ಸ್ತ್ರೀವಾದಿ ಸಾಹಿತ್ಯ, ಚಳವಳಿ ಪರಿಚಯಿಸಿದ ಡಾ. ವಿಜಯಾದಬ್ಬೆ
ಹಾಸನ: ಗೊರೂರು ಸಾಹಿತ್ಯ ಪ್ರಶಸ್ತಿ ವಿಜೇತೆ, ಲೇಖಕಿ ಡಾ. ವಿಜಯದಬ್ಬೆ ಸ್ತ್ರೀವಾದಿ ಸಾಹಿತ್ಯ ಮತ್ತು ಸ್ತ್ರೀ ಚಳವಳಿಯನ್ನು ಪರಿಚಯಿಸಿದವರೆಂದು ಮೈಸೂರು ವಿಶ್ವವಿದ್ಯಾಲಯ ಅಂತಾರಾಷ್ಟ್ರೀಯ ಕೇಂದ್ರದ ನಿರ್ದೇಶಕಿ ಡಾ. ಆರ್. ಇಂದಿರಾ ತಿಳಿಸಿದರು.ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಡಾ. ವಿಜಯಾದಬ್ಬೆಯವರ ಜೀವನ-ಸಾಹಿತ್ಯ-ಸಾಧನೆ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ವಿಜಯಾರವರು ಲಿಂಗ ಅಸಮಾನತೆ, ಜೈವಿಕ ವ್ಯವಸ್ಥೆ ಕುರಿತು ಹೊಸ ಆಲೋಚನೆ ಮಾಡುವ ಮೂಲಕ ಪರ್ಯಾಯ ಚಿಂತನೆ ರೂಪಿಸಲು ತಮ್ಮ ಸಹವರ್ತಿ ಮತ್ತು ಶಿಷ್ಯ ವೃಂದವನ್ನು ಬೆಂಬಲವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿದವರು ಎಂದು ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಎಲ್. ಜನಾರ್ದನ್ ಮಾತನಾಡಿ, ವಿಜಯಾರವರು 30ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ಸ್ತ್ರೀ ಪರವಾಗಿ ನಾನಾ ಹೋರಾಟ ಮಾಡಿದರು ಎಂದು ತಿಳಿಸಿದರು. ಕಾಲೇಜಿನ ಪ್ರಾಂಶುಪಾಲ ಎಚ್.ಎನ್. ರೂಪರ್ಜಚಂದನ್,ಚಂದ್ರಮತಿ ಸೊಂದಾ, ಸಹ ಪ್ರಾಧ್ಯಾಪಕಿ ಎಚ್.ಆರ್. ಸುಲೋಚನ, ಕಸಾಪ ಗೌರವ ಕಾರ್ಯದರ್ಶಿ ಗೊರೂರು ಶಿವೇಶ್ ಇತರರು ಇದ್ದರು.