ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಾಸನಾಂಬೆ ದರ್ಶನ ವ್ಯವಸ್ಥಿತವಾಗಿಲ್ಲ: ಆರೋಪ

Rashmi Kasaragodu
Updated On : 29 Oct 2013, 11:23 am

ಕ.ಪ್ರ.ವಾರ್ತೆ   ಹಾಸನ   ಅ. 29
ಜಿಲ್ಲಾಡಳಿತ ಹಾಸನಾಂಬ ಜೀರ್ಣೋದ್ಧಾರ ಸಮಿತಿಯನ್ನು ಕಡೆಗಣಿಸಿದೆ. ಇದರ ಪರಿಣಾಮ ದೇವಿ ಜಾತ್ರಾ ಮಹೋತ್ಸವ ವ್ಯವಸ್ಥಿತವಾಗಿ ನಡೆಸುತ್ತಿಲ್ಲ ಎಂದು ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ದೇವಾಲಯ ಜೀಣೋದ್ಧಾರ ಸಮಿತಿಯವರು ಆರೋಪಿಸಿದ್ದಾರೆ.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಸದಸ್ಯ ಎನ್.ಕೆ.ಕಾಂತರಾಜು, ಹಾಸನಾಂಬ ದೇವಸ್ಥಾನ ಮತ್ತು ಸಿದ್ದೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿಯನ್ನು 2008ರಲ್ಲಿ ನೇಮಿಸಲಾಗಿದೆ. ಅದರಂತೆ ಜೀಣೋದ್ಧಾರ ಕಾಮಗಾರಿಗೆ ಶಂಕುಸ್ಥಾಪನೆ ಕೂಡಾ ನೆರವೇರಿಸಲಾಯಿತು. ಹಾಸನಾಂಬ ದೇವಾಲಯದ ಗೋಪುರ ಪೂರ್ಣಗೊಂಡಿದ್ದು, ಸಿದ್ದೇಶ್ವರ ಸ್ವಾಮಿ ದೇವಾಲಯದ ಜೀರ್ಣೋದ್ಧಾರ ಕಾಮಗಾರಿ ಪ್ರಗತಿಯಲ್ಲಿದೆ.
ದೇವಸ್ಥಾನ ಅವ್ಯವಸ್ಥೆಯಿಂದ ಕೂಡಿದೆ. ಅರ್ಚಕರ ನೇಮಕವಾಗಿಲ್ಲ. ಸಿದ್ದೇಶ್ವರ ದೇವಸ್ಥಾನಕ್ಕೆ ಅರ್ಚಕರು ಯಾರಿದ್ದಾರೆ ಅಂತ ಸರ್ಕಾರಕ್ಕೆ ಗೊತ್ತಿಲ್ಲ. ದೇವಾಲಯದಲ್ಲಿರುವ ದೇವಿಯ ಆಭರಣಗಳು ಬಹಳ ಕಾಲದಿಂದ ಶಿಥಿಲಗೊಂಡಿದ್ದು, ಪೂಜೆ ಮಾಡಲು ಸಾಧ್ಯವಾಗದಂತಹ ಸ್ಥಿತಿಯಲ್ಲಿದೆ.
ದೇವಾಲಯಕ್ಕೆ ಸೇರಿದ ಜಾಗದ ಒಟ್ಟು ವಿಸ್ತೀರ್ಣ ಎಷ್ಟು ಎಂಬುದು ಯಾರಿಗೂ ಗೊತ್ತಿಲ್ಲ. ಇದನ್ನು ಮುಜರಾಯಿ ಇಲಾಖೆಯವರು ಸರಿಪಡಿಸಬೇಕು. ಆದರೆ ಮುಜರಾಯಿ ಇಲಾಖೆಯವರು ವರ್ಷದಲ್ಲಿ ಕೇವಲ 9 ರಿಂದ 15ದಿನ ನೋಡುತ್ತಾರೆ. ಉಳಿದ ದಿನಗಳು ಇಲ್ಲಿ ಯಾರು ಕೇಳುವವರಿರುವುದಿಲ್ಲ ಎಂದು ಆರೋಪಿಸಿದರು.
ದೇವಾಲಯ ಕಾಮಗಾರಿಗಳನ್ನು ಯಾರು ಕೇಳುವರಿಲ್ಲದಂತಾಗಿದ್ದು, ದೇವಾಲಯ ಗೋಡೆಗಳಲ್ಲಿ ನೀರು ಸೋರುತ್ತಿವೆ. ಆದರೂ ಗುತ್ತಿಗೆದಾರರಿಗೆ ಬಿಲ್ ಮಾತ್ರ ಪಾವತಿಯಾಗಿದೆ ಎಂದ ಅವರು, ದೇವಿ ದರ್ಶನಕ್ಕೆ ಸರದಿಯಲ್ಲಿ ನಿಂತಿರುವ ಭಕ್ತಾಧಿಗಳಿಗೆ ಬೇಧಭಾವ ಮಾಡಲಾಗುತ್ತಿದೆ. ದೇವಸ್ಥಾನದ ಮುಂಭಾಗ ಸರಿಯಾದ ಮಾಹಿತಿಯನ್ನು ನೀಡದೆ ಸರತಿ ಸಾಲಿನಲ್ಲಿ ನಿಂತುಕೊಂಡು ದರ್ಶನ ಪಡೆಯಲು ಬರುವ ವೃದ್ಧರು, ಸಣ್ಣ ಮಕ್ಕಳ ತಾಯಂದಿರನ್ನು, ಅಂಗವಿಕಲರನ್ನು ಗುರುತಿಸದೆ ದರ್ಶನ ನೀಡುವ ವ್ಯವಸ್ಥೆ ಕಲ್ಪಿಸುತ್ತಿಲ್ಲ ಎಂದೂ ದೂರಿದರು.
ದೇವಾಲಯದಲ್ಲಿ ಪಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ ಅವ್ಯವಹಾರ ನಡೆಯುತ್ತಿದ್ದು, ಭಕ್ತರು ನೀಡುವಂತ ಪಾಸ್ಗಳನ್ನು ಹರಿದು ಹಾಕದೆ ಅದನ್ನು ಹಾಗೆ ಇಟ್ಟುಕೊಂಡು ಕಂದಾಯ ಇಲಾಖೆಯರು ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ. ಇದರಿಂದ ದೇವಾಲಯಕ್ಕೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ ರಮೇಶ್, ಎಚ್.ಟಿ.ಗಣೇಶ್, ಎಚ್. ಎಸ್. ಹೊಯ್ಸಳ, ಎಚ್. ಎ. ಸುರೇಶ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement