ನ. 14ರ ವರೆಗೆ ಸೇನಾ ನೇಮಕಾತಿ ರ್ಯಾಲಿ
ಹಾಸನ: ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನ.6 ರಿಂದ ನ.14ರ ವರೆಗೆ ಭಾರತೀಯ ಸೇನಾ ಪಡೆಯಲ್ಲಿ ಸೋಲ್ಜರ್ಜ್ನರಲ್ ಡ್ಯೂಟಿ, ಟಿಕ್ನಿಕಲ್, ಕ್ಲರಿಕಲ್, ಎಸ್.ಕೆ.ಟಿ, ನರ್ಸಿಂಗ್ ಅಸಿಸ್ಟೆಂಟ್, ಟ್ರೇಡ್ಮೆನ್ ಹಾಗೂ ಡಿ.ಎಸ್.ಸಿ ಹುದ್ದೆಗಳ ನೇಮಕಾತಿ ರ್ಯಾಲಿಯು ನಡೆಯಲ್ಲಿದ್ದು ಅರ್ಹ ನಿರುದ್ಯೋಗಿ ಯುವಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವುದು. ನೇಮಕಾತಿ ರ್ಯಾಲಿಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಪೂರ್ವ ತರಬೇತಿ ಶಿಬಿರವನ್ನು ಅನುಭವಿ ಉಪನ್ಯಾಸಕರಿಂದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಉಚಿತವಾಗಿ ಸ್ಟಡಿ ಸರ್ಕಲ್ವತಿಯಿಂದ ಆಯೋಜಿಸಲಾಗಿದ್ದು ಪಡೆದ ಅಭ್ಯರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಉದ್ಯೋಗಾಧಿಕಾರಿ ಜೆ.ಬಿ. ವಿಜಯಲಕ್ಷ್ಮಿ ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಖುದ್ದಾಗಿ ಭೇಟಿ ನೀಡಿ ಅಥವಾ ದೂ- 08172-268374 ಸಂಪರ್ಕಿಸಿ.