ಮಕ್ಕಳ ಸಮೀಕ್ಷೆ
ಹಾಸನ: ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ನಿಖರವಾಗಿ ಗುರುತಿಸಿ ಶಾಲಾ ಮುಖ್ಯವಾಹಿನಿಗೆ ತರುವ ಸದುದ್ದೇಶದಿಂದ ಸಮೀಕ್ಷೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಸಮೀಕ್ಷೆಯನ್ನು ಎರಡು ಹಂತಗಳಲ್ಲಿ ನಿರ್ವಹಿಸಲಾಗುವುದು. ಮೊದಲ ಹಂತದಲ್ಲಿ ನ.6 ರಿಂದ ನ.7 ರವರೆಗೆ ಶಾಲಾ ಸಮೀಕ್ಷೆ ಮತ್ತು ಎರಡನೇ ಹಂತದಲ್ಲಿ ನ.13 ರಿಂದ ನ.17 ರವರೆಗೆ ಕುಟುಂಬ ಸಮೀಕ್ಷೆ ನಡೆಸಲಾಗುತ್ತಿದ್ದು, ಪೋಷಕರು ಹಾಗೂ ಸಾರ್ವಜನಿಕರು ಸಹಕರಿಸುವಂತೆ ಕೋರಿದೆ. ಹೆಚ್ಚಿನ ಮಾಹಿತಿಗಾಗಿ ದೂ - ಉಪನಿರ್ದೇಶಕರು - 9448999342, ಡಿ.ವೈ.ಪಿ.ಸಿ - 9448999398, ಎ.ಪಿ.ಸಿ. - 9480695443, ಕಚೇರಿ - 08172-252855 ಸಂಪರ್ಕಿಸಲು ಉಪನಿರ್ದೇಶಕರು ಕೋರಿದ್ದಾರೆ.
ಅಧಿಕಾರ ದೀಕ್ಷೆ
ಸಕಲೇಶಪುರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಪಟ್ಟಣದ ರೋಟರಿ ಸಮುದಾಯ ಭವನದಲ್ಲಿ ಅ.30 ಬುಧವಾರ ಸಂಜೆ 4 ಗಂಟೆಗೆ ನಡೆಯಲಿದೆ ಎಂದು ನಿಯೋಜಿತ ಅಧ್ಯಕ್ಷ ಎಸ್.ಎಂ.ಮಂಜುನಾಥ್ ತಿಳಿಸಿದ್ದಾರೆ. ತಾಲೂಕಿನ ಎಲ್ಲಾ ಕಸಾಪ ಸದಸ್ಯರು ಭಾಗವಹಿಸುವಂತೆ ಮಂಜುನಾಥ್ ಮನವಿ ಮಾಡಿದ್ದಾರೆ.