ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಟಿಪ್ಪು ಸೇನೆಯಿಂದ ಬೈಕ್ ರ್ಯಾಲಿ

Rashmi Kasaragodu
Updated On : 31 Oct 2013, 12:09 pm

ಕ.ಪ್ರ.ವಾರ್ತೆ   ಹಾಸನ   ಅ. 30
ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆ ಅಂಗವಾಗಿ ನ.10 ರಂದು ಹಾಸನದಿಂದ ಸಕಲೇಶಪುರದ ಮಂಜ್ರಾಬಾದ್ ಕೋಟೆಯವರೆಗೆ ಬೈಕ್ ರ್ಯಾಲಿ ಹಮ್ಮಿಕೊಂಡಿರುವುದಾಗಿ ವೀರಕನ್ನಡಿಗ ಟಿಪ್ಪು ಸೇನೆ ರಾಜ್ಯ ಸಂಘಟನೆಯ ಸಂಸ್ಥಾಪಕ ಅಕ್ಮಲ್ ಜಾವೀದ್ ತಿಳಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ವೀರ ಕನ್ನಡಿಗ ಟಿಪ್ಪು ಸೇನೆ ಹಾಗೂ ಟಿಪ್ಪು ಸುಲ್ತಾನ್ ಅಭಿಮಾನಿಗಳ ಸಂಘದಿಂದ ಟಿಪ್ಪುಸುಲ್ತಾನ್ ನಿರ್ಮಿಸಿರುವ ಮಂಜ್ರಾಬಾದ್ ಕೋಟೆಯನ್ನು ವೀಕ್ಷಿಸೋಣ ಬನ್ನಿ ಎಂಬ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ. ಜೊತೆಗೆ ಟಿಪ್ಪು ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಇದು ಸರ್ಕಾರಿ ಕಾರ್ಯಕ್ರಮ ಆಗಬೇಕು ಎಂದರು.
ಬೈಕ್ ರ್ಯಾಲಿಯು ಹಾಸನದ ಮಟನ್ ಮಾರುಕಟ್ಟೆಯಿಂದ ಪ್ರಾರಂಭವಾಗಿ ಆಲೂರು, ಸಕಲೇಶಪುರ ಮಂಜ್ರಾಬಾದ್ ಕೋಟೆಯವರೆಗೂ ನಡೆಯಲಿದೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಶಿವರಾಂ ಬೈಕ್ ರ್ಯಾಲಿಗೆ ಚಾಲನೆ ನೀಡಲಿದ್ದಾರೆ. ಟಿಪ್ಪು ಪ್ರಚಾರ ಸಮಿತಿ ಅಧ್ಯಕ್ಷ ತಲಕಾಡು ಚಿಕ್ಕರಂಗೇಗೌಡ ಟಿಪ್ಪುವಿನ ಬಗ್ಗೆ ಮಾಹಿತಿ ನೀಡುವರು. ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಎಂ.ಆನಂದ್, ಸಮಾಜ ಸೇವಕ ಅಮ್ಜದ್ಖಾನ್, ನಗರಸಭೆ ಸದಸ್ಯ ಎಚ್.ಎಸ್.ಅನಿಲಕುಮಾರ್, ಸಯ್ಯದ್ ಇತರರು ಭಾಗವಹಿಸಿಲಿದ್ದಾರೆ ಎಂದು ಹೇಳಿದರು. ಸುಮಾರು 3 ಸಾವಿರ ಬೈಕ್ಗಳ ಮೂಲಕ ರ್ಯಾಲಿ ನಡೆಸಲಾಗುವುದು ಎಂದರು. ಆಜಂ ಖಾನ್, ಲಿಂಗರಾಜಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement