ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಭಾರತದಲ್ಲಿ ಮಾತ್ರ ಹೆಣ್ಣನ್ನು ತಾಯಿ ಸ್ವರೂಪದಲ್ಲಿ ಕಾಣಲು ಸಾಧ್ಯ: ಶಿವಯೋಗಿ ಸ್ವಾಮೀಜಿ

Rashmi Kasaragodu
Updated On : 29 Oct 2013, 11:23 am

ಅರಕಲಗೂಡು: ಪ್ರಪಂಚದ ಇತರೆ ದೇಶಗಳಲ್ಲಿ ಹೆಣ್ಣನ್ನು ಭೋಗದ ರೂಪದಲ್ಲಿ ಕಂಡರೆ, ಭಾರತದಲ್ಲಿ ಮಾತ್ರ ಹೆಣ್ಣನ್ನು ತಾಯಿ ರೂಪದಲ್ಲಿ ಕಾಣುತ್ತೇವೆ ಎಂದು ಕೆ.ಅರ್. ಪೇಟೆ ಕಾಪನಹಳ್ಳಿ ಗವಿಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ ಹೇಳಿದರು.      
ಕೊಣನೂರು ಪಟ್ಟಣದ ವೈ.ಎಸ್.ಅರ್. ಕಲ್ಯಾಣ ಮಂಟಪದಲ್ಲಿ ನಡೆದ ವಿವೇಕ ಜಾಗೃತ ಬಳಗ ಹಾಗೂ  ಸಾಲಿಗ್ರಾಮದ ಅಂಗ ಸಂಸ್ಥೆಯಿಂದ ವಿವೇಕ ಸಂಪದ ಓದುಗರ ಸಮಾವೇಶ ಹಾಗೂ ಆಧ್ಯಾತ್ಮಿಕ ಸಮ್ಮಿಲನದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಭೂಮಿ, ನೀರು, ಪ್ರಕೃತಿ ತಾಯಿ ಸಮಾನ ಎಂದರು.
ಸ್ವಾಮಿ ವಿವೇಕಾನಂದರ ಜೀವನ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನವಾಗಬೇಕು. ಯುವ ಜನತೆ ಉನ್ನತ ಧ್ಯೆಯ ಗುರಿಯನ್ನಿರಿಸಿಕೊಂಡು ಮುನ್ನುಗ್ಗಿದಾಗ ಜಯ ದೂರವಿಲ್ಲ. ಯುವ ಜನತೆ ನಿರಾಶರಾಗಬೇಕಾದ ಅತಗತ್ಯವಿಲ್ಲ. ಇಂದು ಎಲ್ಲಾ ರಂಗಗಳಲ್ಲೂ ಯುವಕರಿಗೆ ಅವಕಾಶಗಳು ಕೈಬೀಸಿ ಕರೆಯುತ್ತಿವೆ. ಅದರೆ ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಕೆಲಸವನ್ನು ಯುವ ಜನತೆ ಮಾಡಬೇಕು  ಮನುಷ್ಯ ಎಷ್ಟು ಸಮಯ ಬದುಕಿದನು ಎನ್ನುವುದು ಮುಖ್ಯವಲ್ಲ. ಹೇಗೆ ಬದುಕಿದನು ಎನ್ನುವುದು ಮುಖ್ಯ ಎಂದ ಅವರು ಇರುವಷ್ಟು ಕಾಲ ಒಳ್ಳೆಯ ವ್ಯಕ್ತಿತ್ವದವರಾಗಿ ಬಾಳೋಣ ಎಂದರು.
ಪ್ರಧಾನ ಚಿಂತಕ ಸುದೇಶ್ರಾವ್, ದ. ವಲಯ ಅಧಿಕಾರಿ ಪ್ರೇಮಕಲ ದಾಮೋದರ, ಜಾಗೃತ ಬಳಗ ಅಧ್ಯಕ್ಷ ಡಾ. ನಟರಾಜ್, ಹಾಸನ ವಿವೇಕ ಜಾಗೃತ ಬಳಗ ಅಧ್ಯಕ್ಷೆ ಪ್ರೇಮಕುಮಾರಿ, ಹೊಳೆನರಸಿಪುರ ಅಧ್ಯಕ್ಷ ರಾಘವೇಂದ್ರ, ಅರಸೀಕೆರೆ ಅಧ್ಯಕ್ಷ ಸುಬ್ಯಹ್ಮಣ್ಯ, ಚನ್ನರಾಯಪಟ್ಟಣ ಅಧ್ಯಕ್ಷ ರಾಮು, ತಾಲೂಕು ಕನ್ನಡ ಸಾಹಿತ್ತ ಪರಿಷತ್ ಪ್ರಧಾನ ಕಾರ್ಯದರ್ಶಿ ಕೊಣನೂರು ಹೊಯ್ಸಳ ಇತರರು ಮಾತನಾಡಿದರು.
ಮುಖಂಡ ನಾಗಣ್ಣ, ಕಾಂತರಾಜ್, ಪಾವನಸತೀಶ್, ಶೈಲಶ್ರೀ ಪಾರ್ವತಮ್ಮ ಇತರರು ಇದ್ದರು. ವಿಜಯಕೃಷ್ಣ ಹೊಯ್ಸಳ ನಿರೂಪಿಸಿದರು. ಹೇಮಾವತಿ ವಂದಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement