ಬಸವರಾಜೇಂದ್ರ ಶಾಲೆಗೆ ಎಸ್ಬಿಐನಿಂದ ಆಕ್ವಗಾರ್ಡ್ ಕೊಡುಗೆ
ಅರಸೀಕೆರೆ: ಪಟ್ಟಣದ ಬಸವರಾಜೇಂದ್ರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಶುದ್ಧ ಕುಡಿವ ನೀರು ಒದಗಿಸಲು ಭಾರತೀಯ ಸ್ಟೇಟ್ ಬ್ಯಾಂಕ್ನಿಂದ ಆಕ್ವಗಾರ್ಡ್ನ್ನು ಬ್ಯಾಂಕ್ ವ್ಯವಸ್ಥಾಪಕ ಎಸ್.ಪಿ.ದಾತಾರ್ ಶಾಲೆಗೆ ನೀಡಿದರು. ತಾಲೂಕಿನಲ್ಲಿ ಪ್ಲೋರೈಡ್ ಅಂಶ ಹೆಚ್ಚಾಗಿ ವಿದ್ಯಾರ್ಥಿಗಳು ವಸಡುನೋವು, ಕೈಕಾಲು ನೋವು ಇಂತಹ ಹಲವಾರು ರೋಗಗಳಿಂದ ನರಳುತ್ತಿದ್ದು ಇದನ್ನು ದೂರವಾಗಿಸಿ ಶುದ್ಧ ಕುಡಿಯುವ ನೀರಿನ ಸಲುವಾಗಿ ಆಕ್ವಗಾರ್ಡ್ನ್ನು ಶಾಲೆಗೆ ನೀಡಲಾಗಿದೆ ಎಂದು ತಿಳಿಸಿದರು. ತಾಲೂಕಿನ ಚಲ್ಲಾಪುರ, ಬಿ.ಜಿ.ಹಟ್ಟಿ ಶಾಲೆಗಳಿಗೂ ಈ ಸೌಲಭ್ಯ ಒದಗಿಸಲಾಗಿದೆ. ಗುಣಮಟ್ಟದ ಆಹಾರ ಎಷ್ಟು ಅವಶ್ಯಕವೋ ನೀರು ಕೂಡಾ ಅಷ್ಟೇ ಪ್ರಾಮುಖ್ಯತೆ ಪಡೆದಿದೆ. ಬ್ಯಾಂಕ್ನಿಂದ ನೀಡಲಾಗುತ್ತಿರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದರು. ಬ್ಯಾಂಕ್ ವಿಸ್ತರಣಾಧಿಕಾರಿ ಹರೀಶ್, ಸಿಬ್ಬಂದಿ ವೇಣುಗೋಪಾಲ್, ಅನಿಲಕುಮಾರ್ ಹಾಗೂ ಚಂದ್ರೇಗೌಡ, ಹನುಮಂತಪ್ಪ, ಎಸ್.ಟಿ.ಪ್ರಕಾಶ್, ಜಿ.ಕೆ.ಗಂಗಾಧರ್, ಮಹೇಂದ್ರ ಸೇರಿ ಮತ್ತು ಶಾಲಾ ಸಿಬ್ಬಂದಿ ಪಾಲ್ಗೊಂಡಿದ್ದರು.