ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಹಲ್ಮಿಡಿ ಉತ್ಸವ ನಡೆಸಲು ಆಗ್ರಹಿಸಿ ನಾಳೆ ಬೈಕ್ ರ್ಯಾಲಿ

Rashmi Kasaragodu
Updated On : 31 Oct 2013, 12:10 pm

ಬೇಲೂರು: ತಾಲೂಕಿನ ಹಲ್ಮಿಡಿ ಗ್ರಾಮದಲ್ಲಿ ಪ್ರತಿ ವರ್ಷ ಹಲ್ಮಿಡಿ ಉತ್ಸವ ನಡೆಸಬೇಕೆಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ  ಬಿ.ಎನ್.ಜಗದೀಶ್ ನೇತೃತ್ವದಲ್ಲಿ ನ.1 ಶುಕ್ರವಾರ ಬೈಕ್ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಲ್ಮಿಡಿ ಗ್ರಾಮದ ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಗ್ರಾಮದಲ್ಲಿ ಜಯಕರ್ನಾಟಕ ಸಂಘಟನೆ ಮತ್ತು ಹಲ್ಮಿಡಿ ಗ್ರಾಮಸ್ಥರ ಮತ್ತು ಸ್ಥಳೀಯ ಯುವಕ ಸಂಘಗಳ ಹಾಗೂ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಹಯೋಗದೊಂದಿಗೆ ಪ್ರತಿ ವರ್ಷ ಹಲ್ಮಿಡಿ ಉತ್ಸವವನ್ನು ಸರ್ಕಾರದ ವತಿಯಿಂದ ನಡೆಸಬೇಕೆಂದು ಒತ್ತಾಯಿಸಲಾಗುವುದು. ಬೇಲೂರಿನ ಶ್ರೀಚನ್ನಕೇಶವಸ್ವಾಮಿ ದೇವಸ್ಥಾನ ಸಮೀಪದಿಂದ ಬೈಕ್ ರ್ಯಾಲಿ ನಡೆಸಲಾಗುವುದು ಎಂದು ಸಂಘಟನೆಯ ಗೌರವ ಅಧ್ಯಕ್ಷ ಕೆ.ಸುದರ್ಶನ್, ತಾಲೂಕು ಅಧ್ಯಕ್ಷ ಅರುಣ್ಕುಮಾರ್, ನಗರಾಧ್ಯಕ್ಷ ಬೋಜೇಗೌಡ, ಜಿಲ್ಲಾ ಉಪಾಧ್ಯಕ್ಷ ಸೋಮೇಶ್ ತಿಳಿಸಿದ್ದಾರೆ.
ರ್ಯಾಲಿಯ ಮೂಲಕ ಪಟ್ಟಣದ ಪ್ರಮುಖ ಬೀದಿಯಲ್ಲಿ ಹೊರಟು ಶಿಲಾ ಶಾಸನದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಹಲ್ಮಿಡಿ ಉತ್ಸವ ನಡೆಸಬೇಕು.
ಕನ್ನಡದ ಪ್ರಥಮ ಶಿಲಾ ಶಾಸನದ ಬಗ್ಗೆ  ಹಾಗೂ ಹಲ್ಮಿಡಿ ಗ್ರಾಮಕ್ಕೆ ಮೂಲಭೂತ ಸೌಲಭ್ಯವನ್ನು ನೀಡಿ ಹಾಗೂ ರಾಜ್ಯದಲ್ಲೇ ಮಾದರಿ ಗ್ರಾಮವನ್ನಾಗಿ ಮಾಡಬೇಕು.
ಕನ್ನಡದ ಪ್ರಥಮ ಶಿಲಾ ಶಾಸನ ದೊರೆತ ಸ್ಥಳವನ್ನು ಬೇಲೂರಿಗೆ ಬರುವ ಪ್ರವಾಸಿಗರು ಹಲ್ಮಿಡಿ ಗ್ರಾಮಕ್ಕೆ ಬರುವುದಕ್ಕೆ ಉತ್ತಮ ರಸ್ತೆ ಸಂಪರ್ಕ ಹಲ್ಮಿಡಿ ಗ್ರಾಮದಲ್ಲಿ  ಪ್ರವಾಸಿಗೃಹ ಹಾಗೂ ಕನ್ನಡದ ಪ್ರಥಮ ಶಿಲಾ ಶಾಸನದ ಬಗ್ಗೆ ಮಾಹಿತಿ ಕೇಂದ್ರವನ್ನು ಸ್ಥಾಪಿಸಬೇಕೆಂದು ಒತ್ತಾಯಿಸಲಾಗುವುದು ಎಂದು ಅವರು ತಿಳಿಸಿದರು.
 ಬೇಲೂರಿನಿಂದ ಹಲ್ಮಿಡಿ ಗ್ರಾಮಕ್ಕೆ ಬೈಕ್ರ್ಯಾಲಿ ಮೂಲಕ ರಾಜ್ಯ ಘಟಕದ ಪದಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಪದಾಧಿಕಾರಿಗಳು ಆಗಮಿಸಿ ಕನ್ನಡ ಧ್ವಜಾರೋಹಣ ನಂತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ನುಡಿದರು.
ಎಲ್ಲಾ ಕನ್ನಡ ಪರ ಸಂಘಟನೆಗಳು, ಸ್ತ್ರೀಶಕ್ತಿ ಸಂಘಗಳು, ಸಾಹಿತಿಗಳು, ಸಾರ್ವಜನಿಕರು, ಕನ್ನಾಡಾಭಿಮಾನಿಗಳು, ಪದಾಧಿಕಾರಿಗಳು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಾಲೂಕು ಜಯಕರ್ನಾಟಕ ಸಂಘಟನೆ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement