ಇಂದು ಹಲವೆಡೆ ಕನ್ನಡ ರಾಜ್ಯೋತ್ಸವ
ಕ.ಪ್ರ.ವಾರ್ತೆ ಹಾಸನ ಅ.31
ಕನ್ನಡ ರಾಜ್ಯೋತ್ಸವ ದಿನಾಚರಣೆ ಸಮಿತಿ ವತಿಯಿಂದ ನ.1ರಂದು ಬೆಳಗ್ಗೆ 8.45ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆ ನಡೆಯಲಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬೆಳಿಗ್ಗೆ 8.45 ಕ್ಕೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭುವನೇಶ್ವರಿ ದೇವಿ ಪೂಜೆ ಹಾಗೂ ಬೆಳಗ್ಗೆ 9 ಗಂಟೆಗೆ ಧ್ವಜಾರೋಹಣ ಹಾಗೂ ರಾಜ್ಯೋತ್ಸವ ಸಂದೇಶ ನೀಡುವರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಗೌರವಾನ್ವಿತ ಉಪಸ್ಥಿತಿ ವಹಿಸುವರು. ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಅಂಬಿಕಾ ರಾಮಣ್ಣ, ಶಾಸಕರಾದ ಎಚ್.ಡಿ. ರೇವಣ್ಣ, ಎಚ್.ಎಸ್.ಪ್ರಕಾಶ್, ಎಚ್.ಕೆ. ಕುಮಾರಸ್ವಾಮಿ, ಸಿ.ಎನ್. ಬಾಲಕೃಷ್ಣ, ಎ.ಮಂಜು, ವೈ.ಎನ್. ರುದ್ರೇಶಗೌಡ ಮತ್ತು ಕೆ.ಎಂ. ಶಿವಲಿಂಗೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಗೋ. ಮಧುಸೂದನ್, ಮರಿತಿಬ್ಬೇಗೌಡ, ಪಟೇಲ್ ಶಿವರಾಂ, ಬಿ.ಬಿ. ಶಿವಪ್ಪ, ನಗರಸಭೆ ಅಧ್ಯಕ್ಷೆ ಎಚ್.ಎಚ್. ಶ್ರೀವಿದ್ಯಾ, ತಾಪಂ ಅಧ್ಯಕ್ಷೆ ರತ್ನ ಹನುಮೇಗೌಡ ಭಾಗವಹಿಸಲಿದ್ದಾರೆ.