ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಕಿತ್ತಾನೆ ಗ್ರಾಮದಲ್ಲಿ ಮೆಕ್ಕೆಜೋಳ ಕ್ಷೇತ್ರೋತ್ಸವ

Rashmi Kasaragodu
Updated On : 31 Oct 2013, 12:10 pm

ಹಾಸನ: ತಾಲೂಕಿನ  ಕಿತ್ತಾನೆ ಗ್ರಾಮದ ರೈತ ದ್ಯಾವಯ್ಯನವರ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆ ಕ್ಷೇತ್ರೋತ್ಸವ ನಡೆಯಿತು. ಜಿಪಂ ಸದಸ್ಯ ಎಂ.ಕೆ. ದ್ಯಾವಪ್ಪ ಕೃಷಿ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳನ್ನು ರೈತರು ಸದುಪಯೋಗ ಪಡಿಸಿಕೊಂಡು ಪ್ರಗತಿಯನ್ನು ಸಾಧಿಸಬೇಕೆಂದು ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರದ ಡಾ. ಚನ್ನಕೇಶವ, ಭೂಮಿಯ ಫಲವತ್ತತೆಯನ್ನು ಹೆಚ್ಚಿಸಿಕೊಳ್ಳುವ ಹಾಗೂ ಸಮಗ್ರ ಕೃಷಿ ಪದ್ಧತಿಗಳ ಬಗ್ಗೆ ರೈತರಿಗೆ ವಿವರ ಮಾಹಿತಿ ನೀಡಿದರು.  
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಎ.ಎಸ್. ಕೋಕಿಲ ಮಾತನಾಡಿ, ಭೂಚೇತನ ತಾಕಿನಲ್ಲಿ ಲಘು ಪೋಷಕಾಂಶಗಳಾದ ಜಿಪ್ಸಂ, ಜಿಂಕ್ ಸಲ್ಫೇಟ್ ಬಳಸಿದ್ದರಿಂದ ಹೆಚ್ಚಿನ ಇಳುವರಿ ಬಂದಿರುತ್ತದೆ.  ಆದ್ದರಿಂದ ರೈತರು ಮುಂದಿನ ದಿನಗಳಲ್ಲಿ ಲಘು ಪೋಷಕಾಂಶಗಳನ್ನು ಹೆಚ್ಚಾಗಿ ಬಳಸಲು ಕರೆ ನೀಡಿದರು.
ಭಾರತಿ ಅಸೋಸಿಯೇಟ್ಸ್ನ  ಕ್ಷೇತ್ರ ವ್ಯವಸ್ಥಾಪಕ  ಟಿ.ಜಿ. ರಘು  ಮೇವಿನ ಬೆಳೆಗೆ ಬೇಬಿಕಾರ್ನ್ ಮುಸುಕಿನಜೋಳ ಬೆಳೆಯ ಬಗ್ಗೆ ವಿವರ ಮಾಹಿತಿ ನೀಡಿ ಒಪ್ಪಂದ ಕೃಷಿ ಆಧಾರಿತವಾಗಿ ಬೆಳೆಯನ್ನು ಬೆಳೆಯಲು ತಿಳಿಸಿ, ಇದರಿಂದ ಅಧಿಕ ಲಾಭ ಹಾಗೂ ಮೇವಿನ ಬೆಳೆಯಾಗಿ ಬೆಳೆಯಬಹುದೆಂದರು.  
ಚನ್ನಂಗಿಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ತಾಂತ್ರಿಕ ವ್ಯವಸ್ಥಾಪಕರಾದ ಲತಾ ಸ್ವಾಗತಿಸಿದರು. ಕಟ್ಟಾಯ ರೈತ ಸಂಪರ್ಕ ಕೇಂದ್ರದ ಪ್ರಭಾರ ಕೃಷಿ ಅಧಿಕಾರಿ ವಿ. ನಾಗರಾಜು  ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.
ಚನ್ನಂಗಿಹಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಇಂದ್ರೇಶ್, ಭಾರತಿ ಹಾಗೂ ಪ್ರಗತಿಪರ ರೈತ ಸತ್ಯನಾರಾಯಣ,  ಕಟ್ಟಾಯ ಹೋಬಳಿಯ ರೈತ ಅನುವುಗಾರರು, ಕಿತ್ತಾನೆ ಹಾಗೂ ಸುತ್ತಮುತ್ತಲ ಗ್ರಾಮದ ರೈತರು ಭಾಗವಹಿಸಿದರು. ಕೃಷಿ ಅಧಿಕಾರಿ ಕೆ.ಎಚ್. ರಮೇಶ್ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement