ್ಯ ಬಲ ಹೊಂದಿದೆ. ಆದರೆ ಯಾವೊಬ್ಬ ಕಾಂಗ್ರೆಸ್ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಹಾಜರಾಗಿರಲಿಲ್ಲ. ನಾಲ್ಕನೇ ಅವಧಿ ಅಧಿಕಾರ ಹಿಡಿಯುವ ಅವಕಾಶ ಜೆಡಿಎಸ್ಗೆ ಒದಗಿತು.  ಸಾಮಾನ್ಯ ಮಹಿಳೆಗೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನರಿಹಳ್ಳಿ ಪುಷ್ಪ ರವಿಕುಮಾರ್  ಅವಿರೋಧವಾಗಿ ಆಯ್ಕೆಯಾದರೆ, ಬಿಸಿಎಂ ಎ. ಪುರುಷ ಸ್ಥಾನಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ನಾಗನಹಳ್ಳಿ ಶಂಕರೇಗೌಡ ಉರುಫ್ ದೇವರಾಜ್ ಅವಿರೋಧವಾಗಿ ಆಯ್ಕೆಯಾದರು.  ಚುನಾವಣಾ ಅಧಿಕಾರಿಯಾಗಿ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೃತ್ಯುಂಜಯ ಕಾರ್ಯನಿರ್ವಹಿಸಿದರು.  ಗ್ರಾಮಪಂಚಾಯ್ತಿ ಪಿಡಿಓ ಬಿ.ಆರ್. ಹರೀಶ, ಕಾರ್ಯದರ್ಶಿ ಹನುಮೇಗೌಡ ಇದ್ದರು. ನಿಕಟಪೂರ್ವ ಅಧ್ಯಕ್ಷೆ ಅನುಸೂಯ ನೂತನ ಅಧ್ಯಕ್ಷರಿಗೆ ಹಾರ ಹಾಕಿ ಅಭಿನಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement