ಇಂದು ಹುದ್ದೆಗಾಗಿ ನೇರ ಸಂದರ್ಶನ ಹಾಸನ: ಎವರಿಡೇ ಇಂಡ
ಸ್ಟ್ರೀಸ್ ಇಂಡಿಯಾ ಲಿಮಿಟೆಡ್ ಇವರು ಮಂಡ್ಯ ಜಿಲ್ಲೆ ಮದ್ದೂರು (ಮೈಸೂರು-ಬೆಂಗಳೂರು ರಸ್ತೆ) ಇಲ್ಲಿ ಕಾರ್ಯ ನಿರ್ವಹಿಸಲು ಇಚ್ಛಿಸುವ ಎಸ್ಸೆಸ್ಸೆಲ್ಸಿ ಮತ್ತು ಐಟಿಐ ಪಾಸು ಆದ ಅಭ್ಯರ್ಥಿಗಳನ್ನು ನೇರ ಸಂದರ್ಶನ ಮೂಲಕ ಮಿಷನ್ ಆಪರೇಟರ್ ಹುದ್ದೆ ಹಾಗೂ ಅಂಪ್ರೇಟಿಸ್ ತರಬೇತಿಗಾಗಿ ಆಯ್ಕೆ ಮಾಡಿಕೊಳ್ಳಲು ಅ.30 ರಂದು ಬೆಳಗ್ಗೆ 11 ಕ್ಕೆ ಹಾಸನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಸಂದರ್ಶನ ಹಮ್ಮಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಹಾಸನ ಇವರನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ 08172-268374 ಸಂಪರ್ಕಿಸ ಬಹುದು. ಭಾರತ ಕೃಷಿ ಸಂಬಂಧಿತ ಕ್ಷೇತ್ರದಲ್ಲಿ ಹೆಸರಾಂತ ಶಿವಶಕ್ತಿ ಗ್ರೂಪ್ ಆಫ್ ಕಂಪನಿಯವರು ನೇರ ಸಂದರ್ಶನ ಮೂಲಕ ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ ಮತ್ತು ಪದವಿ ಪಡೆದ ಅಭ್ಯರ್ಥಿಗಳಿಂದ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅ.30 ರಂದು ಸಂದರ್ಶನ ನಡೆಸಿ 50 ಹುದ್ದೆಗಳನ್ನು ಭರ್ತಿ ಮಾಡುವವರಿದ್ದಾರೆ. ಮಾಹೆಯಾನ 7000 15000 ರು.ವರೆಗೆ ವೇತನವಿರುತ್ತದೆ. ವಯೋವುತಿ 18 ರಿಂದ 30 ವರ್ಷಗಳು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಭಾಗವಹಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಉದ್ಯೋಗಾಧಿಕಾರಿ, ಹಾಸನ ಇವರನ್ನು ದೂ 268374 ಸಂಪರ್ಕಿಸಬಹುದು. ಐಟಿಸಿ ಲಿಮಿಟೆಡ್ನವರು ಐಟಿಐನಲ್ಲಿ ಟರ್ನರ್, ಫಿಟ್ಟರ್, ಮಿಷಿನಿಸ್ಟ್, ಎಂಎಂವಿ, ಡೀಸಲ್ ಮೆಕ್ಯಾನಿಕ್,ಎಲೆಕ್ಟ್ರಿಷಿಯನ್, ಎಲೆಕ್ಟ್ರಾನಿಕ್ ಮೆಕ್ಯಾನಿಕ್, ಸಿಓಇ ಎಲೆಕ್ಟ್ರಾನಿಕ್ ವಿಭಾಗದಲ್ಲಿ ತೇರ್ಗಡೆ ಹೊಂದಿದ 18-25 ವರ್ಷ ವಯೋವುತಿಯೊಳಗಿನ ಅಭ್ಯರ್ಥಿಗಳಿಂದ ವಿವಿಧ 200 ಹುದ್ದೆಗಳಿಗೆ ನೇರ ಸಂದರ್ಶನದ ಮೂಲಕ ಅ.30 ರಂದು ಬೆಳಗ್ಗೆ ಆಯ್ಕೆ ಮಾಡಿಕೊಳ್ಳುವವರಿದ್ದಾರೆ. ಆಸಕ್ತರು ತಮ್ಮ ಮೂಲ ಸರ್ಟಿಫಿಕೇಟ್ಗಳೊಂದಿಗೆ ಅ.30 ರಂದು ಹಾಜರಾಗಿ ಇದರ ಸದುಪಯೋಗ ಪಡೆದುಕೊಳ್ಳುವಂತೆ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ಕೋರಿದ್ದಾರೆ.
ಜಿಲ್ಲೆಯಲ್ಲಿ ವೃದ್ಧಾಶ್ರಮ ಆರಂಭಕ್ಕೆ ಒತ್ತಾಯ
ಹೊಳೆನರಸೀಪುರ: ಮಾಜಿ ಪ್ರಧಾನಿ ದೇವೇಗೌಡ ಮತ್ತು ಮಾಜಿ ಮಂತ್ರಿ ರೇವಣ್ಣ ಅವರು ಜಿಲ್ಲೆಯಲ್ಲಿ ವೃದ್ಧಾಶ್ರಮ ಆರಂಭಿಸಿ ಜೀವನದ ಅಂತಿಮ ಘಟ್ಟದಲ್ಲಿರುವ ವೃದ್ಧರಿಗೆ ಸಹಾಯ ನೀಡಬೇಕೆಂದು ಕಾಂಗ್ರೆಸ್
ಮುಖಂಡ ಎಚ್.ಪಿ.ರಾಮಚಂದ್ರು ಒತ್ತಾಯಿಸಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ದೇವೇಗೌಡರಿಗೆ ಪತ್ರ ಬರೆದಿರುವ ಅವರು, ಇತ್ತೀಚೆಗೆ ಜಿಲ್ಲೆಯಲ್ಲಿ ವಯಸ್ಸಾದ ತಂದೆ ತಾಯಿಗಳನ್ನು ಸಾಕದೆ ಮಕ್ಕಳು ಬೀದಿ ಪಾಲು ಮಾಡುತ್ತಿದ್ದಾರೆ. ಇದು ಅತ್ಯಂತ ಹೇಯಕರ ಸಂಗತಿ ಅಗಿದೆ. ಬೀದಿಗೆ ಬಂದ ವೃದ್ಧರನ್ನು ರಕ್ಷಣೆ ಮಾಡುವಲ್ಲಿ ತಾವು ಕೈಜೋಡಿಸಬೇಕೆಂದು ಮನವಿ ಮಾಡಿದ್ದಾರೆ. ಪತ್ರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಹಿರಿಯ ನಾಗರಿಕರು ಸಹಿ ಹಾಕಿದ್ದಾರೆ.