ಪಂಪ್ಸೆಟ್ ಸಕ್ರಮಕ್ಕೆ ಗಡುವು ವಿಸ್ತರಣೆ
ಹಾಸನ: ಅಕ್ರಮ ನೀರಾವರಿ ಪಂಪ್ಸೆಟ್ದಾರರಿಂದ ಅರ್ಜಿಗಳನ್ನು ನೋಂದಾಯಿಸಿ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಅ.31, 2012 ರ ಗಡುವು ನೀಡಲಾಗಿತ್ತು. ಇಂಧನ ಇಲಾಖೆ ಸೂಚನೆಯಂತೆ ನೋಂದಣಿ ಪ್ರಕ್ರಿಯೆ ಸಲ್ಲಿಸಿದ ರೈತರು ತಮ್ಮ ಅಕ್ರಮ ನೀರಾವರಿ ಪಂಪ್ಸೆಟ್ಗಳನ್ನು ಸಕ್ರಮೀಕರಣಗೊಳಿಸಲು ಕ್ಷೇತ್ರಾಧಿಕಾರಿಗಳನ್ನು ವಿನಂತಿಸಿದ ಪ್ರಯುಕ್ತ ಸಕ್ರಮೀಕರಣ ಯೋಜನೆಯ ಬಗ್ಗೆ ಚರ್ಚಿಸಿ ಇನ್ನೂ ಅರ್ಜಿ ನೋಂದಾಯಿಸದ ಅನಧಿಕೃತ ನೀರಾವರಿ ಪಂಪ್ಸೆಟ್ದಾರರಿಂದ ಅರ್ಜಿ ನೊಂದಾಯಿಸಲು ನ.30, 2013 ರವರೆಗೆ ಅವಧಿ ವಿಸ್ತರಿಸಲಾಗಿದೆ. ಬಳಕೆದಾರರು ನಿಯಮಗಳಂತೆ ತಮ್ಮ ಅಕ್ರಮ ಅನಧಿಕೃತ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿಕೊಳ್ಳಲು ಸ್ಥಳೀಯ ಚಾವಿಸನಿನಿ ಉಪ-ವಿಭಾಗ ಕಚೇರಿ ಸಂಪರ್ಕಿಸಿ ಸಕ್ರಮ ಶುಲ್ಕ ಅಗತ್ಯ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕೆದು ಚೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.