ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಜಾಗತೀಕರಣ ಶಿಕ್ಷಣ ಕುರಿತ ವಿಶೇಷ ಉಪನ್ಯಾಸ

Rashmi Kasaragodu
Updated On : 29 Oct 2013, 11:21 am

ಹಾಸನ: ಜಾಗತೀಕರಣ ಜೀವನ ಶೈಲಿ, ಜಾತಿ, ಧರ್ಮ ವೇಷಭೂಷಣ, ಚಿಂತನೆ ಸಿದ್ಧಾಂತ ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನ್ನದೇ ಆದ ಛಾಪು ಮೂಡಿಸಿದೆ ಎಂದು ಸರ್ಕಾರಿ ಕಲಾ ಕಾಲೇಜಿನ ಸ್ನಾತ್ತಕೋತ್ತರ ಅಧ್ಯಯನ ವಿಭಾಗದ ಸಂಯೋಜಕ ಪ್ರೊ. ಡಿ.ಜಿ. ಕೃಷ್ಣೇಗೌಡ ಹೇಳಿದರು. ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜಶಾಸ್ತ್ರ ವಿಭಾಗದ ವತಿಯಿಂದ ಆಯೋಜಿಸಿದ್ದ ಜಾಗತೀಕರಣ ಮತ್ತು ಶಿಕ್ಷಣ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಭಾರತದ ಶಿಕ್ಷಣದಲ್ಲಿ ತಾರತಮ್ಯತೆ ಇದ್ದು, ಜಾಗತೀಕರಣದ ಹೊರತಾಗಿಯೂ ಶೈಕ್ಷಣಿಕ ವ್ಯವಸ್ಥೆಯ ಪಠ್ಯಕ್ರಮ ಏಕರೂಪತೆಯನ್ನು ಹೊಂದಿಲ್ಲ. ಶಿಕ್ಷಣಕ್ಕೆ ನಿರಂತರ ಪ್ರಯತ್ನ ಮತ್ತು ಕಠಿಣ ಪರಿಶ್ರಮ ಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಚ್.ಎನ್. ರೂಪ್ರಾಜ್ಚಂದನ್ ಮಾತನಾಡಿ,  ಸಮಾಜಶಾಸ್ತ್ರವನ್ನು ಓದದೇ ಇರುವ ರಾಷ್ಟ್ರವಿಲ್ಲ. ಪ್ರಪಂಚದ ಎಲ್ಲಾ ಧರ್ಮಗಳು ಹುಟ್ಟಿದ್ದು ಏಷ್ಯಾ ಖಂಡದಲ್ಲಿ. ಜಾಗತೀಕರಣದಲ್ಲಿ ವಿಚಾರವಂತಿಕೆ, ವಿಮರ್ಶೆ ಇರಬೇಕು. ಒಳ್ಳೆಯದನ್ನು ಕೆಟ್ಟದನ್ನು ವಿಮರ್ಶಿಸುತ್ತಾ ಜಗತ್ತಿನ ಒಳಗೆ ವಿಲೀನವಾಗಬೇಕು. ಮುಂದೆ ಇರುವ ಸವಾಲುಗಳು ಸಾಮಾನ್ಯವಾದುದ್ದಲ್ಲ ಕೇವಲ ಭಾರತದ ಮಾತ್ರವಲ್ಲದೇ ಪ್ರಪಂಚದ ಮಟ್ಟದಲ್ಲಿ ಆಲೋಚಿಸಬೇಕು ಎಂದು ಹೇಳಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಮೋಹನ್ಕುಮಾರ್, ಪ್ರಾಧ್ಯಾಪಕರಾದ ಡಾ. ಶಶಿ ಕುಮಾರ್, ಪ್ರೊ. ಪೂರ್ಣಿಮ, ಪ್ರೊ. ಆಶಾ, ಪ್ರೊ. ಸುಲೋಚನಾ, ಪ್ರೊ. ಕಮಲ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement