ಪಂಪ್ಸೆಟ್ ಸಕ್ರಮಕ್ಕೆ ಗಡುವು ವಿಸ್ತರಣೆ
ಹಾಸನ: ಅಕ್ರಮ ನೀರಾವರಿ ಪಂಪ್ಸೆಟ್ದಾರರಿಂದ ಅರ್ಜಿಗಳನ್ನು ನೋಂದಾಯಿಸಿ ಶುಲ್ಕ ಪಾವತಿಸಿ ಸಕ್ರಮಗೊಳಿಸಿಕೊಳ್ಳಲು ಅ.31, 2012 ರ ಗಡುವು ನೀಡಲಾಗಿತ್ತು. ಇಂಧನ ಇಲಾಖೆ ಸೂಚನೆಯಂತೆ ನೋಂದಣಿ ಪ್ರಕ್ರಿಯೆ ಸಲ್ಲಿಸಿದ ರೈತರು ತಮ್ಮ ಅಕ್ರಮ ನೀರಾವರಿ ಪಂಪ್ಸೆಟ್ಗಳನ್ನು ಸಕ್ರಮೀಕರಣಗೊಳಿಸಲು ಕ್ಷೇತ್ರಾಧಿಕಾರಿಗಳನ್ನು ವಿನಂತಿಸಿದ ಪ್ರಯುಕ್ತ ಸಕ್ರಮೀಕರಣ ಯೋಜನೆಯ ಬಗ್ಗೆ ಚರ್ಚಿಸಿ ಇನ್ನೂ ಅರ್ಜಿ ನೋಂದಾಯಿಸದ ಅನಧಿಕೃತ ನೀರಾವರಿ ಪಂಪ್ಸೆಟ್ದಾರರಿಂದ ಅರ್ಜಿ ನೊಂದಾಯಿಸಲು ನ.30, 2013 ರವರೆಗೆ ಅವಧಿ ವಿಸ್ತರಿಸಲಾಗಿದೆ. ಬಳಕೆದಾರರು ನಿಯಮಗಳಂತೆ ತಮ್ಮ ಅಕ್ರಮ ಅನಧಿಕೃತ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿಕೊಳ್ಳಲು ಸ್ಥಳೀಯ ಚಾವಿಸನಿನಿ ಉಪ-ವಿಭಾಗ ಕಚೇರಿ ಸಂಪರ್ಕಿಸಿ ಸಕ್ರಮ ಶುಲ್ಕ ಅಗತ್ಯ ಠೇವಣಿ ಪಾವತಿಸಿ ವಿದ್ಯುತ್ ಸಂಪರ್ಕ ಪಡೆದುಕೊಳ್ಳಬೇಕೆದು ಚೆಸ್ಕಾಂ ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್ ತಿಳಿಸಿದ್ದಾರೆ.
ಉಪ ಲೋಕಾಯುಕ್ತರ ಪ್ರವಾಸ ಇಂದು
ಹಾಸನ: ಉಪ ಲೋಕಾಯುಕ್ತ ನ್ಯಾಯಮೂರ್ತಿ ಸುಭಾಷ್ ಆದಿ ಪ್ರವಾಸ ಕಾರ್ಯಕ್ರಮದನ್ವಯ ಅ.31ರಂದು ಮಧ್ಯಾಹ್ನ 12.30ಕ್ಕೆ ಗೊರೂರಿಗೆ ಆಗಮಿಸುವರು. ಕೆಲವು ಸ್ಥಳಗಳಿಗೆ ಭೇಟಿ ನೀಡಿ ದೂರುಗಳನ್ನು ವಿಚಾರಣೆ ಮಾಡುವರು. ಅಂದು ಗೊರೂರಿನಲ್ಲಿ ವಾಸ್ತವ್ಯ ಮಾಡುವರು. ನ.1ರಂದು ಬೆಳಿಗ್ಗೆ 10 ಗಂಟೆಗೆ ಹಾಸನಕ್ಕೆ ಆಗಮಿಸಿ ದೂರುಗಳ ವಿಚಾರಣೆ ಮತ್ತು ಹಾಸನಾಂಬ ದೇವಸ್ಥಾನಕ್ಕೆ ತೆರಳಿ ದೇವಿ ದರ್ಶನ ಪಡೆಯುವರು. ನಂತರ ಸಂಜೆ 4.30ಕ್ಕೆ ಹಾಸನದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸುವರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ
ಹಾಸನ: ನಾನಾ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವವರನ್ನು ನ.1ರಂದು ಜಿಲ್ಲೆಯಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಲು ಆಯ್ಕೆ ಮಾಡಲಾಗಿದೆ. ಆಯ್ಕೆಯಾದವರ ವಿವರ ಸಾಹಿತ್ಯ ಕ್ಷೇತ್ರದಲ್ಲಿ ಮೇಟಿಕೆರೆ ಹಿರಿಯಣ್ಣ, ಕ್ರೀಡಾ ಕ್ಷೇತ್ರದಲ್ಲಿ ಜಿ.ವಿ.ಜಗನ್ನಾಥ್ (ಜಿಮ್ನಾಸ್ಟಿಕ್ ತರಬೇತಿದಾರರು), ಹೊಳೆನರಸೀಪುರ ತಾ. ಕೋಡಂಗಿಕೊಪ್ಪಲಿನ ಪುಟ್ಟಪ್ಪ ಇವರನ್ನು ಅತ್ಯುತ್ತಮ ಪ್ರಗತಿಪರ ರೈತರೆಂದು ಆಯ್ಕೆ ಮಾಡಲಾಗಿದೆ. ಅತ್ಯುತ್ತಮ ಸೇವೆ ಪರಿಗಣಿಸಿ ಪೌರ ಕಾರ್ಮಿಕ ರಂಗೇಗೌಡರನ್ನು, ಜಾನಪದ ಕಲಾ ಕ್ಷೇತ್ರದಲ್ಲಿ ಗ್ಯಾರಂಟಿ ರಾಮಣ್ಣ, ಸಂಗೀತ ಕ್ಷೇತ್ರದಲ್ಲಿ ಬಿ.ಎನ್.ಎಸ್.ಮುರುಳಿ, ರಂಗಭೂಮಿ ಕ್ಷೇತ್ರದಿಂದ ಎಸ್.ಡಿ.ಹನುಮಂತ, ಪತ್ರಿಕೋದ್ಯಮದಲ್ಲಿ ಟಿವಿ 9 ವರದಿಗಾರ ಜೋಸೆಫ್, ಅತ್ಯುತ್ತಮ ಪೊಲೀಸ್ ಆರ್.ವಿ.ಗಂಗಾಧರಪ್ಪ, ಅತ್ಯುತ್ತಮ ಕಂದಾಯ ನೌಕರರಾಗಿ ಉಪವಿಭಾಗಾಧಿಕಾರಿ ಕಚೇರಿ ವಾಹನ ಚಾಲಕ ಶಿವಾನಂದ ಜೆ.ಇವರನ್ನು ಆಯ್ಕೆ ಮಾಡಲಾಗಿದೆ ಎಂದು ಉಪ ವಿಭಾಗಾಧಿಕಾರಿ ಮತ್ತು ಸನ್ಮಾನ ಸಮಿತಿ ಅಧ್ಯಕ್ಷ ಬಿ.ಶರತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚು ಶಬ್ದದ ಪಟಾಕಿ ನಿಷೇಧ
ಹಾಸನ: ಜಿಲ್ಲಾಡಳಿತ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಉಂಟಾಗುವ ಶಬ್ಧ ಹಾಗೂ ವಾಯು ಮಾಲಿನ್ಯ ನಿಯಂತ್ರಣದಲ್ಲಿಡಲು, ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆಯ ಹಿತದೃಷ್ಟಿಯಿಂದ ಭಾರತ ಸರ್ಕಾರದ ಪರಿಸರ (ಸಂರಕ್ಷಣಾ) ನಿಯಮಾವಳಿ ಅಡಿಯಲ್ಲಿ ನಿಗಧಿಪಡಿಸಿರುವ ಮಾನಕಗಳನ್ನು ಸಾರ್ವಜನಿಕರು ಅನುಸರಿಸಲು ಸೂಚಿಸಲಾಗಿದೆ.
125 ಡೆಸಿಬಲ್ಗಳಿಗಿಂತ ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳ ದಾಸ್ತಾನು, ಮಾರಾಟ ಹಾಗೂ ಉಪಯೋಗಿಸುವುದನ್ನು ನಿಷೇಧಿಸಲಾಗಿದೆ. ರಾತ್ರಿ 10 ಯಿಂದ ಬೆಳಗಿನ ಜಾವ 6 ರವರೆಗೆ ಪಟಾಕಿ ಸಿಡಿಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ. ಗಳಲ್ಲಿ (ಆಸ್ಪತ್ರೆ ಶಾಲೆ, ಪ್ರಾರ್ಥನಾ ಮಂದಿರ ಇತ್ಯಾದಿಗಳು) ಸುತ್ತ ಮುತ್ತ ಶಬ್ಬ ಉಂಟು ಮಾಡುವ ಪಟಾಕಿ ಸಿಡಿಮದ್ದು ಬಳಕೆ ನಿಷೇಧಿಸಲಾಗಿದೆ.