ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಎಮ್ಮೆ ಮೇಯಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರ

Rashmi Kasaragodu
Updated On : 31 Oct 2013, 11:25 am

ಹೊಳೆನರಸೀಪುರ: ಹೊಲದ ಬಳಿಯಲ್ಲಿ ಎಮ್ಮೆ ಮೇಯಿಸುತ್ತಿದ್ದ ಯುವತಿ ಮೇಲೆ ಅದೇ ಗ್ರಾಮದ ಯುವಕನೊಬ್ಬ ಅತ್ಯಾಚಾರ ನಡೆಸಿರುವ ಪ್ರಕರಣವೊಂದು ತಾಲೂಕಿನ ಬಂಡಿಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ. ಬಂಡಿಶೆಟ್ಟಿಹಳ್ಳಿ ಗ್ರಾಮದ ಯುವತಿಯ ಮೇಲೆ ಅದೇ ಗ್ರಾಮದ ಗಂಗ ಎಂಬಾತ  ಯುವತಿಯು ಎಮ್ಮೆ ಮೇಯಿಸುತ್ತಿದ್ದ ಸಂದರ್ಭದಲ್ಲಿ, ಯುವತಿಯ ಮೇಲೆರಗಿ ಬುಧವಾರದಂದು ಅತ್ಯಾಚಾರ ಎಸಗಿದ್ದು, ಸ್ಥಳಕ್ಕೆ ಬಂದ ಯುವತಿಯ ತಾಯಿ ಘಟನೆಯನ್ನು ಕಂಡು ಕೂಗಿಕೊಂಡಾಗ ಯುವಕ ಅಲ್ಲಿಂದ ಪರಾರಿಯಾಗಿರುವುದಾಗಿ ವರದಿಯಾಗಿದೆ. ಕೂಡಲೇ ಈ ವಿಷಯವನ್ನು ಯುವತಿಯ ಪೋಷಕರು ಗ್ರಾಮದಲ್ಲಿ ಆರೋಪಿ ಯುವಕನ ಕುಟುಂಬದವರಿಗೆ ಈ ವಿಷಯ ತಿಳಿಸಿ, ಈ ಕೃತ್ಯದ ಕುರಿತಂತೆ ಗ್ರಾಮಸ್ಥರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಗ್ರಾಮದಲ್ಲಿನ ಪಂಚಾಯ್ತಿಯಲ್ಲಿ ಈ ವಿಷಯ ಇತ್ಯರ್ಥವಾಗದೇ, ಅತ್ಯಾಚಾರಕ್ಕೊಳಗಾದ ಯುವತಿಯು ಗುರುವಾರ ಅಸ್ವಸ್ಥಗೊಂಡ ಕಾರಣದಿಂದಾಗಿ ತಡವಾಗಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಯುವತಿಯನ್ನು ದಾಖಲಿಸಿ, ನಂತರದಲ್ಲಿ ಇಲ್ಲಿನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement