ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಅಮಾನಿಕೆರೆಯಲ್ಲಿ ಗಣಪತಿ ಮೂರ್ತಿ ವಿಸರ್ಜನೆ

Rashmi Kasaragodu
Updated On : 29 Oct 2013, 11:22 am

ಚನ್ನರಾಯಪಟ್ಟಣ: ಪಟ್ಟಣದ ಗಣಪತಿ ಪೆಂಡಾಲ್ನಲ್ಲಿ 48 ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಸೋಮವಾರ ರಾತ್ರಿ ವಿಸರ್ಜಿಸಲಾಯಿತು. ಪಟ್ಟಣಕ್ಕೆ ಹೊಂದಿಕೊಂಡಿರುವ ಅಮಾನಿಕೆರೆಯಲ್ಲಿ ಗಣಪತಿ ಮೂರ್ತಿಯನ್ನು ವಿಶೇಷ ಈಜುಗಾರರ ನೆರವಿನಲ್ಲಿ ಮೂರ್ತಿಗೆ ಕೆರೆಯ ಬಳಿ ಪೂಜೆ ಸಲ್ಲಿಸಿ ನಂತರದಲ್ಲಿ ವಿಸರ್ಜಿಸಲಾಯಿತು. ಸೋಮವಾರ ಮುಂಜಾನೆಯಿಂದ  ಮೂರ್ತಿಯನ್ನು ಪಟ್ಟಣದ ಕಲಾವಿದ ರವೀಂದ್ರ ಅವರು ಗೋಲ್ಟನ್ ಪಲ್ಲಕ್ಕಿಯಲ್ಲಿ ಅಲಂಕರಿಸಿ ಸ್ತಬ್ಧ ಚಿತ್ರಗಳು ಹಾಗೂ ಕಲಾತಂಡಗಳೊಂದಿಗೆ ಮೆರವಣಿಗೆಯಲ್ಲಿದ್ದವು.    ಪುರಸಭಾಧ್ಯಕ್ಷ ಮಂಜಣ್ಣ, ಪ್ರಸನ್ನ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಚ.ನಂ ಅಶೋಕ್ ಗೌರವಾಧ್ಯಕ್ಷ ಪಟೇಲ್ ಮಂಜುನಾಥ್, ಕಾರ್ಯದರ್ಶಿ ಸತ್ಯನಾರಾಯಣ್, ಉಪಾಧ್ಯಕ್ಷ ಕೃಷ್ಣ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement