ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ
ಹಾಸನ: ಜಿಲ್ಲಾ ನೆಹರು ಯುವಕೇಂದ್ರವು ತನ್ನ ಪ್ರಸಕ್ತ ಸಾಲಿನ ಮುಖ್ಯ ಕಾರ್ಯಕ್ರಮಗಳಲ್ಲಿ ಒಂದಾದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಅ.31 ರವರೆಗೆ ಅರಸೀಕೆರೆ ತಾಲೂಕಿನಲ್ಲಿ ವ್ಯವಸ್ಥೆಗೊಳಿಸುತ್ತಿದೆ.
ಕಾರ್ಯಕ್ರಮದ ಅನ್ವಯ ನೆಹರು ಯುವ ಕೇಂದ್ರದ ರಾಷ್ಟ್ರೀಯ ಯುವ ದಳ ಕಾರ್ಯಕರ್ತರು ಹಾಗು ಯುವ ನಾಯಕರು ಅರಸೀಕೆರೆ ತಾಲೂಕಿನಲ್ಲಿ ಅಸ್ತಿತ್ವದಲ್ಲಿರುವ ನೋಂದಾಯಿತ ಹಾಗೂ ನೆಹರು ಯುವಕೇಂದ್ರಕ್ಕೆ ಸಂಯೋಜಿಸಲ್ಪಟ್ಟಿರುವ ಸಂಘ ಮಂಡಳಿಗಳಿಗೆ ಭೇಟಿ ನೀಡಿ ಅವುಗಳ ಕಾರ್ಯಚಟವಟಿಕೆ ಸಾಮಾಜಿಕ ಸಮಸ್ಯೆ, ಅಭಿವೃದ್ಧಿ ಕುರಿತಾದ ವಿಷಯಗಳ ಬಗ್ಗೆ ಪದಾಧಿಕಾರಿಗಳೊಂದಿಗೆ ಚರ್ಚಿಸಿ ಯುವ ಜನರ ಸಭೆಯನ್ನು ಅರಸೀಕೆರೆ ತಾಲೂಕು ಹೋಬಳಿ ಕೇಂದ್ರ ಸ್ಥಾನದಲ್ಲಿ ನಡೆಸಲಿದ್ದಾರೆ. ರಾಷ್ಟ್ರೀಯ ಯುವ ದಳ ಕಾರ್ಯಕರ್ತರು ಸಂಘ ಮಂಡಳಿಗಳಿಗೆ ಭೇಟಿ ನೀಡಿದಾಗ ಸಹಕರಿಸಲು ಕೋರಲಾಗಿದೆ.